More

    ಷೇರು ಮಾರುಕಟ್ಟೆ ಪ್ರವೇಶಿಸಿದ ತಕ್ಷಣವೇ 36.59 % ಪ್ರೀಮಿಯಂ: ಚೊಚ್ಚಲ ದಿನವೇ ಹೂಡಿಕೆದಾರರಿಗೆ ಹಣದ ಸುರಿಮಳೆ

    ಮುಂಬೈ: ನೋವಾ ಅಗ್ರಿಟೆಕ್ ಷೇರು ಮಾರುಕಟ್ಟೆಯಲ್ಲಿ ಜೋರಾಗಿಯೇ ಚೊಚ್ಚಲ ಪ್ರವೇಶ ಮಾಡಿದೆ. ಈ ಕಂಪನಿಯ ಷೇರುಗಳು ಭಾರಿ ಪ್ರೀಮಿಯಂನೊಂದಿಗೆ ಮಾರುಕಟ್ಟೆಯಲ್ಲಿ ಪಟ್ಟಿ ಮಾಡಿದ.

    ನೋವಾ ಅಗ್ರಿಟೆಕ್ ಲಿಮಿಟೆಡ್​ (Nova Agritech Ltd.) ಷೇರುಗಳು ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿ (ಬಿಎಸ್‌ಇ) 36.59 ಶೇಕಡಾ ಪ್ರೀಮಿಯಂನೊಂದಿಗೆ 56 ರೂಪಾಯಿ ಬೆಲೆಯಲ್ಲಿ ಪಟ್ಟಿ ಮಾಡಲಾಗಿದೆ.

    ನೋವಾ ಅಗ್ರಿಟೆಕ್​ ಐಪಿಒ ಬೆಲೆ ಪಟ್ಟಿ 39 ರಿಂದ 41 ರೂಪಾಯಿ ಇತ್ತು. ಐಪಿಒದಲ್ಲಿ ಕಂಪನಿಯ ಷೇರುಗಳನ್ನು 41 ರೂ. ಬೆಲೆಯಲ್ಲಿ ನೋವಾ ಅಗ್ರಿಟೆಕ್ ಷೇರುಗಳನ್ನು ಹಂಚಿಕೆ ಮಾಡಿದೆ.

    ದೊಡ್ಡ ಲಾಭಗಳೊಂದಿಗೆ ಪಟ್ಟಿ ಮಾಡಿದ ನಂತರ, ನೋವಾ ಅಗ್ರಿಟೆಕ್ ಷೇರುಗಳು ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿ 5% ರ ಮೇಲಿನ ಸರ್ಕ್ಯೂಟ್‌ನಲ್ಲಿ ಇದ್ದವು. ಇಂಟ್ರಾ ಡೇ ವಹಿವಾಟಿನಲ್ಲಿ 58.29 ರೂಪಾಯಿ ತಲುಪಿದ್ದವು. ಇದೇ ಸಮಯದಲ್ಲಿ, ನ್ಯಾಷನಲ್ ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿ ಕಂಪನಿಯ ಷೇರುಗಳು ಶೇಕಡಾ 5 ರ ಅಪ್ಪರ್ ಸರ್ಕ್ಯೂಟ್‌ನೊಂದಿಗೆ 57.75 ರೂ.ಗೆ ತಲುಪಿದ್ದವು.

    ಜನವರಿ 23ರಿಂದ 25ರವರೆಗೆ ಚಂದಾದಾರಿಕೆಗೆ ಈ ಐಪಿಒ ತೆರೆದುಕೊಂಡಿತ್ತು. ಕಂಪನಿಯ ಸಾರ್ವಜನಿಕ ಷೇರು ವಿತರಣೆಯ ಒಟ್ಟು ಗಾತ್ರ 143.81 ಕೋಟಿ ರೂಪಾಯಿ ಆಗಿದೆ. ಚಿಲ್ಲರೆ ಹೂಡಿಕೆದಾರರು ಕಂಪನಿಯ ಈ ಐಪಿಒನಲ್ಲಿ ಕನಿಷ್ಠ 1 ಲಾಟ್ ಮತ್ತು ಗರಿಷ್ಠ 13 ಲಾಟ್‌ಗಳೊಂದಿಗೆ ಹೂಡಿಕೆ ಮಾಡಲು ಅವಕಾಶ ನೀಡಲಾಗಿತ್ತು ಈ ಐಪಿಒ 113 ಪಟ್ಟು ಚಂದಾದಾರಿಕೆಯಾಗಿತ್ತು. ಅಂದರೆ, ಐಪಿಒ ಮಾರಾಟಕ್ಕಿರುವ ಷೇರುಗಳಿಗಿಂತಲೂ 113 ಪಟ್ಟು ಹೆಚ್ಚು ಬೇಡಿಕೆ ಬಂದಿತ್ತು.

    ಕೃಷಿ ಸಂಬಂಧಿ ಉತ್ಪನ್ನಗಳ ತಯಾರಕ ಕಂಪನಿಯಾಗಿರುವ ನೋವಾ ಅಗ್ರಿಟೆಕ್ ಬೆಳೆ ರಕ್ಷಣೆ, ಬೆಳೆ ಪೋಷಣೆ ಮತ್ತು ಮಣ್ಣಿನ ಆರೋಗ್ಯ ನಿರ್ವಹಣೆಯಲ್ಲಿ ಪರಿಣತಿ ಹೊಂದಿದೆ.

    ಈ ಷೇರು ಖರೀದಿಸಲು NSEಯಲ್ಲಿ ಸರತಿಸಾಲು: ಮಾರುವವರೇ ಇಲ್ಲ; ತಿಂಗಳಲ್ಲಿ ಸ್ಟಾಕ್​ ಬೆಲೆ ದುಪಟ್ಟು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts