

ಮುಂಬೈ: ಸೌತ್ ಬ್ಯೂಟಿ ಸಮಂತಾ ರುತ್ ಪ್ರಭು(Samantha Ruth Prabhu) ಅವರು ಇತ್ತೀಚೆಗೆ ಸಿನಿಮಾಗಿಂತಲೂ ವೈಯಕ್ತಿಕ ವಿಚಾರಕ್ಕೆ ಹೆಚ್ಚು ಸುದ್ದಿಯಲ್ಲಿರುತ್ತಾರೆ. ವೈಯಕ್ತಿಕ ಜೀವನದಲ್ಲಿನ ವಿಚ್ಛೇದನದಿಂದ ಅನಾರೋಗ್ಯದವರೆಗೆ ವಿಷಯಗಳಲ್ಲಿ ಹೆಚ್ಚು ಟ್ರೋಲ್ಗೆ ಒಳಗಾಗಿದ್ದಾರೆ. ಕೆಲವೊಂದು ವಿಚಾರಕ್ಕೆ ಪ್ರತಿಕ್ರಿಯಿಸಿದರು ಮತ್ತೆ ಕೆಲವು ವಿಚಾರಕ್ಕೆ ಸಮಂತಾ ಸ್ಪಂದಿಸುವುದಿಲ್ಲ. ಸದ್ಯ ಸಮಂತಾ ಡೇಟಿಂಗ್ ವಿಚಾರ ಸಿನಿಅಂಗಳದಲ್ಲಿ ಹರಿದಾಡುತ್ತಿದೆ.
ಸಮಂತಾ ರುತ್ ಪ್ರಭು 2017ರಲ್ಲಿ ಟಾಲಿವುಡ್ ನಟ ನಾಗ ಚೈತನ್ಯ ಅವರನ್ನು ವಿವಾಹವಾದರು. ಆದರೆ ಅವರು 2021ರಲ್ಲಿ ವಿಚ್ಛೇದನ ಪಡೆದರು. ಇತ್ತೀಚೆಗೆ ಸೋಭಿತಾ ಧೂಳಿಪಾಲ ಅವರನ್ನು ನಾಗ ಚೈತನ್ಯ ವಿವಾಹವಾದರು. ವಿಚ್ಛೇದನದ ನಂತರ ಸಮಂತಾ ಅವರ ಜೀವನದಲ್ಲಿ ಅನೇಕ ಬದಲಾವಣೆಗಳು ಸಂಭವಿಸಿವೆ. ಸದ್ಯ ನಟಿ ಹೊಸ ಪ್ರೀತಿಯನ್ನು ಕಂಡುಕೊಂಡಿದ್ದಾರೆ ಎಂಬ ಸುದ್ದಿ ಹರಡಲು ಪ್ರಾರಂಭಿಸಿದೆ. ಕೆಲವು ಸಮಯದ ಹಿಂದೆ ಅವರು ನಿರ್ದೇಶಕರ ಜತೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳು ಕೂಡ ಕಾಡ್ಗಿಚ್ಚಿನಂತೆ ಹಬ್ಬಿತ್ತು. ಆದರೆ ಸಮಂತಾ ಅಥವಾ ಆ ನಿರ್ದೇಶಕ ಈ ವಿಷಯದ ಬಗ್ಗೆ ಬಹಿರಂಗವಾಗಿ ಪ್ರತಿಕ್ರಿಯಿಸಲಿಲ್ಲ.
ಇತ್ತೀಚೆಗೆ ಸಮಂತಾ ರುತ್ ಪ್ರಭು ಮೊದಲ ಬಾರಿಗೆ ಕ್ರೀಡಾ ಸಮಾರಂಭದಲ್ಲಿ ಕಾಣಿಸಿಕೊಂಡರು. ಅದು ಸಹ ನಿರ್ದೇಶಕ ರಾಜ್ ನಿಡಿಮೋರು ಅವರೊಂದಿಗೆ. ಪಿಕಲ್‌ಬಾಲ್ ಪಂದ್ಯಾವಳಿಯ ಸಮಯದಲ್ಲಿ ಸಮಂತಾ ತನ್ನ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಪೋಸ್ಟ್ ಮಾಡುವ ಮುನ್ನ ಸುದೀರ್ಘವಾಗಿ ತನ್ನ ಕ್ರೀಡಾ ಪ್ರಯಾಣದ ಬಗ್ಗೆ ಬರೆದಿದ್ದಾರೆ.
‘ಕ್ರೀಡಾ ಜಗತ್ತಿನಲ್ಲಿ ನನ್ನ ಮೊದಲ ಹೆಜ್ಜೆ - ಎಲ್ಲಾ ವಿಷಯದಲ್ಲೂ ಪಿಕಲ್‌ಬಾಲ್ ನನಗೆ ಅತ್ಯಂತ ಪರಿವರ್ತನೆಯಾಗಿದೆ! ನಾನು ಯಾವಾಗಲೂ ಕ್ರೀಡೆಯಿಂದ ದೂರವಿದ್ದ ಕಾರಣ ನಾನು ಇಲ್ಲಿಗೆ ಬರಲು ತುಂಬಾ ಹಿಂಜರಿಯುತ್ತಿದ್ದೆ. ನಾನು ಕಳೆದುಕೊಳ್ಳಲು ಅಥವಾ ಸೋಲಿನ ಭಯದಲ್ಲಿದ್ದೆ ಎಂದು ಉಲ್ಲೇಖಿಸಿದ್ದಾರೆ.
ಸಮಂತಾ ರುತ್ ಪ್ರಭು ಅವರು ಈವೆಂಟ್‌ನಲ್ಲಿ ತಮ್ಮ ತಂಡದ ಬಗ್ಗೆ ಮಾತನಾಡಿದ್ದಾರೆ. ಅವರು ಈಗ ಚೆನ್ನೈ ಸೂಪರ್ ಚಾಂಪ್ಸ್ನ ಮಾಲೀಕರಾಗಿದ್ದಾರೆ. ತಮ್ಮ ತಂಡವನ್ನು ಶ್ಲಾಘಿಸಿದ ಅವರು, ಈ ಪ್ರಕ್ಷುಬ್ಧ ಪ್ರಯಾಣದಲ್ಲಿ ರಾಜ್ ಮತ್ತು ಹಿಮಾಂಕ್ ಜತೆಗಿರುವುದು ತುಂಬಾ ಸಂತೋಷವಾಗಿದೆ ಎಂದು ಹೇಳಿದರು. ಸಮಂತಾ ರಾಜ್ರನ್ನು ಶ್ರೇಷ್ಠ ತಂಡದ ಸಹ ಆಟಗಾರ ಎಂದು ಹೇಳಿದ್ದಾರೆ.
ಸಮಂತಾ ಅವರ ಪೋಸ್ಟ್ ಕ್ರೀಡೆ ಕುರಿತಾದರೂ ಅದರಲ್ಲಿ ಹೆಚ್ಚು ಗಮನ ಸೆಳೆದದ್ದು ಅವರ ಮತ್ತು ರಾಜ್ ನಿಡಿಮೋರು ಅವರ ಫೋಟೋ. ಅದರಲ್ಲಿ ಅವರು ರಾಜ್ ಅವರ ಕೈಹಿಡಿದಿದ್ದಾರೆ. ಈ ಫೋಟೋ ಮತ್ತೆ ಇಬ್ಬರ ನಡುವೆ ಡೇಟಿಂಗ್ ವದಂತಿಗಳನ್ನು ಉತ್ತೇಜಿಸುತ್ತಿದೆ.
ಸಿಟಾಡೆಲ್ ಹನಿ ಬನ್ನಿ ಚಿತ್ರದ ಶೂಟಿಂಗ್ ಸಮಯದಲ್ಲಿ ಸಮಂತಾ ಮತ್ತು ರಾಜ್ ಡೇಟಿಂಗ್ ವದಂತಿಗಳು ಮೊದಲು ಬೆಳಕಿಗೆ ಬಂದವು. ಈ ಸರಣಿಯನ್ನು ರಾಜ್ ನಿರ್ದೇಶಿಸಿದ್ದು, ಇದರಲ್ಲಿ ಸಮಂತಾ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದಾರೆ. ಇಬ್ಬರ ನಡುವಿನ ಕೆಮಿಸ್ಟ್ರಿ ಜನರ ಮನಸ್ಸಿನಲ್ಲಿ ಪ್ರಶ್ನೆಗಳನ್ನು ಹುಟ್ಟುಹಾಕಿತು. ಆದರೆ ಇಲ್ಲಿಯವರೆಗೆ ಯಾರೂ ಅವರ ಸಂಬಂಧದ ಬಗ್ಗೆ ಯಾವುದೇ ದೃಢೀಕರಣ ಅಥವಾ ನಿರಾಕರಣೆ ಮಾಡಿಲ್ಲ.
ಸದ್ಯಕ್ಕೆ ಸಮಂತಾ ಮತ್ತು ರಾಜ್ ಅವರ ಸಂಬಂಧದ ಸ್ಥಿತಿಯ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ಇಲ್ಲ. ಆದರೆ ಇಬ್ಬರ ನಡುವಿನ ಕೆಮಿಸ್ಟ್ರಿ ಮತ್ತು ಸಾಮಾಜಿಕ ಜಾಲತಾಣದಲ್ಲಿನ ಪೋಸ್ಟ್‌ಗಳು ಈ ವದಂತಿಗಳನ್ನು ಮತ್ತಷ್ಟು ಬಲಪಡಿಸಿದೆ. ಈಗ ಸಮಂತಾ ಮತ್ತು ರಾಜ್ ತಮ್ಮ ಸಂಬಂಧವನ್ನು ಸಾರ್ವಜನಿಕವಾಗಿ ಒಪ್ಪಿಕೊಳ್ಳುತ್ತಾರೆಯೇ ಅಥವಾ ಇಲ್ಲವೇ ಎಂಬುದನ್ನು ನೋಡಬೇಕಿದೆ.(ಏಜೆನ್ಸೀಸ್)