More

    ಸಾಹಸ ಕಲಾವಿದರ ಬೆನ್ನಿಗೆ ನಿಂತ ಸಲ್ಮಾನ್ ಖಾನ್ ಮತ್ತು ನೆಟ್​ಫ್ಲಿಕ್ಸ್ ಇಂಡಿಯಾ

    ಮುಂಬೈ: ಕರೊನಾದಿಂದ ಭಾರತೀಯ ಚಿತ್ರರಂಗವೇ ಸಂಕಷ್ಟಕ್ಕೆ ಸಿಲುಕಿದೆ. ಇಂಥ ಸಂದರ್ಭದಲ್ಲಿ ಸಾಕಷ್ಟು ಸ್ಟಾರ್ ಸಿನಿಮಾ ಕಲಾವಿದರು, ತಮ್ಮ ಕೈಲಾದ ಸೇವೆಯನ್ನು ಮಾಡುತ್ತಿದ್ದಾರೆ. ದಿನಸಿ ರೂಪದಲ್ಲಿ, ಹಣದ ರೂಪದಲ್ಲಿ ಹೀಗೆ ಒಂದಿಲ್ಲೊಂದು ರೂಪದಲ್ಲಿ ಸಹಾಯ ಮಾಡುತ್ತಿದ್ದಾರೆ. ಅದೇ ರೀತಿ ಇದೀಗ ಸಲ್ಮಾನ್ ಖಾನ್, ಸಾಹಸ ಕಲಾವಿದರ ಬೆನ್ನಿಗೆ ನಿಂತಿದ್ದಾರೆ.

    ಇದನ್ನೂ ಓದಿ: ಬಾಲಿವುಡ್​ನಲ್ಲಿ ಇನ್ನೊಂದು ‘ಪ್ರೇಮ್​ ಕಹಾನಿ’ …

    ಹೌದು, ಸ್ಟಂಟ್​ ಕಲಾವಿದರ ಅಸೋಸಿಯೇಷನ್​ ವತಿಯಿಂದ ಎಲ್ಲರ ಮಾಹಿತಿ ಮತ್ತು ಬ್ಯಾಂಕ್​ ಖಾತೆಯ ವಿವರವನ್ನು ಪಡೆದುಕೊಂಡಿರುವ ಸಲ್ಮಾನ್​ ಖಾನ್​, ಹಣದ ಸಹಾಯ ಮಾಡಲು ಮುಂದೆ ಬಂದಿದ್ದಾರೆ. ಸಲ್ಮಾನ್ ಅವರ ಈ ಕಾರ್ಯಕ್ಕೆ ನೆಟ್​ಫ್ಲಿಕ್ಸ್ ಇಂಡಿಯಾ ಸಹ ಮುಂದೆ ಬಂದಿದ್ದು, ಒಟ್ಟಿಗೆ ಹಣಕಾಸಿನ ನೆರವನ್ನು ನೀಡಲಿದ್ದಾರೆ.

     
    ಸದ್ಯ ಎಷ್ಟು ಹಣ ವರ್ಗಾವಣೆ ಮಾಡಲಿದ್ದಾರೆ? ಎಷ್ಟು ಮಂದಿಗೆ ಆ ಹಣ ತಲುಪಿಲಿದೆ ಎಂಬ ಬಗ್ಗೆ ಮಾಹಿತಿ ಸದ್ಯಕ್ಕಿಲ್ಲ. ಸದ್ಯ ಸ್ಟಂಟ್​ ಕಲಾವಿದರ ಸಂಘದ ಅಜೀಜ್ ಗುಲಾಬ್ ಪ್ರತಿಕ್ರಿಯಿಸಿದ್ದು, ಸಲ್ಮಾನ್ ಖಾನ್​ ಅವರು ನಮ್ಮ ಅಸೋಸಿಯೇಷನ್​ ನಲ್ಲಿರುವ ಎಲ್ಲರ ಮಾಹಿತಿಯನ್ನು ಪಡೆದುಕೊಂಡಿದ್ದಾರೆ. ಇನ್ನೇನು ಶೀಘ್ರದಲ್ಲಿ ಅವರಿಂದ ಹಣ ಸಂದಾಯವಾಗಲಿದೆ. ಕಷ್ಟಕಾಲದಲ್ಲಿ ಇದು ನೂರಾರು ಜನರಿಗೆ ಅನುಕೂಲವಾಗಲಿದೆ ಎಂದಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts