More

  ಹಂಸಕಾವ್ಯ ರಾಷ್ಟ್ರೀಯ ಪುರಸ್ಕಾರಕ್ಕೆ ಸದಾಶಿವ ಸೊರಟೂರು ಅವರ ‘ನಿನ್ನ ಬೆರಳು ತಾಕಿ’ ಕವನ ಸಂಕಲನ ಆಯ್ಕೆ

  ಮಂಗಳೂರು: ಸಾಧನಾ ರಾಷ್ಟ್ರೀಯ ಸಾಂಸ್ಕೃತಿಕ ಪ್ರತಿಷ್ಠಾನ ನೀಡುವ 2023ನೇ ಸಾಲಿನ ಹಂಸಕಾವ್ಯ ರಾಷ್ಟ್ರೀಯ ಕಾವ್ಯ ಪುರಸ್ಕಾರಕ್ಕೆ ದಾವಣಗೆರೆಯ ಸದಾಶಿವ ಸೊರಟೂರು ಅವರ ‘ನಿನ್ನ ಬೆರಳು ತಾಕಿ’ ಕವನ ಸಂಕಲನ ಆಯ್ಕೆಯಾಗಿದೆ.

  ಪುರಸ್ಕಾರವು 25 ಸಾವಿರ ರೂ. ಬಹುಮಾನ, ಪ್ರಶಸ್ತಿ ಫಲಕ ಒಳಗೊಂಡಿದ್ದು, ನವೆಂಬರ್‌ನಲ್ಲಿ ಪ್ರದಾನ ಸಮಾರಂಭ ನಡೆಯಲಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಕೆ.ವಿ.ಕೃಷ್ಣಪ್ರಸಾದ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಸದಾಶಿವ ಸೊರಟೂರು ಪ್ರೌಢಶಾಲೆ ಶಿಕ್ಷಕರಾಗಿದ್ದಾರೆ. ಅವರ 4 ಕವನ ಸಂಕಲನ, 2 ಕಥಾಸಂಕಲನ ಸಹಿತ ಒಟ್ಟು 13 ಕೃತಿಗಳು ಪ್ರಕಟವಾಗಿದೆ. ‘ಭಂಟಿ’ ಕತೆ ಮಂಗಳೂರು ವಿಶ್ವವಿದ್ಯಾಲಯದ ಪದವಿ ತರಗತಿಗೆ ಪಠ್ಯವಾಗಿದೆ. ‘ಅಪ್ಪನ ವ್ಹೀಲ್ ಚೇರ್ ಮಾರಾಟಕ್ಕಿದೆ’ ಕವನ ಸಂಕಲನಕ್ಕೆ ಹರಿಹರಶ್ರೀ ಕಾವ್ಯ ಪ್ರಶಸ್ತಿ, ‘ಗಾಯಗೊಂಡ ಸಾಲುಗಳು’ ಕವನ ಸಂಕಲನ ಹಸ್ತಪ್ರತಿಗೆ ಬಳ್ಳಾರಿ ಎನ್.ಗವಿಸಿದ್ದ ಕಾವ್ಯ ಪುರಸ್ಕಾರ ಸಂದಿದೆ. ‘ಕೊಲ್ಲುವುದಕ್ಕೆ ಸದ್ದುಗಳಿವೆ’ ಕವನ ಸಂಕಲದ ಹಸ್ತಪ್ರತಿಗೆ ‘ಕಾವ್ಯಸಂಜೆ’ ದಶಮಾನೋತ್ಸವ ಕಾವ್ಯ ಪುರಸ್ಕಾರ, ಮೊದಲ ಕಥಾ ಸಂಕಲನ ‘ಅರ್ಧ ಬಿಸಿಲು ಅರ್ಧ ಮಳೆ’ಗೆ ಧಾರವಾಡದ ಭೂಮಿ ಸಾಹಿತ್ಯ ಪ್ರತಿಷ್ಠಾನದ ಕಥಾ ಪುರಸ್ಕಾರ ಮತ್ತು ಕಸಾಪ ದತ್ತಿ ಪ್ರಶಸ್ತಿ ಲಭಿಸಿದೆ.

  ‘ಧ್ಯಾನಕ್ಕೆ ಕೂತ ನದಿ’ ಕಥಾ ಸಂಕಲನ 2024ನೇ ಸಾಲಿನ ‘ಈ ಹೊತ್ತಿಗೆ’ ಕಥಾ ಪ್ರಶಸ್ತಿಗೆ ಭಾಜನವಾಗಿದೆ. ಸೊರಟೂರು ಅವರ ‘ಆ ಹಾದಿ’ ಮತ್ತು ‘ಕಂಡಕ್ಟರ್ ಕವಿತೆಗಳು’ ವಿಭಿನ್ನ ಶೈಲಿಯ ಪುಸ್ತಕಗಳು. ಸದಾಶಿವ ಸೊರಟೂರು ಅವರು ಅನೇಕ ಕತೆ, ಕವನ ಸ್ಪರ್ಧೆಗಳಲ್ಲಿ ಬಹುಮಾನ ಪಡೆದಿದ್ದಾರೆ. ಅವರ ಹಲವು ಕಥೆ, ಕವನಗಳು ಪತ್ರಿಕೆಗಳಲ್ಲಿ ಪ್ರಕಟಗೊಂಡಿದೆ. ನೂರಾರು ಲೇಖನ, ಪ್ರಬಂಧಗಳನ್ನು ಬರೆದಿದ್ದಾರೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts