ಪಂಡಿತ ಪರಂಪರೆ ನಶಿಸುತ್ತಿರುವುದು ಆತಂಕಕಾರಿ

udp-1-kasapa new
Published on

ಉಡುಪಿ: ಭಾಷೆ, ಸಾಹಿತ್ಯ, ಕಾವ್ಯದ ವಿಷಯದಲ್ಲಿ ಸಂದೇಹ ಪರಿಹಾರ ನೀಡುವ ಪಂಡಿತ ಪರಂಪರೆ ನಶಿಸುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ಹಿರಿಯ ವಿದ್ವಾಂಸ ಡಾ. ಪಾದೇಕಲ್ಲು ವಿಷ್ಣು ಭಟ್​ ಹೇಳಿದರು.

ರಾಜಾಂಗಣದಲ್ಲಿ 2 ದಿನಗಳ ಕಾಲ ಕನ್ನಡ ಸಾಹಿತ್ಯ ಪರಿಷತ್​ ವತಿಯಿಂದ ಆಯೋಜಿಸಿದ್ದ 17ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ ಸಮಾರೋಪ ಸಮಾರಂಭದಲ್ಲಿ ಸಮ್ಮೇಳನಾಧ್ಯಕ್ಷತೆ ವಹಿಸಿ ಮಾತನಾಡಿದರು.

ಜೀವನದಲ್ಲಿ ಸತತಾಭ್ಯಾಸ ಪ್ರಯತ್ನವನ್ನು ಎಲ್ಲರೂ ರೂಢಿಸಿಕೊಳ್ಳಬೇಕು. ಇದರಿಂದ ಶ್ರೇಯಸ್ಸು ಲಭಿಸುತ್ತದೆ. ವಿದ್ಯಾರ್ಥಿಗಳು ಹಿರಿಯರು ಮತ್ತು ಹೆತ್ತವರಿಗೆ ಗೌರವ ನೀಡುವುದನ್ನು ಕಲಿಯಬೇಕು ಎಂದರು.

ಪ್ರಾಥಮಿಕ ಶಾಲೆ ಅಧ್ಯಾಪಕನಾಗಬೇಕು ಎಂಬುದು ನನ್ನ ಹಂಬಲವಾಗಿತ್ತು. ಆದರೆ ಎಂ.ಎ ಮಾಡಿದ್ದರಿಂದ ಕಾಲೇಜಿನ ಪ್ರಾಧ್ಯಾಪಕನಾಗಿ ಸೇರಿಕೊಂಡೆ. ಈ ಮೂಲಕ ಕನ್ನಡದ ಕೆಲಸವನ್ನು ಯಥಾಸಾಧ್ಯ ಮಾಡಿದ್ದೇನೆ ಎಂದು ಪ್ರತಿಸ್ಪಂದನೆ ನೀಡಿದರು.

ಜಿಲ್ಲಾ ಕಸಾಪ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಮಂಗಳೂರು ವಿವಿ ಉಪಕುಲಪತಿ ಡಾ. ಪಿ.ಎಲ್​. ಧರ್ಮ, ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ, ನಿವೃತ್ತ ಪ್ರಾಂಶುಪಾಲ ಡಾ. ಗಣನಾಥ ಎಕ್ಕಾರು, ಜಿಲ್ಲಾ ಸಹಕಾರಿ ಯೂನಿಯನ್​ ಅಧ್ಯಕ್ಷ ಇಂದ್ರಾಳಿ ಜಯಕರ ಶೆಟ್ಟಿ, ದ.ಕ ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಪ್ರದಿಪ್​ ಕಲ್ಕೂರ, ಪುತ್ತಿಗೆ ಮಠ ಕಾರ್ಯದರ್ಶಿ ಪ್ರಸನ್ನ ಆಚಾರ್ಯ, ರಮೇಶ್​ ಭಟ್​ ಮೊದಲಾದವರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಸಮ್ಮೇಳನಾಧ್ಯಕ್ಷ ಹಿರಿಯ ವಿದ್ವಾಂಸ ಡಾ. ಪಾದೇಕಲ್ಲು ವಿಷ್ಣು ಭಟ್​ ದಂಪತಿಯನ್ನು ಗೌರವಿಸಲಾಯಿತು. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಡಾ. ಗಜೇಂದ್ರ ಗುಂಡ್ಮಿ, ಡಾ. ರವೀಂದ್ರ ಶೆಟ್ಟಿ ಬಜಗೋಳಿ, ಪ್ರತಾಪ್​ ಕುಮಾರ್​ ಉದ್ಯಾವರ, ರಂಗಪ್ಪ ಹೊಳ್ಳ, ಸುಗುಣ ಮೂಲ್ಯ, ಉದಯ್​ ಕುಮಾರ್​ ಶೆಟ್ಟಿ, ಕೈಕೂರು ಸೀತಾರಾಮ ಶೆಟ್ಟಿ, ಸೂರಿ ಶೆಟ್ಟಿ ಕಾಪು, ಅಪ್ಪಿ ಪಾಣಾರ, ರಾಮಚಂದ್ರ ಆಚಾರ್ಯ, ಪ್ರಸನ್ನ ಶೆಟ್ಟಿಗಾರ್​, ಸೀತಾ ಶ್ರೀನಿವಾಸ, ಈಶ್ವರ್​ ಮಲ್ಪೆ, ರವಿ ಕಟಪಾಡಿ, ಯೋಗೀಶ್​ ಭಟ್​, ಸಂಸತಿ ಪ್ರಭಾಕರ್​, ಸತೀಶ್​ ಕುಮಾರ್​ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net