

‘ಸಂಸ್ಕೃತಿ’ ಎಂಬ ಪದಕ್ಕೆ ವಿವಿಧ ಪಠ್ಯಗ್ರಂಥಗಳು ಹಾಗೂ ಶಬ್ದಕೋಶಗಳು ವಿವಿಧ ರೀತಿಯ ಅರ್ಥನಿರೂಪಣೆಗಳನ್ನು ನೀಡಿವೆ. ಮಾನವ ಶಾಸ್ತ›ಜ್ಞರು ಹೇಳುವಂತೆ, ವ್ಯಕ್ತಿಯು ಒಂದು ಸಮೂಹದ ಸದಸ್ಯನಾಗಿ ಕಲಿತು ಮೈಗೂಡಿಸಿಕೊಳ್ಳುವ ನಂಬಿಕೆ-ನೀತಿ, ನಡೆ-ನುಡಿ, ಆಚಾರ-ವಿಚಾರ ಹಾಗೂ ಇತರ ಯಾವುದೇ ಸಾಮರ್ಥ್ಯ-ಅಭ್ಯಾಸಗಳ ಒಟ್ಟು ಸಂಗ್ರಹವೇ ಆ ಸಮೂಹದ ಸಂಸ್ಕೃತಿ. ವೆಬ್ಸ ್ಟ್ ಶಬ್ದಕೋಶವು ಸಂಸೃ್ಕಯನ್ನು, ಯಾವುದೇ ಸಮೂಹದಲ್ಲಿ ಅದರ ಸದಸ್ಯರಲ್ಲಿ ಸಾಮಾನ್ಯವಾಗಿ ಕಂಡುಬರುವ ಮನೋಭಾವನೆಗಳು, ಮೌಲ್ಯಗಳು, ಗುರಿಗಳು ಹಾಗೂ ಆಚಾರಗಳೆಂದು ವರ್ಣಿಸುತ್ತದೆ. ಸಂಸ್ಕೃತಿಯೆಂದರೆ ಒಂದು ಸಮೂಹದ ಜನರ ಜೀವನ ವಿಧಾನವೆಂದು ಬಹು ಸರಳವಾಗಿ ಕೇಂಬ್ರಿಜ್ ಶಬ್ದಕೋಶವು ತಿಳಿಸುತ್ತದೆ. ಇದು ಸಂಸ್ಕೃತಿಯ ಸಮಗ್ರ ಅರ್ಥನಿರೂಪಣೆಯಾಗಿದ್ದು, ಇದರಲ್ಲಿ ಈ ಮೇಲೆ ಹೇಳಿರುವ ಎಲ್ಲಾ ಅಂಶಗಳೂ ಅಡಕವಾಗಿವೆ. ಆದ್ದರಿಂದ ನಾವು ಸಂಸ್ಕೃತಿಯೆಂದರೆ ಜನರ ಜೀವನ ವಿಧಾನವೆಂಬ ಅರ್ಥದಲ್ಲಿಯೇ ಸನಾತನ ಧರ್ಮದ ಸಂಸ್ಕೃತಿ ಅಥವಾ ಜೀವನ ವಿಧಾನವನ್ನು ಈಗ ವಿಶ್ಲೇಷಿಸೋಣ.
ಸಂಸೃ್ಕ ಭಾಷೆಯಲ್ಲಿ ಸಂಸ್ಕೃತಿಯ ಮೂಲಾರ್ಥವು ಸಂಸ್ಕರಣದಿಂದ ಉನ್ನತೀಕರಿಸಲ್ಪಟ್ಟಿರುವುದೆಂಬುದಾಗಿದೆ. ಉದಾಹರಣೆಗೆ, ನುರಿತ ಶಿಲ್ಪಿಯು ಒರಟಾದ ಬಂಡೆಯನ್ನು ಕೆತ್ತಿ ಅದನ್ನು ವಿಗ್ರಹವನ್ನಾಗಿ ಮಾರ್ಪಡಿಸುತ್ತಾನೆ. ಹೀಗೆ ಕೆತ್ತುವ ಸಂಸ್ಕರಣ ಕ್ರಿಯೆಯಿಂದ ಒರಟಾದ ಬಂಡೆ ವಿಗ್ರಹದ ಉನ್ನತ ಸ್ಥಿತಿ ಪಡೆದು ಪೂಜಿಸಲ್ಪಡುತ್ತದೆ. ಅಂತೆಯೇ ಭತ್ತವನ್ನು ಕುಟ್ಟಿ ಹೊಟ್ಟನ್ನು ತೆಗೆಯುವುದರಿಂದ ಅದು ಅಕ್ಕಿಯಾಗಿ ಮಾರ್ಪಟ್ಟು ಸೇವನೆಗೆ ಯೋಗ್ಯವಾಗುತ್ತದೆ. ಇಂತಹ ಸಂಸ್ಕರಣ ವಿಧಾನವನ್ನು ಜೀವನದ ಎಲ್ಲಾ ಕ್ರಿಯೆಗಳಿಗೂ ಅಥವಾ ಅಂಶಗಳಿಗೂ ಅನ್ವಯಿಸಿ ನಾವು ನಮ್ಮ ಜೀವನವನ್ನು ಉನ್ನತ ಮಟ್ಟಕ್ಕೆ ಏರಿಸಿಕೊಳ್ಳಬಹುದು. ಉದಾಹರಣೆಗೆ, ಮೃದು ಭಾಷೆ, ಗಂಭೀರ ನಡಿಗೆ, ಮಧುರ ಗಾಯನ, ಮನೋಹರ ನೃತ್ಯ, ಇತ್ಯಾದಿ. ಅಂತೆಯೇ ಉತ್ತಮವಾಗಿ ಅಡುಗೆ ಮಾಡುವುದು, ಸ್ವಚ್ಛಗೊಳಿಸುವುದು, ಇತ್ಯಾದಿ - ನಮ್ಮ ಎಲ್ಲಾ ದೈನಂದಿನ ಕ್ರಿಯೆಗಳಿಗೂ ಇದು ಅನ್ವಯವಾಗುತ್ತದೆ. ಸಂಸ್ಕರಣದಿಂದ ಉನ್ನತೀಕರಿಸಲ್ಪಟ್ಟ ಜೀವನದ ಎಲ್ಲಾ ಅಂಶಗಳೂ ಉತ್ತಮ ಸಂಸ್ಕೃತಿಯ ಲಕ್ಷಣಗಳಾಗಿವೆ. ಸನಾತನ ಧರ್ಮದ ಸಂಸ್ಕೃತಿಯು ಇಟ್ಟಿರುವ ಜೀವನೋದ್ದೇಶವೆಂದರೆ- ನಮ್ಮನ್ನು ನಾವು ದಿನದಿಂದ ದಿನಕ್ಕೆ ಸಂಸ್ಕರಿಸಿಕೊಳ್ಳುತ್ತಾ, ಜೀವನದ ಎಲ್ಲಾ ವಿಭಾಗಗಳಲ್ಲಿಯೂ ಉನ್ನತ ಮಟ್ಟಕ್ಕೇರುತ್ತಾ, ಕೊನೆಗೆ ದಿವ್ಯತೆಯ ಪ್ರತಿಮೂರ್ತಿಗಳೇ ಆಗಬೇಕು. ಇಂತಹ ದಿವ್ಯತೆಯ ಸಾಕ್ಷಾತ್ಕಾರಕ್ಕೆ ಬುನಾದಿಯಾಗಿರುವುದು ನಮ್ಮ ಅಂತರಂಗದ ಸಂಸ್ಕರಣ - ದುಷ್ಟ ಸಂಸ್ಕಾರಗಳನ್ನು ತೊರೆದು ದಿವ್ಯ ಗುಣಗಳನ್ನು ಬೆಳೆಸಿಕೊಳ್ಳುವುದು. ಇದನ್ನೇ ಶ್ರೀ ಸತ್ಯ ಸಾಯಿ ಬಾಬಾ ಅವರು, ‘End of culture is perfection’ ಪರಿಪೂರ್ಣತೆಯೇ ಸಂಸ್ಕೃತಿಯ ಗುರಿ ಎಂದು ಹೇಳಿದ್ದಾರೆ. ಮಾನವತ್ವದ ಪರಿಪೂರ್ಣತೆಯೆಂದರೆ ದಿವ್ಯತ್ವವೇ ಆಗಿದೆ.
ಮಾನವತ್ವದಿಂದ ದಿವ್ಯತ್ವಕ್ಕೆ ಏರಲು ನಾವು ಎಲ್ಲಿಂದ ಪ್ರಾರಂಭಿಸಬೇಕು? ಅಂತರಂಗ ಶುದ್ಧಿ ಅಥವಾ ಚಿತ್ತಶುದ್ಧಿಯಿಂದ ಮಾತ್ರ ದಿವ್ಯತ್ವದ ಸಾಕ್ಷಾತ್ಕಾರವಾಗುತ್ತದೆ. ಚಿತ್ತಶುದ್ಧಿ ಗಳಿಸಲು ಶುದ್ಧಕರ್ಮಗಳನ್ನು ಮಾಡಬೇಕೆಂದು ಶ್ರೀ ಆದಿ ಶಂಕರರು ‘ವೇದಾಂತ ಡಿಂಡಿಮ’ದಲ್ಲಿ ಘೊಷಿಸಿದ್ದಾರೆ- ಕರ್ವಣಿ ಚಿತ್ತಶುದ್ಧ್ಯರ್ಥಂ. ಶುದ್ಧಕರ್ಮಗಳೆಂದರೇನು? ನಿಸ್ವಾರ್ಥ ಕರ್ಮಗಳೇ ಶುದ್ಧ ಕರ್ಮಗಳು. ‘ಕರ್ವಣಿ ಬಂಧೀನಿ ಮನುಷ್ಯಲೋಕೇ’ ಎಂಬುದು ಭಗವದ್ಗೀತೆಯ ವಾಕ್ಯ. ಅಂದರೆ, ಸ್ವಾರ್ಥಪೂರ್ಣ ಕರ್ಮಗಳು ನಮ್ಮ ಬಂಧನಕ್ಕೆ ಕಾರಣವಾಗುತ್ತವೆ. ಫಲಾಪೇಕ್ಷೆಯಿಲ್ಲದೆ ನಿಸ್ವಾರ್ಥವಾಗಿ ಮಾಡಿದ ಕರ್ಮಗಳು ಮಾತ್ರ ನಮ್ಮನ್ನು ಬಂಧನದಿಂದ ಬಿಡುಗಡೆ ಮಾಡುತ್ತವೆ.
ಸನಾತನ ಧರ್ಮದ ಪ್ರಕಾರ, ಅತ್ಯಂತ ಶುದ್ಧಕರ್ಮಗಳೆಂದರೆ, ತ್ಯಾಗಬುದ್ಧಿಯಿಂದ ನಿಸ್ವಾರ್ಥವಾಗಿ ಪರಹಿತಕ್ಕಾಗಿ ಮಾಡುವ ಕರ್ಮಗಳು. ತ್ಯಾಗೇನೈಕೇ ಅಮೃತತ್ವ ಮಾನಶುಃ, ಎಂದು ತೈತ್ತಿರೀಯ ಉಪನಿಷತ್ತು ಸಾರಿದೆ. ತ್ಯಾಗದಿಂದ ಮಾತ್ರ ಅಮೃತತ್ವ ಅಥವಾ ದಿವ್ಯತ್ವವನ್ನು ಪಡೆಯಬಹುದು. ಹೀಗೆ ಅನೂಚಾನ ಕಾಲದಿಂದಲೂ ಸನಾತನ ಧರ್ಮದ ಸಂಸ್ಕೃತಿಯು ತ್ಯಾಗದ ಸಂಸ್ಕೃತಿಯಾಗಿದೆ. ತ್ಯಕ್ತೇನ ಭುಂಜೀಥ - ತ್ಯಾಗ ಭಾವದೊಂದಿಗೆ ಭುಂಜಿಸು ಅಥವಾ ಸೇವಿಸು, ಎಂಬುದು ಈಶಾವಾಸ್ಯ ಉಪನಿಷತ್ತಿನ ಬೋಧನೆ. ನಮ್ಮ ಆಶೆಗಳನ್ನು ಹಾಗೂ ಗಳಿಕೆಯನ್ನು ಸ್ವಲ್ಪ ಮಟ್ಟಿಗಾದರೂ ನಮಗಿಂತ ಹೆಚ್ಚು ಕಷ್ಟದಲ್ಲಿರುವವರ ಹಿತಕ್ಕಾಗಿ ತ್ಯಜಿಸಿ ಬದುಕುವುದು ಸನಾತನ ಧರ್ಮ ತೋರುವ ಜೀವನ ವಿಧಾನವಾಗಿದೆ. ಇದರಿಂದ ವ್ಯಕ್ತಿಯ ಶ್ರೇಯಸ್ಸಿನ ಜೊತೆಗೆ ಸಮಾಜ ಕಲ್ಯಾಣವೂ ಆಗುತ್ತದೆ. ಆದ್ದರಿಂದ ತ್ಯಾಗ ಹಾಗೂ ದಾನಗಳು ಹಿಂದಿನಿಂದಲೂ ನಮ್ಮ ದೈನಂದಿನ ಜೀವನದ ಪ್ರತಿ ಆಚಾರ ಮತ್ತು ಕ್ರಿಯೆಯಲ್ಲಿಯೂ ಹಾಸುಹೊಕ್ಕಾಗಿ ಬೆಳೆದುಬಂದಿವೆ. ಉದಾಹರಣೆಗೆ, ನಮ್ಮ ಅವ್ವಂದಿರು ಮನೆಯಲ್ಲಿ ಅಡುಗೆ ಪ್ರಾರಂಭಿಸುವ ಮೊದಲು ಪ್ರತಿದಿನವೂ ಒಂದು ಹಿಡಿ ಅಕ್ಕಿಯನ್ನು ಬೇರೊಂದು ಪಾತ್ರೆಯಲ್ಲಿ ಸಂಗ್ರಹಿಸಿ, ವಾರಕ್ಕೊಮ್ಮೆ ಯಾ ತಿಂಗಳಿಗೊಮ್ಮೆ ನಿರ್ಗತಿಕರಿಗಾಗಲೀ, ದೇವಸ್ಥಾನಗಳಲ್ಲಿ ನಡೆಯುವ ಅನ್ನದಾನಕ್ಕಾಗಲೀ ನೀಡುವುದನ್ನು ಕಂಡಿರಬಹುದು. ಅಂತೆಯೇ ನಮ್ಮ ತಾಯಂದಿರು ಪ್ರತಿನಿತ್ಯ ಸ್ವಲ್ಪ ಆಹಾರ ಹಾಗೂ ನೀರನ್ನು ಹಸಿದ ಪ್ರಾಣಿ-ಪಕ್ಷಿಗಳಿಗಾಗಿ ಹೊರಗಿಡುವ ಸಂಪ್ರದಾಯ. ಪ್ರತಿ ಪ್ರಾತಃಕಾಲ ಮನೆಯ ಮುಂದೆ ಹಾಕುವ ರಂಗೋಲಿಗಾಗಿ ಹಿಂದೆ ಅಕ್ಕಿಯ ಪುಡಿ ಉಪಯೋಗಿಸುತ್ತಿದ್ದರು. ಇದರ ಉದ್ದೇಶ, ಅದು ಇರುವೆಯಂತಹ ಕ್ರಿಮಿ-ಕೀಟಗಳಿಗೆ ಆಹಾರವಾಗಲೆಂದು! ಇಂದಿನ ಕಾಲದಲ್ಲಿ, ರಂಗೋಲಿಗಾಗಿ ಕೃತ್ರಿಮ ಬಣ್ಣದ ಪುಡಿಗಳನ್ನು ಉಪಯೋಗಿಸುವುದು ನಮ್ಮ ಸಂಸ್ಕೃತಿಯ ವಿಸ್ಮರಣೆಗೆ ಒಂದು ಕುರುಹಾಗಿದೆ. ಇಂದಿಗೂ ಸಂಪ್ರದಾಯಸ್ಥ ಸುಸಂಸ್ಕೃತ ಕುಟುಂಬಗಳಲ್ಲಿ, ಹಸಿದು ಬಂದ ಒಬ್ಬ ಅತಿಥಿಗಾಗಲೀ, ಭಿಕ್ಷುಕನಿಗಾಗಲೀ ಆಹಾರ ನೀಡದೆ ತಾವು ಊಟ ಮಾಡುವುದಿಲ್ಲ! ಹಿಂದೆ ಇದು ಪ್ರತಿ ಕುಟುಂಬದ ದೈನಂದಿನ ಸಂಪ್ರದಾಯವೇ ಆಗಿತ್ತು. ರಾಜ-ಮಹಾರಾಜರ ಕಾಲದಲ್ಲಿ ಸಾಮಾನ್ಯ ಪ್ರಜೆಯಿಂದ ಹಿಡಿದು ರಾಜನವರೆಗೆ ಎಲ್ಲರೂ ದೇವಸ್ಥಾನಗಳಿಗೆ ತಮ್ಮ ಗಳಿಕೆಯ ಒಂದು ಭಾಗವನ್ನು ಪ್ರತಿವರ್ಷ ದಾನ ಮಾಡುತ್ತಿದ್ದರು. ಏಕೆಂದರೆ ಆಗ ದೇವಸ್ಥಾನಗಳು ಕೇವಲ ಭಗವದಾರಾಧನೆಯ ಕೇಂದ್ರಗಳಾಗಿರದೆ, ಹಲವು ರೀತಿಯ ಸಾಮಾಜಿಕ ಸೇವೆಯ ತಾಣಗಳೂ ಆಗಿದ್ದವು. ಹೀಗೆ, ತ್ಯಾಗ-ದಾನಗಳನ್ನು ಜನಜೀವನದಲ್ಲಿ ನೈತಿಕ ಹೊಣೆಗಾರಿಕೆಯ ಅವಿಭಾಜ್ಯ ಭಾಗವಾಗಿ ಸ್ವೀಕರಿಸಿದ್ದರು. ಇದರಿಂದ ವ್ಯಕ್ತಿಯ ಅಂತರಂಗ ಸಂಸ್ಕರಣವಾಗಿ ಜೀವನದ ಪರಮೋದ್ದೇಶವಾದ ದೈವ ಸಾಕ್ಷಾತ್ಕಾರದೆಡೆಗೆ ಪ್ರತಿಯೊಬ್ಬರೂ ಬಹು ಸಹಜವಾಗಿ ಮುನ್ನಡೆಯುತ್ತಿದ್ದರು.
ನನ್ನ ಪ್ರಕಾರ, ಸಂಸ್ಕೃತಿಯೆಂದರೆ ಇತರರ ಬಗ್ಗೆ ಕಾಳಜಿ (concern for others) ಅಷ್ಟೇ. ಅತಿ ಶ್ರೇಷ್ಠ ಸುಸಂಸೃ್ಕ ಜೀವನವೆಂದರೆ, ಇತರರ, ಅದರಲ್ಲೂ ದೀನ-ದರಿದ್ರರ ದುಃಖ-ದುಮ್ಮಾನಗಳಿಗಾಗಿ ಮಿಡಿಯುತ್ತಾ, ಅವರಿಗೆ ಶಕ್ತಿಮೀರಿ ಸಹಾಯ ಮಾಡುತ್ತಾ ಬದುಕುವುದು. ಬೃಹದಾರಣ್ಯಕ ಉಪನಿಷತ್ತಿನ ಒಂದು ಕಥೆಯಲ್ಲಿ, ದೇವತೆಗಳು, ದಾನವರು ಹಾಗೂ ಮಾನವರು ಒಟ್ಟಿಗೆ ತಮ್ಮ ಜನಕನಾದ ಪ್ರಜಾಪತಿಯ ಬಳಿಸಾರಿ, ಉಪದೇಶ ನೀಡಲು ಪ್ರಾರ್ಥಿಸುತ್ತಾರೆ. ದಿವ್ಯ ಶಕ್ತಿಗಳ ಪ್ರಯೋಗದಲ್ಲಿ ದಮ (ನಿಯಂತ್ರಣ) ಆಚರಿಸಲು ದೇವತೆಗಳಿಗೆ ಅವನು ಬೋಧಿಸುತ್ತಾನೆ; ಕ್ರೌರ್ಯವನ್ನು ನಿಯಂತ್ರಿಸಲು ದಯೆಯನ್ನು ಆಚರಣೆಗೆ ತರಲು ದಾನವರಿಗೆ ಉಪದೇಶಿಸುತ್ತಾನೆ; ಲೋಭವನ್ನು ಕಡಿಮೆ ಮಾಡಿಕೊಳ್ಳಲು ದಾನವನ್ನು ಆಶ್ರಯಿಸಬೇಕೆಂದು ಮಾನವರಿಗೆ ಆಜ್ಞಾಪಿಸುತ್ತಾನೆ. ಹೀಗೆ ದಾನವೇ ಮಾನವರ ಜೀವನ ವಿಧಾನವಾಗಬೇಕು.
ತೈತ್ತಿರೀಯ ಉಪನಿಷತ್ತಿನ ಶಿಕ್ಷಾವಲ್ಲಿಯಲ್ಲಿ ವಿದ್ಯಾಭ್ಯಾಸ ಮುಗಿಸಿ ಹೊರಹೋಗುತ್ತಿರುವ ಶಿಷ್ಯರಿಗೆ ಬೋಧಿಸುತ್ತಿದ್ದ, ‘ಭೂತ್ಯೈ ನ ಪ್ರಮದಿತವ್ಯಂ’- ಸರ್ವಭೂತಹಿತ ಕಾರ್ಯವನ್ನು ಎಂದಿಗೂ ಬಿಡಬೇಡ, ಎಂಬ ಆದೇಶವು ಸರ್ವಕಾಲಿಕ ಪ್ರಸ್ತುತವಾಗಿದೆ. ಹಾಗೆಯೇ ಮುಂದುವರಿದು ಗುರುವು, ‘ಶ್ರದ್ಧಯಾ ದೇಯಂ ಅಶ್ರದ್ಧಯಾ ಅದೇಯಂ’- ದಾನವನ್ನು ನೀನು ಶ್ರದ್ಧೆಯಿಂದ ನೀಡು, ಅಶ್ರದ್ಧೆಯಿಂದ ಅಲ್ಲ, ಎಂದು ಒತ್ತಿ ಹೇಳುತ್ತಾನೆ. ದಾನ ಮಾಡುವವನಲ್ಲಿ ಪ್ರಾಮಾಣಿಕ, ಪರಿಶುದ್ಧ ಭಾವನೆಯಿರಬೇಕೇ ಹೊರತು, ಆಡಂಬರ ಅಥವಾ ಫಲಾಪೇಕ್ಷೆಯಿರಬಾರದು. ಅಲ್ಲದೆ, ‘ಶ್ರಿಯಾ ದೇಯಂ’ ದಾನ ತೆಗೆದುಕೊಳ್ಳುವವನ ಅವಶ್ಯಕತೆಯನ್ನು ಪೂರೈಸುವಷ್ಟು ಧಾರಾಳವಾಗಿ ಕೊಡು, ‘ಭಿಯಾ ದೇಯಂ’- ತಾನು ಕೊಡುತ್ತಿರುವುದು ಕಡಿಮೆಯಾಗುತ್ತಿದೆಯೇನೋ ಎಂಬ ಭಯದಿಂದ ಕೊಡು, ‘ಹ್ರಿಯಾ ದೇಯಂ’- ದಾನ ಮಾಡುವ ಅವಕಾಶವು ನಿನ್ನ ಸೌಭಾಗ್ಯವೆಂಬ ನಮ್ರತೆಯಿಂದ ಕೊಡು ಹಾಗೂ ‘ಸಂವಿಧಾ ದೇಯಂ’- ದಾನ ತೆಗೆದುಕೊಳ್ಳುವವನ ಅವಶ್ಯಕತೆಯನ್ನರಿತು ಕೊಡು. ಹೀಗೆ ಗುರುವು ದಾನದ ವಿಧಾನವನ್ನು ತಿಳಿಸುತ್ತಾನೆ.
ಅನ್ನದಾನಂ ಪರಂ ದಾನಂ ವಿದ್ಯಾದಾನಂ ಅತಃ ಪರಮ್
ಅನ್ನೇನ ಕ್ಷಣಿಕಾ ತೃಪ್ತಿಃ ಯಾವಜ್ಜೀವಂ ಚ ವಿದ್ಯಯಾ M||
ಅನ್ನದಾನವು ಉತ್ತಮ ದಾನ; ವಿದ್ಯಾದಾನವು ಅದಕ್ಕಿಂತಲೂ ಶ್ರೇಷ್ಠ. ಏಕೆಂದರೆ, ಅನ್ನದಿಂದ ಕ್ಷಣಿಕ ತೃಪ್ತಿಯಾಗುತ್ತದೆ, ಆದರೆ, ವಿದ್ಯಾದಾನದಿಂದ ಜೀವನದಾದ್ಯಂತ ವಿದ್ಯಾವಂತನು ಸುಖಿಯಾಗುತ್ತಾನೆ.
ಶ್ರೀ ಸತ್ಯಸಾಯಿ ಗುರುಕುಲ ಸಮೂಹ ವಿದ್ಯಾಸಂಸ್ಥೆಗಳಲ್ಲಿ, ಬಡ ಮಕ್ಕಳಿಗೆ ಉಚಿತ ಆಹಾರ ಕೊಡುವುದು ಮಾತ್ರವಲ್ಲದೆ, ಎಲ್ಲಾ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಶಾಲೆಯಿಂದ ಪ್ರಾರಂಭಿಸಿ ವಿಶ್ವವಿದ್ಯಾಲಯದವರೆಗೆ ಸಂಪೂರ್ಣ ಉಚಿತ ಶಿಕ್ಷಣ ನೀಡಲಾಗುತ್ತಿದೆ; ಮುಂದಿನ ವರ್ಷದಿಂದ ವೈದ್ಯಕೀಯ ಶಿಕ್ಷಣವನ್ನೂ ಗ್ರಾಮೀಣ ಬಡ ವಿದ್ಯಾರ್ಥಿಗಳಿಗೆ ಉಚಿತವಾಗಿ ನೀಡಲಾಗುವುದು. ಇದು ಮಾನವರನ್ನು ಮಾಧವರನ್ನಾಗಿ ಪರಿವರ್ತಿಸುವ ಸನಾತನ ಧರ್ಮದ ತ್ಯಾಗ ಸಂಸ್ಕೃತಿಯನ್ನು ಜೀವಂತವಾಗಿಡುವ ದಿಶೆಯಲ್ಲಿ ನಮ್ಮ ಪ್ರಯತ್ನ.
ಇಂತಹ ತ್ಯಾಗ ಸಂಸ್ಕೃತಿಯನ್ನು ನಮ್ಮ ಸಮಾಜದಲ್ಲಿ ಪುನರುಜ್ಜೀವನಗೊಳಿಸಿ, ಎಲ್ಲರೂ ಸುಲಭವಾಗಿ ಅದನ್ನು ಆಚರಣೆಗೆ ತರಲು ಅನುಕೂಲವಾಗುವಂತೆ, ಒಂದು ರೂಪಾಯಿ ಯೋಜನೆ (one rupee app) ಯನ್ನು ಕಳೆದ ತಿಂಗಳಿನಿಂದ ಪ್ರಾರಂಭ ಮಾಡಿದ್ದೇವೆ. ಇದರ ಮೂಲಕ ಪ್ರತಿದಿನ ಕೇವಲ ಒಂದು ರೂಪಾಯಿಯನ್ನು ನೀಡಿ, ಬಡ ಮಕ್ಕಳಿಗೆ ಉಚಿತ ಪೌಷ್ಟಿಕ ಆಹಾರ, ಶಿಕ್ಷಣ ಹಾಗೂ ಆರೋಗ್ಯ ಸೇವೆ ಒದಗಿಸಲು ಎಲ್ಲರೂ ನೆರವಾಗುವ ಅವಕಾಶವಿದೆ! ಪ್ರತಿದಿನ ಪುಟ್ಟ ಪುಟ್ಟ ತ್ಯಾಗಕಾರ್ಯಗಳನ್ನು ಮಾಡುವ ಜೀವನ ವಿಧಾನವನ್ನು ಮೈಗೂಡಿಸಿಕೊಂಡು ನಾವು ನಮ್ಮ ದೇಶ ಹಾಗೂ ಸಂಸ್ಕೃತಿಗಳನ್ನು ಜೀವಂತವಾಗಿರಿಸೋಣ!
(ಲೇಖಕರು ಸಾಮಾಜಿಕ ಹಾಗೂ ಆಧ್ಯಾತ್ಮಿಕ ಗುರುಗಳು)