ಜೈಲಿನಲ್ಲಿ ಶೌಚಾಲಯ ಸ್ವಚ್ಛಗೊಳಿಸಿದ್ದನ್ನು ನೆನಪಿಸಿಕೊಂಡ ಸಲ್ಮಾನ್ ಖಾನ್

Salman Khan
Published on

ಮುಂಬೈ: ಬಾಲಿವುಡ್ ಸ್ಟಾರ್ ಹೀರೋ ಸಲ್ಮಾನ್ ಖಾನ್ ಸದ್ಯ ಸರಣಿ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾ ಮಾಡುತ್ತಲೇ ಜಾಹೀರಾತು, ಟಿವಿ ಶೋಗಳನ್ನೂ ಮಾಡುತ್ತಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಅನ್ನು ಸಲ್ಮಾನ್ ಹೋಸ್ಟ್ ಮಾಡುತ್ತಿದ್ದಾರೆ.

ಪ್ರಸ್ತುತ, ಸಲ್ಮಾನ್ ಖಾನ್ ಒಟಿಟಿ ಬಿಗ್ ಬಾಸ್ ಅನ್ನು ಸಹ ಹೋಸ್ಟ್ ಮಾಡುತ್ತಿದ್ದಾರೆ. ಇತ್ತೀಚಿನ ಹಿಂದಿ OTT ಬಿಗ್ ಬಾಸ್ ಶೋ ಮುಗಿದಿದೆ. ಯೂಟ್ಯೂಬರ್ ಎಲ್ವಿಶ್ ಯಾದವ್ ಈ ಬಾರಿಯ ಬಿಗ್ ಬಾಸ್ ಟ್ರೋಫಿಯನ್ನು ಗೆದ್ದಿದ್ದಾರೆ.

ಗ್ರ್ಯಾಂಡ್ ಫಿನಾಲೆಯ ಸಮಯದಲ್ಲಿ ಸಲ್ಮಾನ್ ಖಾನ್ , ಯಾವುದೇ ಕೆಲಸ ಚಿಕ್ಕದಲ್ಲ ಅಥವಾ ದೊಡ್ಡದಲ್ಲ ಎಂದು ಹೇಳಿದರು. ಜೈಲು ಮತ್ತು ಬೋರ್ಡಿಂಗ್ ಶಾಲೆಯಲ್ಲಿ ಶೌಚಾಲಯಗಳನ್ನು ಸ್ವಚ್ಛಗೊಳಿಸಿದ ಸಮಯವನ್ನು ನೆನಪಿಸಿಕೊಂಡಿದ್ದಾರೆ.

ಬಿಗ್ ಬಾಸ್ ಫೈನಲಿಸ್ಟ್ ಗಳಲ್ಲಿ ಸ್ಪರ್ಧಿ ಪೂಜಾ ಭಟ್ ಅವರನ್ನು ಶ್ಲಾಘಿಸುವಾಗ, ಮನೆಯನ್ನು ಸ್ವಚ್ಛವಾಗಿಡಬೇಕು. ನಾನು ಓದುತ್ತಿದ್ದಾಗ ವಸತಿ ಶಾಲೆಯಲ್ಲಿ ಶೌಚಾಲಯಗಳನ್ನು ಸ್ವಚ್ಛಗೊಳಿಸುತ್ತಿದ್ದೆ. ಇದಾದ ನಂತರ ಜೈಲಿನಲ್ಲಿದ್ದಾಗ ಶೌಚಾಲಯಗಳನ್ನೂ ಸ್ವಚ್ಛಗೊಳಿಸಿದ್ದೆ. ನಮ್ಮ ಕೆಲಸ ಮಾಡುವುದರಲ್ಲಿ ತಪ್ಪಿಲ್ಲ. ಯಾವ ಕಾರ್ಯವೂ ಕಡಿಮೆ ಅಲ್ಲ. ಅದಕ್ಕಾಗಿ ನಾವು ಆತಂಕ ಪಡುವ ಅಗತ್ಯವಿಲ್ಲ ಎಂದು ಹೇಳಿದರು.

ಸಲ್ಮಾನ್ ಖಾನ್ ಅವರ ಕಾಮೆಂಟ್ ವೈರಲ್ ಆಗಿದೆ. ಈ ಹಿಂದೆ ಕೃಷ್ಣಮೃಗ ಕೊಂದ ಪ್ರಕರಣದಲ್ಲಿ ಸಲ್ಮಾನ್ ಜೈಲಿಗೆ ಹೋಗಿದ್ದು ಗೊತ್ತೇ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net