ಹುಡುಗನ ತರ ಬದಲಾದ ಸಮಂತಾ!; ಸ್ಯಾಮ್​​ ನ್ಯೂ ಲುಕ್​​ಗೆ ಫ್ಯಾನ್ಸ್​ ಫಿದಾ | Actress Samantha

dk (81) (1)
Published on

Actress Samantha: ಕಳೆದ ಒಂದು ವರ್ಷದಿಂದ ಆನಾರೋಗ್ಯ ಸಮಸ್ಯೆಯಿಂದಾಗಿ ತಮ್ಮ ಕೆಲಸಗಳಿಗೆ ತಾತ್ಕಾಲಿಕ ಬ್ರೇಕ್ ಕೊಟ್ಟಿದ್ದ ಟಾಲಿವುಡ್ ಬ್ಯೂಟಿ ಸಮಂತಾ ರುತು ಪ್ರಭು ಇದೀಗ ತಮ್ಮ ಹೊಸ ಲುಕ್​ನೊಂದಿಗೆ ಕಾಣಿಸಿಕೊಂಡಿದ್ದು, ನಟಿ ಹಂಚಿಕೊಂಡಿರುವ ಪೋಟೋಗಳು ಸೋಷಿಯಲ್​​ ಮೀಡಿಯಾದಲ್ಲಿ ಸಖತ್​ ವೈರಲ್​ ಆಗುತ್ತಿವೆ.

ಹೌದು, ಸಮಂತಾ ಆರೋಗ್ಯ ಸಮಸ್ಯೆಯಿಂದ ಚೇತರಿಕೆ ಕಂಡಿದ್ದು, ಮತ್ತೆ ಸಿನಿಮಾಗಳಲ್ಲಿ ನಟಿಸಲು ನಟಿ ರೆಡಿಯಾಗಿದ್ದಾರೆ ಎಂದು ಹೇಳಲಾಗಿದೆ. ಇದಕ್ಕೆ ಪುಷ್ಠಿ ನೀಡುವಂತೆ ಇದೀಗ ಹೊಸ ಲುಕ್​ನಲ್ಲಿ ಈ ತೆಲುಗು ನಟಿ ಕಾಣಿಸಿಕೊಂಡಿದ್ದಾರೆ. ಇದರ ಮಧ್ಯೆ ಇತ್ತೀಚಿಗೆ ಸಂದರ್ಶನವೊಂದರಲ್ಲಿ ಕಾಣಿಸಿಕೊಂಡ ನಟಿ, ಅಭಿಮಾನಿಗಳಿಗೊಸ್ಕರ ಮತ್ತೆ ಸಿನಿಮಾ ಮಾಡುತ್ತೇನೆ. ಅಲ್ಲದೆ, ಚಾಲೆಂಜಿಗ್​ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತೇನೆ ಎಂದು ಹೇಳಿದ್ದರು.

ಹೊಸ ಲುಕ್​ನಲ್ಲಿ ಕಾಣಿಸಿಕೊಂಡಿರುವ ಸ್ಯಾಮ್​, ಇನ್​ಸ್ಟಾಗ್ರಾಮ್​ನಲ್ಲಿ ಪೋಸ್ಟ್​ ತನ್ನ ಪೋಟೋಗಳನ್ನು ಹಂಚಿಕೊಂಡಿದ್ದು, ಪೋಟೊಗಳಲ್ಲಿ ಕಾಣಿಸಿಕೊಂಡಿರುವ ನಟಿ ಸಮಂತಾ ಹುಡುಗಿ ತರ ಅಲ್ಲ, ಹುಡುಗನ ತರ ಕಾಣಿಸಿಕೊಂಡಿದ್ದಾರೆ ಎಂದು ನೆಟಿಜನ್​ ತರೇಹವಾರಿ ಕಾಮೆಂಟ್​ ಮಾಡುತ್ತಿದ್ದಾರೆ.

ಕೆಲವರು ಫೋಟೋಗಳನ್ನು ನೋಡಿ ಸಮಂತಾ ಇಂಡಿಯನ್​ ಸಿನಿಮಾಗಳಿಗೆ ಅಲ್ಲ, ಹಾಲಿವುಡ್​ ಸಿನಿಮಾಕ್ಕೆ ತಯಾರಿ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

ಒಂದೆಡೆ ತಮ್ಮ ಆರೋಗ್ಯವನ್ನು ಮತ್ತು ಮತ್ತೊಂದೆಡೆ ವ್ಯವಹಾರವನ್ನು ನೋಡಿಕೊಳ್ಳುವುದರಲ್ಲಿ ಬಿಜಿಯಾಗಿರುವ ಸಮಂತಾ, ಹೊಸ ಹೊಸ ವಿಷಯಗಳನ್ನು ಹೇಳುವ ಪಾಡ್‌ಕ್ಯಾಸ್ಟ್‌ಗಳ ಜತೆ ಜತೆಯಲ್ಲೇ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net