Salman Khan 'ರೇಸ್ 4' ನಿಂದ ಬ್ಯಾಡ್ ಬಾಯ್ ಔಟ್​.. ಹೀರೋ ಆದ ಸ್ಟಾರ್​ನಟ ಯಾರು ಗೊತ್ತಾ?

Salman Khan
Published on

ನವದೆಹಲಿ: ಬಾಲಿವುಡ್​ನ ಅದ್ಭುತ ಚಲನಚಿತ್ರ ರೇಸ್‌ - 4 ಬಗ್ಗೆ ಅಭಿಮಾನಿಗಳಲ್ಲಿ ಹೈಪ್ ಇದೆ. ಮುಂಬರುವ ಈ ಚಿತ್ರದಪಾತ್ರವರ್ಗಕ್ಕೆ ಸಂಬಂಧಿಸಿದಂತೆ ಹಲವು ಕಥೆಗಳು ಕೇಳಿ ಬರುತ್ತಿದ್ದವು. ಆದರೆ ಈ ಬಗ್ಗೆ ಹೊರಬಿದ್ದಿರುವ ಮಾಹಿತಿ ತಿಳಿದರೆ ಸಲ್ಮಾನ್ ಖಾನ್(Salman Khan) ಅಭಿಮಾನಿಗಳು ಶಾಕ್ ಆಗಬಹುದು.

ರೇಸ್ 4 ರಿಂದ ಸಲ್ಮಾನ್ ಕಾರ್ಡ್ ಕಟ್ ಆಗಿದ್ದು, ಚಿತ್ರದ ನಿರ್ಮಾಪಕರು ಬಹಿರಂಗಪಡಿಸಿದ್ದಾರೆ. ಈಗ ರೇಸ್ 4 ರಲ್ಲಿ ಯಾರು ಹೀರೋ ಆಗಲಿದ್ದಾರೆ ಎಂಬುದನ್ನೂ ಅವರು ತಿಳಿಸಿದ್ದಾರೆ.

ಸಲ್ಮಾನ್ ಖಾನ್ ಅಭಿನಯದ ರೇಸ್ 3 ಚಿತ್ರವು 2018 ರಲ್ಲಿ, ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ಚಿತ್ರದಲ್ಲಿ ಸಲ್ಮಾನ್ ಸಿಕಂದರ್ ಪಾತ್ರವನ್ನು ನಿರ್ವಹಿಸಿದ್ದಾರೆ. ಅವರಲ್ಲದೆ, ಬಾಬಿ ಡಿಯೋಲ್ ಮತ್ತು ಅನಿಲ್ ಕಪೂರ್ ಅವರಂತಹ ಅನೇಕ ನಟರು ಈ ಮೂರನೇ ಭಾಗದಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಆದರೆ ಈಗ ರೇಸ್ 4 ರಲ್ಲಿ ಸಲ್ಮಾನ್ ಖಾನ್ ಕಾಣಿಸಿಕೊಳ್ಳುವುದಿಲ್ಲ ಎಂಬ ಸುದ್ದಿ ಹೊರಬಿದ್ದಿದೆ.

ರೇಸ್ ಫ್ರ್ಯಾಂಚೈಸ್ ನಿರ್ಮಾಪಕ ರಮೇಶ್ ತುರಾನಿ ಸಂವಾದವೊಂದರಲ್ಲಿ ರೇಸ್ 4 ಪಾತ್ರವರ್ಗದ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದಾರೆ. ರೇಸ್ 2 ರವರೆಗೆ ತಮ್ಮ ಬಲವಾದ ನಟನೆಯಿಂದ ಪ್ರೇಕ್ಷಕರನ್ನು ಆಕರ್ಷಿಸಿದ ಸೈಫ್ ಅಲಿ ಖಾನ್ ರೇಸ್ 4ಕ್ಕೆ ಮರಳುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

ಸೈಫ್ ಅಲಿ ಖಾನ್ ಇಂಡಸ್ಟ್ರಿಯ ಅತ್ಯಂತ ಯಶಸ್ವಿ ಸ್ಟಾರ್ ಎಂಬುದು ತಿಳಿದ ಸಂಗತಿಯೇ. ಅವರು 90 ರ ದಶಕದಿಂದ ತಮ್ಮ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ರೇಸ್ 4 ರನಲ್ಲಿ ಸೈಫ್ ಅಲಿ ಖಾನ್ ಮಾತ್ರವಲ್ಲದೆ ನಟ ಸಿದ್ಧಾರ್ಥ್ ಮಲ್ಹೋತ್ರಾ ಎರಡನೇ ನಾಯಕ ನಟನಾಗಿ ನಟಿಸಬಹುದು ಎಂದು ಹೇಳಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net