Saif Ali Khan ಎರಡು ದಿನದ ಆಸ್ಪತ್ರೆ ಬಿಲ್​ ಎಷ್ಟು ಗೊತ್ತಾ?

Saif Ali Khan
Published on

ಮುಂಬೈ: ನಟ ಸೈಫ್​ ಅಲಿ ಖಾನ್​ (Saif Ali Khan) ಮೇಲಿನ ಮಾರಣಾಂತಿಕ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಘಟನೆ ನಡೆದು 50ಕ್ಕೂ ಹೆಚ್ಚು ಗಂಟೆಗಳು ಕಳೆದಿದ್ದರೂ ಆರೋಪಿ ಪತ್ತೆಯಾಗದಿರುವುದು ಪೊಲೀಸರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಆರೋಪಿಯನ್ನು ಬಂಧಿಸಲು 30 ತಂಡಗಳನ್ನು ಪೊಲೀಸರು ರಚಿಸಿದ್ದು ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದ್ದಾರೆ.

ನಟ ಸೈಫ್​ ಅಲಿ ಖಾನ್​ (Saif Ali Khan) ಅವರಿಗೆ ಮುಂಬೈನ ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರೆದಿದೆ. ಸದ್ಯ ಅವರನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿದ್ದು, ಸದ್ಯದಲ್ಲೇ ವಾರ್ಡ್​ಗೆ ಶಿಫ್ಟ್​ ಮಾಡಲಾಗುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ. ಆದರೆ, ಆಸ್ಪತ್ರೆಯ ಬಿಲ್​ ಎಂದು ಹೇಳಲಾದ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

ನಟ ಸೈಫ್​ ಅಲಿ ಖಾನ್​ಗೆ (Saif Ali Khan) ಆರೋಪಿಯು ದೇಹದ ಆರು ಕಡೆ ಇರಿದಿದ್ದು, ವೈದ್ಯರು ಸರ್ಜರಿ ಮೂಲಕ ಚಾಕುವನ್ನು ಹೊರತೆಗೆದಿದ್ದಾರೆ. ಸದ್ಯ ವೈರಲ್​ ಆಗಿರುವ ಆಸ್ಪತ್ರೆಯ ಬಿಲ್​ ನೋಡುವುದಾದರೆ ಜನವರಿ 21ರಂದು ನಟ ಸೈಫ್​​ ಅಲಿ ಖಾನ್​ರನ್ನು ಡಿಸ್ಚಾರ್ಜ್​ ಮಾಡಕಲಾಗುತ್ತದೆ ಎಂದು ಉಲ್ಲೇಖಿಸಲಾಗಿದ್ದು. ಆಸ್ಪತ್ರೆ ಬಿಲ್​ 35.98 ಲಕ್ಷ ರೂಪಾಯಿ ಆಗಿದೆ ಎಂದು ಹೇಳಲಾಗಿದೆ. ಸೈಫ್ ಅಲಿ ಖಾನ್ ಅವರ ಆಸ್ಪತ್ರೆ ಬಿಲ್ 35.95 ಲಕ್ಷ ರೂಪಾಯಿ ಖರ್ಚಾಗಿದೆ. ಇನ್ಸೂರೆನ್ಸ್ ಕಂಪನಿ ಕಡೆಯಿಂದ 25 ಲಕ್ಷ ರೂಪಾಯಿ ಸಿಕ್ಕಿದೆ ಎಂದು ವರದಿ ಆಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿರುವ ಫೋಟೋ ನೋಡುವುದಾದರೆ ನಿವಾ ಬುಪಾ ಹೆಲ್ತ್​ ಇನ್ಸೂರೆನ್ಸ್’ ಪಡೆದಿದ್ದಾರೆ. ಸೈಫ್ ಅವರ ಆಸ್ಪತ್ರೆ ಬಿಲ್ 35.98 ಲಕ್ಷ ರೂಪಾಯಿ. ಇನ್ಸೂರೆನ್ಸ್ ಕಂಪನಿಯಿಂದ 25 ಲಕ್ಷ ಅಪ್ರೂವ್ ಸಿಕ್ಕಿದೆ ಎಂದು ಉಲ್ಲೇಖಿಸಲಾಗಿದೆ. ಲೆಟರ್​ನಲ್ಲಿ ಮೆಂಬರ್ ಐಡಿ, ರೂಂ ಕ್ಯಾಟೆಗರಿ ಇತ್ಯಾದಿ ವಿಚಾರಗಳನ್ನು ಉಲ್ಲೇಖಿಸಲಾಗಿದೆ. ಸದ್ಯ ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಸತ್ಯಾಸತ್ಯತೆ ಇನ್ನಷ್ಟೇ ತಿಳಿದು ಬರಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net