More

  ಸಂಬಳ ಕೇಳಿದ್ದಕ್ಕೆ ಬಿಯರ್ ಬಾಟಲಿಯಿಂದ ಚುಚ್ಚಿ-ಚುಚ್ಚಿ ಕೊಂದೇ ಬಿಟ್ಟರು!

  ನೆಲಮಂಗಲ: ಕೆಲಸ ಮಾಡಿಸಿಕೊಂಡಾತ ಸಂಬಳ ಕೊಡದೆ ಸತಾಯಿಸಿದ್ದಲ್ಲದೆ, ಕೊನೆಗೆ ಕೊಲೆ ಮಾಡುವ ದುಷ್ಕೃತ್ಯಕ್ಕೂ ಕೈ ಹಾಕಿದ ಸುದ್ದಿ ಎಂತಹವರಿಗೂ ಆತಂಕ ಮೂಡಿಸುತ್ತಿದೆ.

  ಇಂತಹ ದುಷ್ಕೃತ್ಯ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಮೈಲನಹಳ್ಳಿ ಸಮೀಪದ ಶ್ರೀಸಾಯಿ ಲೇಔಟ್​ನಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದ್ದು, ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಯುವಕ ಸತೀಶ್(26) ಕೊಲೆಯಾಗಿದ್ದಾರೆ. ಇದನ್ನೂ ಓದಿರಿ ಕಟ್ಟಿದ್ದು ಕೇವಲ 12 ರೂಪಾಯಿ, ಬಂದದ್ದು ಬರೋಬ್ಬರಿ 2 ಲಕ್ಷ ರೂಪಾಯಿ!

  ಏನಿದು ಪ್ರಕರಣ?: ಹರೀಶ್​ ಎಂಬುವರಿಗೆ ಸೇರಿದ ಟ್ಯಾಕ್ಸಿಯಲ್ಲಿ ಪ್ರದೀಪ್ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಐದು ತಿಂಗಳಿಂದ ಬರೀ ಅಡ್ವಾನ್ಸ್ ಹಣ ಕೊಟ್ಟು ದುಡಿಸಿಕೊಳ್ಳುತ್ತಿದ್ದ ಹರೀಶ್, ಸಂಬಳ ಕೊಟ್ಟಿರಲಿಲ್ಲ. ಸಂಬಳ ಬೇಕೆಂದು ಪ್ರದೀಪ್​ ಹಲವು ಬಾರಿ ಕೇಳಿದ್ದರೂ ಕಿವಿಗೆ ಹಾಕಿಕೊಂಡಿರಲಿಲ್ಲ. ಶುಕ್ರವಾರ ರಾತ್ರಿ ಸಂಬಳ ಕೊಡುವುದಾಗಿ ಹರೀಶ್​ನನ್ನು ಪ್ರದೀಪ್​ ಕರೆದಿದ್ದ. ಅದರಂತೆ ಹರೀಶ್​ ತನ್ನ ಸ್ನೇಹಿತ ಸತೀಶ್​ನನನೂ ಜತೆಗೆ ಕರೆದೊಯ್ದಿದ್ದ.

  ಈ ವೇಳೆ ಬಸ್​ ಮಾಲೀಕ ಹರೀಶ್​ ಮತ್ತವನ ಸಹಚರರಾದ ಮಲ್ಲೇಶ್, ಸಿದ್ದು ಕಂಠಪೂರ್ತಿ ಕುಡಿದಿದ್ದರು. ಸಂಬಳದ ವಿಚಾರವಾಗಿ ವಾಗ್ವಾದ ನಡೆಸಿದ್ದಲ್ಲದೆ ಬಿಯರ್ ಬಾಟಲಿಯಿಂದ ಸತೀಶ್​ನ ಹಣೆ ಮತ್ತು ಮುಖಕ್ಕೆ ಮನಸೋಇಚ್ಛೆ ಚುಚ್ಚಿ ಹಲ್ಲೆ ಮಾಡಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಸತೀಶ್​ಗೆ ನೆಲಮಂಗಲ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ನಿಮ್ಹಾನ್ಸ್​ ಆಸ್ಪತ್ರೆಗೆ ಆಂಬುಲೆನ್ಸ್​ ಮುಖಾಂತರ ರವಾನಿಸಲಾಯಿತು. ಅಲ್ಲಿ ಬೆಡ್ ಸಿಗದ ಕಾರಣ ವಾಪಸ್ ನೆಲಮಂಗಲದ ಖಾಸಗಿ ಆಸ್ಪತ್ರೆಗೆ ಕರೆತರಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಸತೀಶ್​ ಕೊನೆಯುಸಿರೆಳೆದರು. ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  ಅಮಾವಾಸ್ಯೆ ದಿನ ಸಂಭವಿಸಿತು ಭೀಕರ ಅಪಘಾತ! ಈ ದೃಶ್ಯ ನೋಡಿದ್ರೆ ಬೆಚ್ಚಿಬೀಳ್ತೀರಿ…

  ಅಯ್ಯೋ, ಮಗಳೇ ನಿಲ್ಲು ಎಂದು ತಾಯಿ ಗೋಗರೆಯುತ್ತಿದ್ದರೂ ಮಗಳು ನೀರಿಗೆ ಹಾರಿ ಪ್ರಾಣ ಬಿಟ್ಲು!

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts