ಬ್ರಿಸ್ಬೇನ್​ ಟೆಸ್ಟ್​ ಪ್ರೇಕ್ಷಕರ ಸಾಲಲ್ಲಿ ಸಚಿನ್​ ಪುತ್ರಿ ಸಾರಾ! ಕ್ರಿಕೆಟ್​ ಅಥವಾ ಕ್ರಿಕೆಟಿಗನ ನೋಡಲು ಬಂದರೇ ಎಂದ ಫ್ಯಾನ್ಸ್​!

web sara sachin
Published on

ಬ್ರಿಸ್ಬೇನ್​: ಪ್ರತಿಷ್ಠಿತ ಬಾರ್ಡರ್​-ಗಾವಸ್ಕರ್​ ಟ್ರೋಫಿ ಟೆಸ್ಟ್​ ಸರಣಿ 1-1ರಿಂದ ಸಮಬಲ ಕಂಡ ಬಳಿಕ ಗಾಬಾ ಅಂಗಣದಲ್ಲಿ ಮತ್ತೆ ಮುನ್ನಡೆ ಸಾಧಿಸುವ ಹಂಬಲದೊಂದಿಗೆ ಕಣಕ್ಕಿಳಿದ ಭಾರತ ತಂಡಕ್ಕೆ ಮೊದಲ ದಿನ ಮಳೆ ಅಡಚಣೆಯಿಂದ ನಿರಾಸೆ ಎದುರಾಯಿತು. ಶನಿವಾರ ಆರಂಭಗೊಂಡ ಸರಣಿಯ 3ನೇ ಪಂದ್ಯದಲ್ಲಿ ಟಾಸ್​ ಗೆದ್ದು ಫೀಲ್ಡಿಂಗ್​ ಆಯ್ದುಕೊಂಡು, ಆತಿಥೇಯ ಆಸ್ಟ್ರೆಲಿಯಾವನ್ನು ಬೇಗನೆ ಕಟ್ಟಿಹಾಕುವ ರೋಹಿತ್​ ಶರ್ಮ ಬಳಗದ ಆಸೆಗೆ ಮಳೆ ತಣ್ಣೀರು ಎರಚಿತು. ಇಡೀ ದಿನದಾಟದಲ್ಲಿ ಕೇವಲ 13.2 ಓವರ್​ ಆಟವಷ್ಟೇ ನಡೆಯಿತು. ಇದರ ನಡುವೆ ದಿಗ್ಗಜ ಸಚಿನ್​ ತೆಂಡುಲ್ಕರ್​ ಪುತ್ರಿ ಸಾರಾ ತೆಂಡುಲ್ಕರ್​ ಬ್ರಿಸ್ಬೇನ್​ ಟೆಸ್ಟ್​ನ ಮೊದಲ ದಿನ ಪ್ರೇಕ್ಷಕರ ಸಾಲಿನಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದರು.

ಸಾರಾ ಅವರ ಹಿಂದೆ ಮಾಜಿ ಕ್ರಿಕೆಟಿಗರಾದ ಜಹೀರ್​ ಖಾನ್​ ಮತ್ತು ಹರ್ಭಜನ್​ ಸಿಂಗ್​ ಕುಳಿತಿದ್ದರು. ಬ್ರಿಸ್ಬೇನ್​ನಲ್ಲಿ ಸಾರಾ ಹಾಜರಿ ಸಾಮಾಜಿಕ ಜಾಲತಾಣದಲ್ಲಿ ಕ್ರಿಕೆಟ್​ ಪ್ರೇಮಿಗಳ ಕೌತುಕಕ್ಕೂ ಕಾರಣವಾಯಿತು.

ಸಾರಾ ಕ್ರಿಕೆಟ್​ ಅಥವಾ ಕ್ರಿಕೆಟಿಗನ ಮೇಲಿನ ಪ್ರೀತಿಯಿಂದ ಪಂದ್ಯಕ್ಕೆ ಹಾಜರಾದರೇ ಎಂಬ ಪ್ರಶ್ನೆಯೂ ಎದ್ದಿತು. ಯಾಕೆಂದರೆ ಸಾರಾ ಮತ್ತು ಶುಭಮಾನ್​ ಗಿಲ್​ ಪರಸ್ಪರ ಪ್ರೀತಿಸುತ್ತಿದ್ದಾರೆ ಎಂದು ಕಳೆದ ಕೆಲ ಸಮಯದಿಂದ ಬೆನ್ನುಡಿ (ಗಾಸಿಪ್​) ಹರಿದಾಡುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net