More

    ಸಚಿನ್​ ತೆಂಡೂಲ್ಕರ್ ಬಾಜಿ ಕಟ್ಟಿರುವ ಷೇರು ಮೂರೇ ದಿನಗಳಲ್ಲಿ 45% ಏರಿಕೆ: ಇಂಗ್ಲೆಂಡ್​ನ ರೋಲ್ಸ್ ರಾಯ್ಸ್ ಜತೆ ಒಪ್ಪಂದದ ನಂತರ ಅಪಾರ ಬೇಡಿಕೆ

    ಮುಂಬೈ: ಈ ಸಣ್ಣ ಕಂಪನಿಯ ಷೇರುಗಳು ಈಗ ಘರ್ಜಿಸುತ್ತಿವೆ, ಸಚಿನ್ ತೆಂಡೂಲ್ಕರ್ ಕೂಡ ಈ ಷೇರಿನಲ್ಲಿ ಬಾಜಿ ಕಟ್ಟಿದ್ದಾರೆ, ಈಗ ಈ ಕಂಪನಿಯು ವಿದೇಶಿ ಕಂಪನಿಯೊಂದಿಗೆ ದೊಡ್ಡ ಒಪ್ಪಂದವನ್ನು ಮಾಡಿಕೊಂಡಿದೆ.

    ಹೈದರಾಬಾದ್ ಮೂಲದ ಆಜಾದ್ ಇಂಜಿನಿಯರಿಂಗ್ ಷೇರುಗಳು ಕಳೆದ 3 ದಿನಗಳಲ್ಲಿ 45% ಕ್ಕಿಂತ ಹೆಚ್ಚು ಏರಿಕೆಯಾಗಿದೆ. ಬ್ರಿಟಿಷ್ ದೈತ್ಯ ರೋಲ್ಸ್ ರಾಯ್ಸ್ ಕಂಪನಿಯು ಆಜಾದ್ ಇಂಜಿನಿಯರಿಂಗ್ ಜತೆಗೆ 7 ವರ್ಷಗಳ ದೀರ್ಘಾವಧಿ ಒಪ್ಪಂದಕ್ಕೆ ಸಹಿ ಹಾಕಿದೆ.

    ಹೀಗಾಗಿ, ಸ್ಮಾಲ್​ ಕಂಪನಿಯಾಗಿರುವ ಆಜಾದ್ ಇಂಜಿನಿಯರಿಂಗ್ ಷೇರುಗಳು ರಾಕೆಟ್ ವೇಗದಲ್ಲಿ ಏರಿಕೆ ಕಾಣುತ್ತಿವೆ. ಕಂಪನಿಯ ಷೇರುಗಳು ಬುಧವಾರದ ಇಂಟ್ರಾ ಡೇ ವಹಿವಾಟಿನಲ್ಲಿ 18% ಕ್ಕಿಂತ ಹೆಚ್ಚು ಏರಿಕೆಯಾಗಿ 1013 ರೂ. ತಲುಪಿದ್ದವು. ಇದು ಆಜಾದ್ ಇಂಜಿನಿಯರಿಂಗ್ ಷೇರುಗಳಿಗೆ 52 ವಾರಗಳ ಹೊಸ ಗರಿಷ್ಠ ಬೆಲೆಯಾಗಿದೆ. ಕಳೆದ 3 ದಿನಗಳಲ್ಲಿ ಆಜಾದ್ ಇಂಜಿನಿಯರಿಂಗ್ ಷೇರುಗಳು ಶೇ. 45ರಷ್ಟು ಏರಿಕೆ ಕಂಡಿವೆ. ವಿದೇಶಿ ಕಂಪನಿಯೊಂದಿಗಿನ ದೊಡ್ಡ ಒಪ್ಪಂದದಿಂದಾಗಿ ಆಜಾದ್ ಇಂಜಿನಿಯರಿಂಗ್ ಷೇರುಗಳಲ್ಲಿ ಈ ಏರಿಕೆಯಾಗಿದೆ. ಅನುಭವಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಕೂಡ ಆಜಾದ್ ಇಂಜಿನಿಯರಿಂಗ್ ಕಂಪನಿಯ ಷೇರುಗಳನ್ನು ಖರೀದಿಸಿದ್ದಾರೆ.

    ರೋಲ್ಸ್ ರಾಯ್ಸ್ ಜತೆ 7 ವರ್ಷಗಳ ಒಪ್ಪಂದ:

    ರೋಲ್ಸ್ ರಾಯ್ಸ್ ತನ್ನೊಂದಿಗೆ 7 ವರ್ಷಗಳ ದೀರ್ಘಾವಧಿಯ ಒಪ್ಪಂದಕ್ಕೆ ಸಹಿ ಹಾಕಿದೆ ಎಂದು ಆಜಾದ್ ಇಂಜಿನಿಯರಿಂಗ್ ತನ್ನ ವಿನಿಮಯ ಫೈಲಿಂಗ್‌ನಲ್ಲಿ ತಿಳಿಸಿದೆ. ರೋಲ್ಸ್ ರಾಯ್ಸ್‌ನ ರಕ್ಷಣಾ/ಮಿಲಿಟರಿ ವಿಮಾನ ಇಂಜಿನ್‌ಗಳಿಗೆ ನಿರ್ಣಾಯಕ ಇಂಜಿನ್ ಭಾಗಗಳ ತಯಾರಿಕೆ ಮತ್ತು ಪೂರೈಕೆಗಾಗಿ ಒಪ್ಪಂದವಾಗಿದೆ. ರೋಲ್ಸ್ ರಾಯ್ಸ್, ಬ್ರಿಟನ್ ಇದು ಪ್ರಮುಖ ಐಷಾರಾಮಿ ಕಾರು ಮತ್ತು ಏರೋ ಇಂಜಿನ್ ತಯಾರಿಕಾ ಕಂಪನಿಯಾಗಿದೆ.

    ಈ ಕಾರಣದಿಂದಾಗಿ, ಕಳೆದ 3 ದಿನಗಳಲ್ಲಿ ಆಜಾದ್ ಇಂಜಿನಿಯರಿಂಗ್ ಷೇರುಗಳು 45% ಕ್ಕಿಂತ ಹೆಚ್ಚು ಏರಿಕೆ ಕಂಡಿವೆ. ಆಜಾದ್ ಇಂಜಿನಿಯರಿಂಗ್ ಷೇರುಗಳು ಜನವರಿ 25, 2024 ರಂದು 674.45 ರೂ. ಇದ್ದವು. ಈ ಷೇರುಗಳು 31 ಜನವರಿ 2024 ರಂದು ರೂ 1013 ತಲುಪಿವೆ.

    ಸಚಿನ್ ತೆಂಡೂಲ್ಕರ್ ದೊಡ್ಡ ಬಾಜಿ:

    ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಕಳೆದ ವರ್ಷ ಹೈದರಾಬಾದ್ ಮೂಲದ ಆಜಾದ್ ಇಂಜಿನಿಯರಿಂಗ್​ನಲ್ಲಿ ದೊಡ್ಡ ಪ್ರಮಾಣದ ಬೆಟ್ ಕಟ್ಟಿದ್ದಾರೆ. ತೆಂಡೂಲ್ಕರ್ ಅವರು ಆಜಾದ್ ಎಂಜಿನಿಯರಿಂಗ್ ಐಪಿಒ ಹೊರಬರುವ ಮೊದಲೇ ಹೂಡಿಕೆ ಮಾಡಿದ್ದರು. ಸಚಿನ್ ತೆಂಡೂಲ್ಕರ್ ಅವರು ಮಾರ್ಚ್ 2023 ರಲ್ಲಿ ಆಜಾದ್ ಇಂಜಿನಿಯರಿಂಗ್‌ನಲ್ಲಿ 5 ಕೋಟಿ ರೂ. ಹೂಡಿಕೆ ಮಾಡಿದ್ದರು. ಇದರ ನಂತರ ಕಂಪನಿಯು ಷೇರು ವಿಭಜನೆ ಮತ್ತು ಬೋನಸ್ ಷೇರುಗಳನ್ನು ನೀಡಿದೆ. ಸಚಿನ್ ಈಗ ಆಜಾದ್ ಇಂಜಿನಿಯರಿಂಗ್‌ನ 43,89,210 ಷೇರುಗಳನ್ನು ಹೊಂದಿದ್ದಾರೆ. ತೆಂಡೂಲ್ಕರ್ ಹೊರತಾಗಿ ಕ್ರಿಕೆಟರ್​ ವಿವಿಎಸ್ ಲಕ್ಷ್ಮಣ್, ಬ್ಯಾಡ್ಮಿಂಟನ್​ ತಾರೆಯರಾದ ಸೈನಾ ನೆಹ್ವಾಲ್ ಮತ್ತು ಪಿವಿ ಸಿಂಧು ಕೂಡ ಈ ಕಂಪನಿಯಲ್ಲಿ ಹೂಡಿಕೆ ಮಾಡಿದ್ದಾರೆ.

    122 ರಿಂದ 18 ರೂಪಾಯಿಗೆ ಕುಸಿತ ಕಂಡಿದ್ದ ಷೇರು ಈಗ ಒಂದೇ ದಿನದಲ್ಲಿ 17% ಏರಿಕೆ: ಫೆ. 2ರ ಕಂಪನಿಯ ಸಭೆಯಲ್ಲೇನಾಗಲಿದೆ?

    ಷೇರು ಮಾರುಕಟ್ಟೆ ಪ್ರವೇಶಿಸಿದ ತಕ್ಷಣವೇ 36.59 % ಪ್ರೀಮಿಯಂ: ಚೊಚ್ಚಲ ದಿನವೇ ಹೂಡಿಕೆದಾರರಿಗೆ ಹಣದ ಸುರಿಮಳೆ

    ಈ ಷೇರು ಖರೀದಿಸಲು NSEಯಲ್ಲಿ ಸರತಿಸಾಲು: ಮಾರುವವರೇ ಇಲ್ಲ; ತಿಂಗಳಲ್ಲಿ ಸ್ಟಾಕ್​ ಬೆಲೆ ದುಪಟ್ಟು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts