VIDEO: ಫೀಲ್ಡಿಗಿಳಿದ ಸಲ್ಮಾನ್​ ಖಾನ್​; ಟ್ರ್ಯಾಕ್ಟರ್ ಏರಿ ಭತ್ತದ ಉಳುಮೆಯಲ್ಲಿ ಭಾಗಿ

EdT3c8TUcAAQg8U
Published on

ಬಾಲಿವುಡ್​ ನಟ ಸಲ್ಮಾನ್​ ಖಾನ್ ಇತ್ತೀಚೆಗಷ್ಟೇ ಪನ್ವೇಲ್​ನ ತಮ್ಮ ಜಮೀನಿನಲ್ಲಿ ಕೃಷಿ ಮಾಡುತ್ತಿರುವ ಫೋಟೋಗಳನ್ನು ಸೋಷಿಯಲ್​ ಮೀಡಿಯಾ ಮೂಲಕ ಪೋಸ್ಟ್​ ಮಾಡಿದ್ದರು. ಆ ಫೋಟೋಗಳಿಗೆ ಮೆಚ್ಚುಗೆ ವ್ಯಕ್ತವಾಗಿದ್ದಕ್ಕಿಂತ ಟ್ರೋಲ್​ ಆಗಿದ್ದೇ ಹೆಚ್ಚು. ಇದೀಗ ಟ್ರ್ಯಾಕ್ಟರ್ ಏರಿ ಭತ್ತದ ಉಳುಮೆಯಲ್ಲಿ ತೊಡಗಿಸಿಕೊಂಡಿರುವ ವಿಡಿಯೋ ಶೇರ್​ ಮಾಡಿ ಸುದ್ದಿಯಾಗಿದ್ದಾರೆ.

ಲಾಕ್​ಡೌನ್​ ಶುರುವಾದಾಗಿನಿಂದಲೂ ಮುಂಬೈನ ಪನ್ವೇಲ್​ನ ತಮ್ಮ ಫಾರ್ಮ್​ಹೌಸ್​ನಲ್ಲಿ ಬೀಡುಬಿಟ್ಟಿರುವ ಸಲ್ಮಾನ್, ಕೆಲವು ದಿನಗಳ ಹಿಂದೆ ಗದ್ದೆಯಲ್ಲಿ ಕೆಲಸ ಮಾಡುವ ಮತ್ತು ಮೈಯೆಲ್ಲಾ ಕೆಸರಾಗಿರುವ ಫೋಟೋಗಳನ್ನು ಶೇರ್​ ಮಾಡಿಕೊಂಡಿದ್ದರು. ಆ ಫೋಟೋಗೆ, ‘ಜೈ ಜವಾನ್​ ಜೈ ಕಿಸಾನ್​’ ಎಂಬ ಕ್ಯಾಪ್ಶನ್​ ನೀಡಿದ್ದ ಅವರು, ಆ ಮೂಲಕ ತಾವು ಕೃಷಿಯಲ್ಲಿ ತೊಡಗಿಸಿಕೊಂಡಿರುವುದಾಗಿ ಸೂಚಿಸಿದ್ದರು.

ಫೋಟೋವೊಂದರಲ್ಲಿ ಸಲ್ಮಾನ್​ ಮೈ ಮೇಲೆ ಕೆಸರನ್ನು ನೋಡಿರುವ ಕೆಲವರು, ಇದನ್ನು ಯಾರೋ ಫೋಟೋಗಾಗಿ ಹಚ್ಚಿದ್ದಾರೆ ಎಂದು ಆರೋಪಿಸಿದ್ದರು. ಅದೆಲ್ಲದಕ್ಕೂ ಉತ್ತರ ಎಂಬಂತೆ ಇದೀಗ ಕೃಷಿ ಮಾಡುತ್ತಿರುವ ವಿಡಿಯೋ ಶೇರ್ ಮಾಡಿದ್ದಾರೆ. ಸ್ವತಃ ಟ್ರ್ಯಾಕ್ಟರ್ ಓಡಿಸಿ ಭತ್ತದ ಗದ್ದೆಯಲ್ಲಿ ಕೆಲಸ ಮಾಡಿದ್ದಾರೆ. ಆ ವಿಡಿಯೋ ಸಹ ಇದೀಗ ಎಲ್ಲೆಡೆ ವೈರಲ್ ಆಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net