

ಮುಂಬೈ: ಇಂದು ತಮ್ಮ 44ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ಪ್ಯಾನ್ ಇಂಡಿಯಾ ಸ್ಟಾರ್, ಟಾಲಿವುಡ್ನ ರೆಬೆಲ್ ಸ್ಟಾರ್ ನಟ ಪ್ರಭಾಸ್ಗೆ ಅಭಿಮಾನಿಗಳು ಮತ್ತು ಚಿತ್ರತಂಡದ ಗಣ್ಯರಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.
ಪ್ರಭಾಸ್ ಜನ್ಮದಿನದಂದೇ ಹೊಸ ಪೋಸ್ಟರ್ ಮೂಲಕ ಶುಭಕೋರಿದ 'ಸಲಾರ್' ಚಿತ್ರತಂಡ, ಈ ಹಿಂದೆ ಘೋಷಿಸಿದ್ದ ರಿಲೀಸ್ ದಿನಾಂಕದ ಬಗ್ಗೆ ಪೋಸ್ಟರ್ ಮೂಲಕ ಇದೀಗ ಮತ್ತೊಮ್ಮೆ ದೃಢಪಡಿಸಿದೆ.
ನಟ ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಮೂಡಿಬಂದಿರುವ ಮಾಸ್, ಆಕ್ಷನ್-ಡ್ರಾಮಾ ಸಲಾರ್ ರಿಲೀಸ್ ದಿನಾಂಕದಲ್ಲಿ ಈ ಹಿಂದೆ ಬದಲಾವಣೆ ಕಂಡುಬಂದಿತ್ತು. ಈ ಕುರಿತಂತೆ ಚಿತ್ರತಂಡ ಸಿನಿಮಾ ಸೆ. 28 ರಂದು ಬಿಡುಗಡೆಯಾಗುವುದಿಲ್ಲ ಬದಲಿಗೆ ಡಿಸೆಂಬರ್ 22 ರಂದು ತೆರೆ ಕಾಣಲಿದೆ ಎಂದು ತಿಳಿಸಿತ್ತು.
ಇದೀಗ ಈ ಸಂಗತಿಯನ್ನು ಮತ್ತೊಮ್ಮೆ ಚಿತ್ರ ತಯಾರಕರು ದೃಢಪಡಿಸಿದ್ದು, ಪ್ರಭಾಸ್ ಜನ್ಮದಿನಕ್ಕೆ ಶುಭಕೋರುವ ಮುಖೇನ ಚಿತ್ರವು ಡಿಸೆಂಬರ್ 22 ರಂದು ಬಿಡುಗಡೆಯಾಗಲಿದೆ. ಇದರಲ್ಲಿ ಯಾವುದೇ ಗೊಂದಲವಿಲ್ಲ ಎಂಬುದನ್ನು ಸ್ಪಷ್ಟಪಡಿಸಿದೆ. ಚಿತ್ರದಲ್ಲಿ ಶ್ರುತಿ ಹಾಸನ್, ಪೃಥ್ವಿರಾಜ್ ಸುಕುಮಾರನ್, ಜಗಪತಿ ಬಾಬು ಮುಂತಾದವರ ತಾರಾಗಣವಿದೆ,(ಏಜೆನ್ಸೀಸ್).