Salaar Twitter Review; ಹೇಗಿದೆ ಪ್ರಭಾಸ್-ಪ್ರಶಾಂತ್ ನೀಲ್ ಕಾಂಬಿನೇಷನ್​ನ ಮೊದಲಾರ್ಧ

Prashanth Neel Prabhas
Published on

ಬೆಂಗಳೂರು: ಯಂಗ್​ ರೆಬೆಲ್​​ ಸ್ಟಾರ್​, ಡಾರ್ಲಿಂಗ್​ ಪ್ರಭಾಸ್​ ನಟನೆಯ, ಪ್ರಶಾಂತ್​ ನೀಲ್​ ನಿರ್ದೇಶನದ ಬಹುನಿರೀಕ್ಷಿತ ಸಲಾರ್​ ಚಿತ್ರ ಇಂದು ವಿಶ್ವದಾದ್ಯಂತ ಬಿಡುಗಡೆಯಾಗಿದ್ದು, ಭರ್ಜರಿ ಓಪನಿಂಗ್​ ಪಡೆದುಕೊಂಡಿದೆ. ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಧೂಳೆಬ್ಬಿಸಿರುವ ಸಲಾರ್​ ಚಿತ್ರದ ಬಗ್ಗೆ ಅಭಿಮಾನಿಗಳು ತಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳುತ್ತಿದ್ದಾರೆ.

ಚಿತ್ರ ವೀಕ್ಷಿಸಿದ ಬಳಿಕ ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಅಭಿಪ್ರಾಯವನ್ನು ಹಂಚಿಕೊಂಡಿರುವ ಅಭಿಮಾನಿಗಳು 2024ರ ಸಾಲಿನ ದಾಖಲೆ ಬರೆದ ಚಿತ್ರಗಳಲ್ಲಿ ಸಲಾರ್ ಒಂದಾಗಲಿದೆ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಸಿನಿಮಾ ವೀಕ್ಷಿಸಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿರುವ ಕನ್ನಡಿಗರು ಇದು ಉಗ್ರಂ ಚಿತ್ರದ ರಿಮೇಕ್​ ಅಲ್ಲ ಎಂದಿದ್ದಾರೆ. ಉಗ್ರಂಗೂ ಮತ್ತು ಸಲಾರ್​ಗೂ ಯಾವುದೇ ಸಂಬಂಧವಿಲ್ಲ. ಇದೊಂದು ಸಂಪೂರ್ಣ ಭಿನ್ನ ಕಥೆಯುಳ್ಳ ಸಿನಿಮಾ ಎಂದು ಹೇಳಿದ್ದಾರೆ. ಬಾಹುಬಲಿ ಬಳಿಕ ಪ್ರಭಾಸ್​ಗೆ ಇದೊಂದು ಒಳ್ಳೆಯ ಕಮ್​ಬ್ಯಾಕ್ ಸಿನಿಮಾ ಎಂದು ವೀಕ್ಷಕರು ಹೇಳುತ್ತಿದ್ದಾರೆ.

ಚಿತ್ರದ ಮೊದಲ ಭಾಗ ಚೆನ್ನಾಗಿ ಮೂಡಿ ಬಂದಿರೋ ಕಾರಣ, ಎರಡನೇ ಭಾಗ ನೋಡಲು ಕಾತುರರಾಗಿರುತ್ತಾರೆ. ನಾನು ಬಾಹುಬಲಿ ಚಿತ್ರದ ದಾಖಲೆಗಳನ್ನು ಯಾರೂ ಬ್ರೇಕ್ ಮಾಡಲ್ಲ ಅಂತ ಅಂದ್ಕೊಂಡಿದ್ದೆ. ಆದರೆ ಸಲಾರ್ ನನ್ನ ನಂಬಿಕೆಯನ್ನು ಸುಳ್ಳು ಮಾಡಿದೆ. 2024ರ ಸಾಲಿನ ದಾಖಲೆ ಬರೆದ ಚಿತ್ರಗಳಲ್ಲಿ ಸಲಾರ್ ಒಂದಾಗಲಿದೆ ಎಂದು ಅಭಿಮಾನಿಗಳು ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಹೇಗಿದೆ ಮೊದಲಾರ್ಧ

ಆರಂಭದಲ್ಲಿ ಬಾಲ್ಯದ ಕಥೆಯನ್ನು ತೋರಿಸಲಾಗಿದೆ. ದೇವ ಹಾಗೂ ವರದರಾಜ್ ಸ್ನೇಹ ಅವರ ಗೆಳೆತನ ಹೈಲೈಟ್ ಆಗಿದೆ. ಅಭಿಮಾನಿಗಳು ನಿರೀಕ್ಷಿಸಿದಂತೆಯೇ ಪ್ರಭಾಸ್​ ಅವರ ಎಂಟ್ರಿ ಮಾಸ್​ ಆಗಿಲ್ಲ ಎಂದು ಹೇಳಲಾಗಿದ್ದು, ಈ ಚಿತ್ರಕ್ಕೆ ಸೆನ್ಸಾರ್ ಮಂಡಳಿಯವರು ಎ ಪ್ರಮಾಣ ಪತ್ರ ನೀಡಿದ್ದಾರೆ. ಅದಕ್ಕೆ ತಕ್ಕಂತೆ ಸಿನಿಮಾದಲ್ಲಿ ಭರ್ಜರಿ ವೈಲೆನ್ಸ್ ತೋರಿಸಲಾಗಿದೆ.

ಪ್ರಭಾಸ್ ಅವರು ಎರಡು ಶೇಡ್‌ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.‌ ಅವರ ಪಾತ್ರ ಇಷ್ಟವಾಗುತ್ತದೆ. ರವಿ ಬಸ್ರೂರು ಅವರ ಬಿಜಿಎಂ ಕೇಳುಗರ ಎದೆಯಲ್ಲಿ ನಡುಕ ಹುಟ್ಟಿಸುತ್ತದೆ. ಒಂದು ಹಾಡು ಕೂಡ ಇಷ್ಟ ಆಗುತ್ತದೆ. ಪೃಥ್ವಿರಾಜ್ ಸುಕುಮಾರನ್ ಒಮ್ಮೆ ಮಾತ್ರ ಕಾಣುತ್ತಾರೆ.‌ ಮೊದಲಾರ್ಧದಲ್ಲಿ ಬಾಲ್ಯದ ಕಥೆ ಹೈಲೈಟ್ ಆಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net