ನಾಗ ಚೈತನ್ಯ- ಸಮಂತಾ ಬೇರೆಯಾಗಲು Ktr ಕಾರಣ! ಬಯಲಾಯ್ತು ಶಾಕಿಂಗ್​ ವಿಚಾರ : Samantha Breakup Reason

Samantha
Published on

 ಹೈದ್ರಾಬಾದ್​:  ಟಾಲಿವುಡ್ ನಟ ನಾಗ ಚೈತನ್ಯ ಮತ್ತು ಸಮಂತಾ ವಿಚ್ಛೇದನಕ್ಕೆ ಕೆಟಿಆರ್ ( Ktr ) ಕಾರಣ ( Samantha Breakup Reason ) ಎಂದು ತೆಲಂಗಾಣ ಸಚಿವೆ ಕೊಂಟ ಸುರೇಖಾ ಆರೋಪ ಮಾಡಿದ್ದಾರೆ.

Samantha Chaithanya

ಬಾಪುಘಾಟ್‌ನಲ್ಲಿ ಗಾಂಧಿ ಜಯಂತಿಯಂದು ನಡೆದ ಮಾಧ್ಯಮಗೋಷ್ಠಿಯಲ್ಲಿ ತೆಲಂಗಾಣ ಸಚಿವೆ ಕೊಂಡಾ ಸುರೇಖಾ ಅವರು ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ಕಾರ್ಯಾಧ್ಯಕ್ಷ ಕೆಟಿಆರ್ ವಿರುದ್ಧ ಆಘಾತಕಾರಿ ಆರೋಪಗಳ ಮೂಲಕ ರಾಜಕೀಯ ಕಿಡಿ ಹೊತ್ತಿಸಿದರು.

ಸಿನಿಮಾದಲ್ಲಿ ಜೋಡಿಯಾಗಿದ್ದ ನಾಗ ಚೈತನ್ಯ ಹಾಗೂ ಸಮಂತಾ ನಿಜ ಜೀವನದಲ್ಲೂ ಜೋಡಿಯಾಗಿರುವುದು ಗೊತ್ತೇ ಇದೆ. ಮೊದಲ ಸಿನಿಮಾದ ನಂತರ ಪ್ರೀತಿಯಲ್ಲಿ ಬಿದ್ದ ಇಬ್ಬರು ಕೆಲ ವರ್ಷಗಳ ಕಾಲ ಗುಟ್ಟಾಗಿ ಪ್ರೀತಿಸುತ್ತಿದ್ದರು. ಆ ನಂತರ ಅವರು ಮದುವೆಯಾದರು.

ಈ ಜೋಡಿಯನ್ನು ನೋಡಿ ಎಷ್ಟು ಜೋಡಿಗಳು ಪ್ರೀತಿಯಲ್ಲಿ ಬಿದ್ದಿದ್ದಾರೋ ಗೊತ್ತಿಲ್ಲ..ಎಷ್ಟು ಮಂದಿಗೆ ಹೊಟ್ಟೆಕಿಚ್ಚು ಮೂಡಿತೋ ಗೊತ್ತಿಲ್ಲ..ದಾಂಪತ್ಯದಲ್ಲಿ ಹಲವು ಕಲಹಗಳು.. ಕೊನೆಗೂ ವಿಚ್ಛೇದನ ಪಡೆದಿದ್ದಾರೆ. ಇಬ್ಬರೂ ವಿಚ್ಛೇದನದ ಕಾರಣವನ್ನು ಅವರು ಹೇಳದಿದ್ದರೂ, ಅಭಿಮಾನಿಗಳು ಈ ಬಗ್ಗೆ ವಿವಿಧ ರೀತಿಯಲ್ಲಿ ಮಾತನಾಡಿದ್ದಾರೆ.ಈ ವೇಳೆ ಸಚಿವೆ ಕೊಂಡ ಸುರೇಖಾ ಸೆನ್ಸೇಷನಲ್ ಕಾಮೆಂಟ್ ಮಾಡಿ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ.

ಬಾಪುಘಾಟ್‌ನಲ್ಲಿ ನಡೆದ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ, ಟಾಲಿವುಡ್ ರಿಯಲ್ ಲೈಫ್ ಜೋಡಿ ನಾಗ ಚೈತನ್ಯ ಮತ್ತು ಸಮಂತಾ ತಮ್ಮ ವಿಚ್ಛೇದನಕ್ಕೆ ಕೆಟಿಆರ್ ಕಾರಣ ಎನ್ನಲಾಗುತ್ತಿದೆ ನಾನು ಇದನ್ನು ಬಹಿರಂಗವಾಗಿ ಹೇಳುತ್ತಿದ್ದೇನೆ. ಕೆಟಿಆರ್ ಅವರು ಸಚಿವರಾಗಿದ್ದ ಅವಧಿಯಲ್ಲಿ ಹಲವು ಸಿನಿಮಾ ನಾಯಕಿಯರ ಜೀವನದೊಂದಿಗೆ ಆಟವಾಡಿದ್ದಾರೆ, ನಾಯಕಿಯರ ಫೋನ್ ಕದ್ದಾಲಿಕೆ ಮಾಡಿ ನಾಯಕಿಯರನ್ನು ಡ್ರಗ್ಸ್ ಚಟಕ್ಕೆ ಸಿಲುಕಿಸಿ ಅವರ ಜೀವನವನ್ನೇ ನಾಶ ಮಾಡಿದ್ದಾರೆ. ನಾಯಕಿಯರು ಬೇಗ ಮದುವೆಯಾಗದೇ ಇರಲು ಕಾರಣ ಕೆಟಿಆರ್. ಕೆಟಿಆರ್ ನಾಯಕಿಯರ ಜೀವನ ಹಾಳು ಮಾಡಿದ್ದು ಟಾಲಿವುಡ್ ನ ಹಿರಿಯರೆಲ್ಲರಿಗೂ ಗೊತ್ತು ಎಂದು ಸಾಲುಸಾಲು ಆರೋಪ ಮಾಡಿ ಆಕ್ರೋಶ ಹೊರ ಹಾಕಿದ್ದಾರೆ.

‘ಎನ್ ಕನ್ವೆನ್ಷನ್​ ಕಟ್ಟಡ ಒಡೆಯಬಾರದು ಎಂದರೆ ಸಮಂತಾಳನ್ನು ನನ್ನ ಬಳಿ ಕಳಿಸಿ ಎಂದು ನಾಗಾರ್ಜುನಗೆ ಕೆ.ಟಿ. ರಾಮ ರಾವ್ ಹೇಳಿದ್ದರು. ಕೆ.ಟಿ. ರಾಮ ರಾವ್ ಬಳಿ ಹೋಗು ಎಂದು ಸಮಂತಾಗೆ ನಾಗಾರ್ಜನ ಒತ್ತಾಯ ಮಾಡಿದರು. ಆದರೆ ಸಮಂತಾ ಒಪ್ಪಿಕೊಳ್ಳಲಿಲ್ಲ. ಒಪ್ಪದಿದ್ದರೆ ಮನೆ ಬಿಟ್ಟುಹೋಗು ಎಂದು ನಾಗಾರ್ಜುನ ಹೇಳಿದರು. ಅದಕ್ಕಾಗಿ ನಾಗ ಚೈತನ್ಯಗೆ ಸಮಂತಾ ಡಿವೋರ್ಸ್​ ನೀಡಿದರು’ ಎಂದು ಕೊಂಡ ಸುರೇಖಾ ಹೇಳಿದ್ದಾರೆ.

Samantha

ಕೆಟಿಆರ್ ಪ್ರತಿಕ್ರಿಯೆ: ಸುರೇಖಾ ಅವರ ಸಂವೇದನಾಶೀಲ ಆರೋಪಕ್ಕೆ ಪ್ರತಿಕ್ರಿಯಿಸಿದ ಕೆಟಿಆರ್, ಆಕ್ರೋಶ ವ್ಯಕ್ತಪಡಿಸಿದ್ದಾರೆ. "ನಮಗೆ ಸಂಬಂಧವಿಲ್ಲದ ವಿಷಯಗಳ ಬಗ್ಗೆ ಕೊಂಡಾ ಸುರೇಖಾ ಹೇಳುತ್ತಿದ್ದಾರೆ" ಎಂದು ಅವರು ಟೀಕಿಸಿದರು, ನಾನು ನಾಯಕಿಯರ ಫೋನ್‌ಗಳನ್ನು ಕದ್ದಾಲಿಕೆ ಮಾಡುತ್ತಿದ್ದೇನೆ ಎಂದು ಅವಳು ಹೇಳಲಿಲ್ಲವೇ? ನನಗೆ ಕುಟುಂಬ, ಹೆಂಡತಿ ಮತ್ತು ಮಕ್ಕಳಿದ್ದಾರೆ." ತಮ್ಮ ರಾಜಕೀಯ ಪ್ರತಿಸ್ಪರ್ಧಿಗಳು ತಮ್ಮ ಲಾಭಕ್ಕಾಗಿ ಪರಿಸ್ಥಿತಿಯನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಕೆಟಿಆರ್ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net