ಸ್ಯಾಮ್ ತನ್ನ ಪ್ರಶಸ್ತಿಯನ್ನು ಸ್ವೀಕರಿಸಲು ಮತ್ತು ಪ್ರಶಸ್ತಿ ಸಮಾರಂಭದಲ್ಲಿ ಭಾಗವಹಿಸಲು ಈಗ ಮುಂಬೈಗೆ ಹೋಗಿದ್ದಾರೆ. ನಟಿ ಪಡೆದಿರುವ ಫಿಲ್ಮ್‌ಫೇರ್ ಪ್ರಶಸ್ತಿಗಳಲ್ಲಿ ಇದು ಅವರ ಐದನೇ ಫಿಲ್ಮ್‌ಫೇರ್ ಪ್ರಶಸ್ತಿ. ಇದರ ಬಗ್ಗೆ, ತಮ್ಮ ಇನ್ಸ್ಟಾಗ್ರಾಮ್ ಪೇಜ್ ನಲ್ಲಿ ಹಂಚಿಕೊಂಡಿದ್ದಾರೆ ಅಭಿಮಾನಿಗಳ ಪ್ರೀತಿಯ ಸ್ಯಾಮ್. ಈ ಹಿಂದೆ ಸಮಂತಾ ಅವರು 'ಯೇಮ್ ಮಾಯಾ ಚೇಸಾವೆ' ಸಿನಿಮಾಗೆ 'ಅತ್ಯುತ್ತಮ ನಟಿಯಾಗಿ' ಫಿಲ್ಮ್‌ಫೇರ್ ಪ್ರಶಸ್ತಿಯನ್ನು ಗೆದ್ದಿದ್ದು, 'ಈಗಾ', 'ನೀತಾನೆ ಎನ್ ವಸಂತಂ', 'ಅ, ಆಆ' ಚಿತ್ರಗಳಿಗೂ ಅತ್ಯುತ್ತಮ ನಟಿ ಎಂದು ಒಟ್ಟು ಐದು ಬಾರಿ ಫಿಲ್ಮ್‌ಫೇರ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.