More

    ಕುದುರೆ ಜತೆ ಸಲ್ಮಾನ್ ಖಾನ್ ಬ್ರೇಕ್​ಫಾಸ್ಟ್​! ಹಸಿ ಮೇವು ತಿಂದು ಬಾಯಿ ಚಪ್ಪರಿಸಿದ ನಟ! ವಿಡಿಯೋ ನೋಡಿ..

    ಇತ್ತೀಚೆಗಷ್ಟೇ ಕೋಟ್ಯಂತರ ರೂಪಾಯಿಯನ್ನು ಸಿನಿಮಾ ಕಾರ್ಮಿಕರ ವಲಯಕ್ಕೆ ನೀಡಿದ್ದ ಬಾಲಿವುಡ್​ ನಟ ಸಲ್ಮಾನ್​ ಖಾನ್​, ಸದ್ಯ ಲಾಕ್​ಡೌನ್​​ ಮೂಡ್​ನಲ್ಲಿದ್ದಾರೆ. ಫಾರ್ಮ್​ ಹೌಸ್​ನಲ್ಲಿ ತಂಗಿರುವ ಸಲ್ಮಾನ್​, ಅಲ್ಲಿನ ಪ್ರಾಣಿ ಪಕ್ಷಿಗಳೊಟ್ಟಿಗೆ ಕ್ವಾಲಿಟಿ ಸಮಯ ಕಳೆಯುತ್ತಿದ್ದಾರೆ. ಅದ್ಯಾವ ಮಟ್ಟಿಗೆ ಅಂದರೆ, ಫಾರ್ಮ್​ ಹೌಸ್​ನಲ್ಲಿನ ತಮ್ಮ ಕುದುರೆ ಜತೆಗೆ ಬೆಳಗಿನ ಉಪಹಾರ ಸೇವಿಸಿದ್ದಾರೆ. ಅದೂ ಕುದುರೆಗೆ ಹಾಕಿದ್ದ ಮೇವನ್ನು ಬಾಯಿ ಚಪ್ಪರಿಸಿಕೊಂಡು ತಿಂದಿದ್ದಾರೆ.
    ಹೌದು, ಹಸಿ ಹುಲ್ಲನ್ನು ಕೈಯಲ್ಲಿ ಹಿಡಿದುಕೊಂಡು ಕುದುರೆಗೆ ತಿನ್ನಿಸುವುದರ ಜತೆಗೆ ತಾವೂ ತಿನ್ನುತ್ತಿರುವ ಬ್ರೇಕ್​ಫಾಸ್ಟ್​ ವಿಡಿಯೋ ತುಣುಕನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು, ಖುಷಿ ವ್ಯಕ್ತಪಡಿಸಿದ್ದಾರೆ. ಬ್ರೇಕ್​ಫಾಸ್ಟ್ ವಿಥ್​ ಮೈ ಲವ್​ ಎಂಬ ಕ್ಯಾಪ್ಶನ್​ ಸಹ ನೀಡಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts