ಬಾತ್​ರೂಮ್ ಕಿಟಕಿಯಿಂದ ಸೈಫ್​​ ಅಲಿ ಖಾನ್​​ ಮನೆಗೆ ಎಂಟ್ರಿಯಾಗಿದ್ದ ಖದೀಮ! Saif Ali Khan Attacker Entered His House Through Washroom

saif ali khan bandra home
Published on

ಮುಂಬೈ:  (Saif Ali Khan Attacker Entered His House Through Washroom )  ಬಾಲಿವುಡ್​ ನಟ ಸೈಫ್​​ ಅಲಿ ಖಾನ್​​  ಮೇಲೆ ನಡೆದ ಹಲ್ಲೆ ಪ್ರಕರಣದ ತನಿಖೆಯನ್ನು ಮುಂಬೈ ಪೊಲೀಸರು ನಡೆಸುತ್ತಿರುವುದು ಗೊತ್ತೇ ಇದೆ. ಘಟನೆ ಸಂಬಂಧ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಮತ್ತೊಂದೆಡೆ, ಲೀಲಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೈಫ್ ಅವರನ್ನು ಈಗಾಗಲೇ ಅನೇಕ ಸೆಲೆಬ್ರಿಟಿಗಳು ಭೇಟಿ ಮಾಡಿದ್ದಾರೆ.  ಪೊಲೀಸ್​​ ತನಿಖೆಯಲ್ಲಿ ಇಂಟ್ರಸ್ಟಿಂಗ್​​ ಮಾಹಿತಿಯೊಂದು ಹೊರಬಿದ್ದಿದೆ.

ಜನವರಿ 16 ರಂದು ನಟ ಸೈಫ್ ಅಲಿ ಖಾನ್ ಮೇಲೆ ದಾಳಿ ಮಾಡಿದ ವ್ಯಕ್ತಿ 12 ನೇ ಮಹಡಿಯಲ್ಲಿರುವ ತನ್ನ ಮನೆಗೆ ಹೇಗೆ ಪ್ರವೇಶಿಸಿದ್ದನೆಂದು ಬಹಿರಂಗಪಡಿಸಿದ್ದಾನೆ.

ಆರೋಪಿಗಳ ಪ್ರಕಾರ, ಅವರು ಕೆಲವು ದಿನಗಳ ಹಿಂದೆ ಬಾಂದ್ರಾದ ಹೋಟೆಲ್‌ನಲ್ಲಿ ಕೆಲಸ ಮಾಡಲು ಪ್ರಾರಂಭಿಸಿದ್ದರು ಮತ್ತು ಪಾಳಿ ಮುಗಿದ ನಂತರ ತಡರಾತ್ರಿ ಈ ಪ್ರದೇಶಕ್ಕೆ ನಡೆದುಕೊಂಡು ಹೋಗುತ್ತಿದ್ದ. ಕಟ್ಟಡದ ಹಿಂಭಾಗದಲ್ಲಿ ಸಿಬ್ಬಂದಿ ಅಥವಾ ಸಿಸಿಟಿವಿ ಇಲ್ಲದಿರುವುದನ್ನು ನೋಡಿದ ನಂತರ ಸೈಫ್ ಎಂಟ್ರಿಯಾಗಿದ್ದಾನೆ. 

ಪಾರ್ಕಿಂಗ್ ಪ್ರದೇಶದ ಮೂಲಕ ಮೆಟ್ಟಿಲುಗಳಿರುವುದನ್ನು ನೋಡಿ ಅಗ್ನಿಶಾಮಕ ದ್ವಾರ ಮೂಲಕ ಮತ್ತು ಮೆಟ್ಟಿಲುಗಳ ಮೂಲಕ 11 ನೇ ಮಹಡಿಗೆ ಎಂಟ್ರಿಯಾಗಿ.  ಅಲ್ಲಿಂದ ಮನೆ ಒಳಗೆ ಎಂಟ್ರಿಯಾಗುವ ಮಾರ್ಗಕಂಡುಕೊಂಡೆವು..   ನೇರವಾಗಿ ಸೈಫ್ ಅಲಿ ಖಾನ್ ಅವರ ಮನೆಯ ವಾಶ್ ರೂಂ ಕಿಟಕಿಯ ಮೂಲಕ ಒಳಗೆ ಬಂದಿದ್ದೇನೆ ಎಂದು ಹೇಳಿದ್ದಾನೆ ಎನ್ನಲಾಗಿದೆ.

ಕಳ್ಳತನ ಮಾಡುವ ಉದ್ದೇಶದಿಂದ ಅಲ್ಲಿಗೆ ಹೋಗಿದ್ದೆ . ಮನೆಯಲ್ಲಿ ಗದ್ದಲ ಉಂಟಾದಾಗ, ತನ್ನನ್ನು ರಕ್ಷಿಸಿಕೊಳ್ಳಲು ಸೈಫ್ ಮೇಲೆ ಹಲ್ಲೆ ನಡೆಸಿದ್ದೇನೆ.  ಸೈಫ್​ ಅಲಿ ಖಾನ್​​ ಮೇಲೆ ಹಲ್ಲೆ ಮಾಡಿದ ನಂತರ  ಜನವರಿ 16 ರಂದು ಬೆಳಿಗ್ಗೆ 7 ಗಂಟೆಯವರೆಗೆ ಬಾಂದ್ರಾ ಪಶ್ಚಿಮದ ಪಟವರ್ಧನ್ ಗಾರ್ಡನ್ ಬಳಿಯ ಬಸ್ ನಿಲ್ದಾಣದಲ್ಲಿ ವ್ಯಕ್ತಿ ಮಲಗಿದ್ದೇನೆ ಎಂದಿದ್ದಾನೆ.

ಆರೋಪಿ ಸರಿಯೋ ತಪ್ಪೋ ಎಂದು ಪತ್ತೆ ಹಚ್ಚಲು ಪೊಲೀಸರು ಅಪರಾಧದ ದೃಶ್ಯವನ್ನು ಪೊಲೀಸರು ಮರುಸೃಷ್ಟಿಸುತ್ತಿದ್ದಾರೆ. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net