More

    ಬಿಜೆಪಿಗೆ ೧೩೦ ಸ್ಥಾನಗಳೊಂದಿಗೆ ಬಹುಮತ ಖಚಿತ: ಸದಾನಂದ ಗೌಡ

    ಮಡಿಕೇರಿ:

    ಬಿಜೆಪಿ ಪಾಲಿಗೆ ಇದು ಸವಾಲಿನ ಚುನಾವಣೆಯಾಗಿದ್ದು ೧೩೦ಕ್ಕೂ ಅಧಿಕ ಸ್ಥಾನಗಳನ್ನು ಗಳಿಸುವ ಮೂಲಕ ಪೂರ್ಣ ಬಹುಮತದ ಸರ್ಕಾರ ರಚಿಸಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ವಿಶ್ವಾಸ ವ್ಯಕ್ತಪಡಿಸಿದರು. ಪೂರ್ಣ ಬಹುಮತ ಇಲ್ಲದಿದ್ದರೂ ಬಿಜೆಪಿ ಈ ಹಿಂದೆ ಒಟ್ಟು ೮ ವರ್ಷ ಆಡಳಿತ ಕೊಟ್ಟಿದೆ. ಯಡಿಯೂರಪ್ಪ, ಬೊಮ್ಮಾಯಿ ಸರ್ಕಾರದಿಂದ ಉತ್ತಮ ಆಡಳಿತ ನೀಡಲಾಗಿದೆ.

    ಕೇಂದ್ರದ ಮೋದಿ ಸರ್ಕಾರ ನೀಡಿದ ವಿಶೇಷ ಅನುದಾನವೂ ಇಲ್ಲಿ ಗಮನಾರ್ಹ. ಡಬಲ್ ಎಂಜಿನ್ ಸರ್ಕಾದಿಂದ ಸರ್ವಸ್ಪರ್ಶಿ ಆಡಳಿತ ಕೊಡಲಾಗಿದೆ. ಹಾಗಾಗಿ ಚುನಾವಣಾ ಅಖಾಡದಲ್ಲಿ ಉತ್ತಮ ಬೆಂಬಲ ವ್ಯಕ್ತವಾಗುತ್ತಿದೆ. ಪೂರ್ಣ ಬಹುಮತದ ಬಿಜೆಪಿ ಸರ್ಕಾರ ಬಂದರೆ ಮಾತ್ರ ಎಲ್ಲ ಸಮಸ್ಯೆಗಳಿಗೆ ಕಡಿವಾಣ ಎಂಬ ಭಾವನೆ ಜನರಲ್ಲಿರುವುದರಿಂದ ಸ್ವಂತ ಶಕ್ತಿಯಲ್ಲಿ ಅಧಿಕಾರ ಗಳಿಸುವ ಗುರಿ ಹೊಂದಲಾಗಿದೆ ಎಂದು ಮಡಿಕೇರಿಯ ಪಕ್ಷದ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

    ಬಿಜೆಪಿ ಆಡಳಿತದ ಕರ್ನಾಟಕ ಎಲ್ಲಾ ಕ್ಷೇತ್ರದಲ್ಲೂ ಮಂದಿದೆ. ಜಿಎಸ್‌ಟಿ ಸಂಗ್ರಹದಲ್ಲಿ ೨ನೇಸ್ಥಾನ ಪಡೆದುಕೊಂಡಿದ್ದರೆ, ಕೋವಿಡ್ ನಿರ್ವಹಣೆಯಲ್ಲಿ ಮೊದಲ ಸ್ಥಾನದಲ್ಲಿದೆ. ಕಾನೂನು ನಿರ್ವಹಣೆಯೂ ಉತ್ತಮವಾಗಿದೆ. ಸಾಮಾನ್ಯ ರೈತಾಪಿ ವರ್ಗಕ್ಕೆ ಅನುಕೂಲ ಕಲ್ಪಿಸಲಾಗಿದೆ. ಕೊಡಗಿನಲ್ಲಿ ರೈತರಿಗೆ ಮಳೆ ಹಾನಿ ಪರಿಹಾರವಾಗಿ ೧೩೮ ಕೋಟಿ ರೂ. ಕೊಡಲಾಗಿದೆ. ಅಭಿವೃದ್ಧಿ ಮತ್ತು ಸುಶಾಸನ ಕರ್ನಾಟಕದಲ್ಲಿ ಸಾಕಾರಗೊಂಡಿದೆ. ಇದಕ್ಕೆ ಪೂರಕ ಸಹಕಾರ ಕೇಂದ್ರ ಸರಕಾರದಿಂದಲೂ ಸಿಕ್ಕಿದೆ ಎಂದರು.
    ನಾವು ಹೇಳಿದ್ದೇವೆ. ಹೇಳಿದ್ದನ್ನು ಮಾಡಿ ತೋರಿಸಿದ್ದೇವೆ. ಮುಂದೆ ಮಾಡಿ ತೋರಿಸುವವರಿದ್ದೇವೆ ಎಂದ ಸದಾನಂದ ಗೌಡ, ಆಶ್ವಾಸನೆ ಆಧಾರದಲ್ಲಿ ಚುನಾವಣೆ ನಡೆಯಬಾರದು. ನಡೆದ ಹಾದಿಯ ಆಧಾರದಲ್ಲಿ ಚುನಾವಣೆ ಎದುರಿಸಬೇಕು. ಕೊಡಗಿನಲ್ಲಿ ಇಬ್ಬರು ಆದರ್ಶ ವ್ಯಕ್ತಿಗಳು ಶಾಸಕರಾಗಿದ್ದು, ಈ ಬಾರಿಯೂ ಅವರೇ ಆರಿಸಿ ಬರುತ್ತಾರೆ ಎಂದು ಹೇಳಿದರು.

    ಜೀವಿಜಯ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು ಬಿ.ಎ. ಜೀವಿಜಯ ಅವರ ನಡೆ ಸ್ವಾಗತಾರ್ಹ, ಅವರಿಗೆ ಈಗಲಾದರೂ ತಪ್ಪಿನ ಅರಿವಾಗಿದೆ ಎಂದರು. ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಬಿನ್ ದೇವಯ್ಯ, ಮಾಜಿ ಎಂಎಲ್‌ಸಿ ಸುನಿಲ್ ಸುಬ್ರಹ್ಮಣಿ, ಜಿಲ್ಲಾ ವಕ್ತಾರ ಮಹೇಶ್ ಜೈನಿ, ನಗರಸಭೆ ಸದಸ್ಯೆ ಅನಿತಾ ಪೂವಯ್ಯ, ಪಕ್ಷದ ಪ್ರಮುಖರಾದ ರವಿಕಾಳಪ್ಪ, ಕಾಂಗೀರ ಸತೀಶ್, ಚಿಲ್ಲನ ಗಣಿಪ್ರಸಾದ್‌ಮ ಮನು ಮಂಜುನಾಥ್, ಅಣ್ಣಪ್ಪ ಸುದ್ದಿಗೋಷ್ಠಿಯಲ್ಲಿ ಇದ್ದರು.


    ಕಾಂಗ್ರೆಸ್‌ಗೆ ವಿನಾಶ ಕಾಲೇ ವಿಪರೀತ ಬುದ್ಧಿ ಎನ್ನುವಂತಾಗಿದ್ದು ದೇಶದ್ರೋಹಿ ಮತ್ತು ದೇಶಪ್ರೇಮಿಗಳ ಮಧ್ಯೆ ವ್ಯತ್ಯಾಸವೇ ಗೊತ್ತಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಹೇಳಿದರು. ಭಜರಂಗ ದಳ ನಿಷೇಧದ ಬಗ್ಗೆ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಪ್ರಸ್ತಾಪವಾಗಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು ಭಜರಂಗದಳದ ಬಗ್ಗೆ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಪ್ರಸ್ತಾಪ ಮಾಡಿರುವುದು ಸರಿಯಲ್ಲ ಎಂದರು. ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಪ್ರಿಯಾಂಕ ಖರ್ಗೆ ಬಳಸಿರುವ ಭಾಷೆ ಬಗ್ಗೆ ಮಾತನಾಡಿದ ಸದಾನಂದ ಗೌಡ, ಉನ್ನತ ಸ್ಥಾನದಲ್ಲಿ ಕುಳಿತವರು ಸಣ್ಣ ಶಬ್ದಗಳಲ್ಲಿ ಮಾತಾಡುವುದು ಸರಿಯಲ್ಲ. ನಾಯಕರನ್ನು ಮೌಲ್ಯಮಾಪನ ಮಾಡಲು ಇದೊಂದು ಅವಕಾಶ ಎಂದು ಹೇಳಿದರು. ಮಡಿಕೇರಿಯಲ್ಲಿ ಬುಧವಾರ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

    ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಭಾರತ ಅಭಿವೃದ್ಧಿಯ ದಾರಿಯಲ್ಲಿ ಸಾಗುತ್ತಿದೆ. ಜಾಗತಿಕ ಸಮಸ್ಯೆಗಳ ಪರಿಹಾರಕ್ಕೆ ಜಗತ್ತು ಭಾರತದ ಕಡೆಗೆ ನೋಡುವಂತಾಗಿದೆ ಎಂದರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts