

ಹೈದರಾಬಾದ್: ನಾಗ ಚೈತನ್ಯ ಮತ್ತು ಸಾಯಿ ಪಲ್ಲವಿ ಜೋಡಿ ಈ ಹಿಂದೆ 'ಲವ್ ಸ್ಟೋರಿ' ಮೂಲಕ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದ್ದರು. ಚಂದು ಮೊಂಡೇಟಿ ನಿರ್ದೇಶನದಲ್ಲಿ ತಯಾರಾಗುತ್ತಿರುವ ಬಹು ನಿರೀಕ್ಷಿತ ಚಿತ್ರ 'ತಾಂಡೇಲ್' ನಲ್ಲಿ ತಮ್ಮ ಅದ್ಭುತ ಸ್ಕ್ರೀನ್ ಪ್ರೆಸೆನ್ಸ್ ಮತ್ತು ಕೆಮಿಸ್ಟ್ರಿಯಿಂದ ಮತ್ತೊಮ್ಮೆ ಈ ಜೋಡಿ ಪ್ರೇಕ್ಷಕರನ್ನು ರಂಜಿಸಲಿದ್ದಾರೆ.
ಚಿತ್ರೀಕರಣ ಭರದಿಂದ ಸಾಗಿದ್ದು, ಮೇ 9 ಸಾಯಿ ಪಲ್ಲವಿ ಹುಟ್ಟುಹಬ್ಬವಿದ್ದು, ತಯಾರಕರು ಸುಂದರವಾದ ಪೋಸ್ಟರ್ ಅನ್ನು ಬಿಡುಗಡೆ ಮಾಡಿದ್ದಾರೆ. ಬಳಿಕ ವೀಡಿಯೊವನ್ನು ಸಹ ರಿಲೀಸ್ಮಾಡಿದ್ದಾರೆ. ವೀಡಿಯೋ ಆರಂಭದಲ್ಲಿ ಸಾಯಿ ಪಲ್ಲವಿ ಹಿಂದಿನ ಚಿತ್ರಗಳ ಸಾಂಪ್ರದಾಯಿಕ ಪಾತ್ರಗಳನ್ನು ಪ್ರಸ್ತುತಪಡಿಸಿದ್ದಾರೆ. ನಂತರ ತಾಂಡೇಲ್ ನ ಸತ್ಯ(ಪಾತ್ರ) ಪರಿಚಯಿಸಲಾಗಿದೆ.
ಸಾಯಿ ಪಲ್ಲವಿ ಅದ್ಭುತ ನಟಿ. ಆಕೆ ಅಭಿನಯ ಅದ್ಭುತ. ವಿಡಿಯೋದಲ್ಲಿ ಮಕ್ಕಳೊಂದಿಗೆ ಸಮಯ ಕಳೆಯುವುದು, ಆಟವಾಡುವುದು ನೋಡಿದರೆ ಆಕೆಯಲ್ಲಿನ ಮನುಷ್ಯತ್ವವನ್ನು ಎತ್ತಿ ತೋರಿಸುತ್ತದೆ. ವೀಡಿಯೋ ಕೊನೆಯಲ್ಲಿ ನಾಗ ಚೈತನ್ಯ ಮತ್ತು ಸಾಯಿ ಪಲ್ಲವಿ ಇರುವ ಸುಂದರ ದೃಶ್ಯವನ್ನು ತೋರಿಸುತ್ತದೆ. ಹುಟ್ಟುಹಬ್ಬದ ಈ ವಿಶೇಷ ವೀಡಿಯೋ ನಮಗೆ ಹೊಸ ಸಾಯಿ ಪಲ್ಲವಿಯನ್ನು ಪರಿಚಯಿಸುತ್ತದೆ.
ಚೈತನ್ಯ ಮತ್ತು ಸಾಯಿ ಪಲ್ಲವಿ ಮತ್ತೊಮ್ಮೆ ತೆರೆ ಮೇಲೆ ಮ್ಯಾಜಿಕ್ ಸೃಷ್ಟಿಸುತ್ತಾರೆ ಎಂದು ಪ್ರೇಕ್ಷಕರು ಕಾಯುತ್ತಿದ್ದಾರೆ. ಕ್ರಿಯೇಟಿವ್ ಡೈರೆಕ್ಟರ್ ಚಂದೂ ಮೊಂಡೇಟಿ ನಿರ್ದೇಶನದಲ್ಲಿ 'ತಾಂಡೇಲ್' ಸಿನಿಮಾ ಅದ್ಭುತ ಅನುಭವ ನೀಡಲಿದೆ. ಪ್ರೇಮಕಥೆಯ ಹೊರತಾಗಿ ಈ ಚಿತ್ರದಲ್ಲಿ ಹಲವು ಅಂಶಗಳಿವೆ.