

ಆಂಧ್ರಪ್ರದೇಶ: ತಮಿಳು ಮತ್ತು ತೆಲುಗು ಚಿತ್ರರಂಗದ 'ಮಿಲ್ಕಿ ಬ್ಯೂಟಿ' ನಟಿ ತಮನ್ನಾ ಭಾಟಿಯಾ ಅವರ ಅಭಿಮಾನಿಗಳಿಗೆ ಇದೀಗ ಬೇಸರದ ಸುದ್ದಿಯೊಂದು ಕೇಳಿಬಂದಿದೆ.
ತಮನ್ನಾ ನಟನೆಯ 'ಜೈಲರ್' ಚಿತ್ರ ಇದೀಗ ಬಿಡುಗಡೆಗೆ ಸಜ್ಜಾಗಿದ್ದು, ಈ ಚಿತ್ರದಲ್ಲಿ ಅವರು ಭರ್ಜರಿಯಾಗಿ ಸ್ಟೆಪ್ಸ್ ಹಾಕಿರುವ 'ಕಾವಾಲಾ' ಹಾಡು ಸಾಮಾಜಿಕ ಜಾಲತಾಣದಲ್ಲಿ ಭಾರೀ ಮೆಚ್ಚುಗೆ ಪಡೆಯುವ ಮೂಲಕ ವ್ಯಾಪಕ ವೈರಲ್ ಆಗಿದೆ. ಸದ್ಯ ಈ ಹಾಡಿನ ತೆಲುಗು ವರ್ಶನ್ ಅನ್ನು ರಿಲೀಸ್ ಮಾಡಲು ಹೈದರಾಬಾದ್ ಕಾಲೇಜಿಗೆ ಬರುತ್ತೇನೆ ಎಂದು ಮಂಗಳವಾರ ಹೇಳಿದ್ದ ನಟಿ, ಇದೀಗ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಆಗಮಿಸಲು ಸಾಧ್ಯವಾಗಿಲ್ಲ. ಈ ಸುದ್ದಿ ಅವರ ಅಭಿಮಾನಿಗಳಿಗೆ ತೀವ್ರ ಬೇಸರವನ್ನು ತಂದೊಡ್ಡಿದೆ.
'ಜೈಲರ್' ಚಿತ್ರದ ಮೊದಲ ಸಿಂಗಲ್ ಕಾವಾಲಾ ಸಾಂಗ್ ತಮಿಳು ಆವೃತ್ತಿಯಲ್ಲಿ ಹಿಟ್ ಆಗಿದ್ದು, ತೆಲುಗು ಭಾಷೆಯ ಹಾಡನ್ನು ಹೈದರಾಬಾದ್‌ನ ಸಿಎಂಆರ್ ಕಾಲೇಜಿನಲ್ಲಿ ಬಿಡುಗಡೆಗೊಳಿಸಲು ಬರಲಿದ್ದೇನೆ ಎಂದು ತಮನ್ನಾ ಹೇಳಿದ್ದರು. ಆದ್ರೆ, ಹೈದರಾಬಾದ್‌ನಲ್ಲಿ ಭಾರೀ ಮಳೆಯಿಂದಾಗಿ ರಿಲೀಸ್ ಸಮಾರಂಭವನ್ನು ಇದೀಗ ಮೊಟಕುಗೊಳಿಸಲಾಗಿದೆ. ಇದಕ್ಕೆ ಪರ್ಯಾಯವಾಗಿ ಸಾಂಗ್ ಅನ್ನು ಜೆಮಿನಿ ಯುಟ್ಯೂಬ್ ಚಾನೆಲ್‌ನಲ್ಲಿ ಇಂದು (ಜುಲೈ 26) ಸಂಜೆ 4 ಗಂಟೆಗೆ ಆಫ್ಲೈನ್ ಮೂಲಕ ರಿಲೀಸ್ ಮಾಡಲಾಗಿದೆ.
ತಮ್ಮ ನೆಚ್ಚಿನ ನಟಿ ಕಾಲೇಜಿಗೆ ಆಗಮಿಸಲಿದ್ದಾರೆ ಎಂದು ಕಾದು ಕುಳಿತ್ತಿದ್ದ ಅಭಿಮಾನಿಗಳಿಗೆ ಇದೀಗ ಅತೀವ ಬೇಸರ ಉಂಟಾಗಿದೆ. ಸೂಪರ್‌ಸ್ಟಾರ್, ತಲೈವಾ ರಜನಿಕಾಂತ್ ಅಭಿನಯದ ಜೈಲರ್ ಚಿತ್ರವನ್ನು ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನ ಮಾಡಿದ್ದಾರೆ,(ಏಜೆನ್ಸೀಸ್).