More

    122 ರಿಂದ 18 ರೂಪಾಯಿಗೆ ಕುಸಿತ ಕಂಡಿದ್ದ ಷೇರು ಈಗ ಒಂದೇ ದಿನದಲ್ಲಿ 17% ಏರಿಕೆ: ಫೆ. 2ರ ಕಂಪನಿಯ ಸಭೆಯಲ್ಲೇನಾಗಲಿದೆ?

    ಮುಂಬೈ: ಬ್ರೈಟ್‌ಕಾಮ್ ಗ್ರೂಪ್ ಲಿಮಿಟೆಡ್ (Brightcom Group Ltd) ಷೇರು ಬುಧವಾರದ ವಹಿವಾಟಿನಲ್ಲಿ ಸಾಕಷ್ಟು ಗಮನ ಸೆಳೆದಿದೆ.

    ಕಂಪನಿಯ ಷೇರುಗಳು ಬುಧವಾರ ಜನವರಿ 31ರಂದು ಒಂದೇ ದಿನದಲ್ಲಿ 17.5% ರಷ್ಟು ಏರಿಕೆ ಕಂಡವು. ಈ ಷೇರುಗಳು ಇಂಟ್ರಾಡೇ ವಹಿವಾಟಿನಲ್ಲಿ 21.08 ರೂಪಾಯಿಯ ಗರಿಷ್ಠ ಬೆಲೆ ತಲುಪಿದೆ.

    ಈ ಷೇರುಗಳ ಈ ಏರಿಕೆಯ ಹಿಂದೆ ದೊಡ್ಡ ಕಾರಣವಿದೆ. ವಾಸ್ತವವಾಗಿ, ಬ್ರೈಟ್‌ಕಾಮ್ ಗ್ರೂಪ್‌ ಲಿಮಿಟೆಡ್ ಮಂಡಳಿಯ ಸದಸ್ಯರು ಫೆಬ್ರವರಿ 2 ರಂದು ಸಭೆ ಸೇರಲಿದ್ದಾರೆ ಎಂದು ಷೇರು ಮಾರುಕಟ್ಟೆಗೆ ತಿಳಿಸಲಾಗಿದೆ. ಇದರಲ್ಲಿ ಹಲವು ಮಹತ್ವದ ನಿರ್ಧಾರಗಳನ್ನು ಕೈಗೊಳ್ಳುವ ಸಾಧ್ಯತೆ ಇದೆ.

    ಕಂಪನಿಯ ನಿರ್ದೇಶಕರ ಮಂಡಳಿಯ ಸಭೆಯು 02/02/2024 ರಂದು ನಡೆಯಲಿದೆ ಎಂದು ಬ್ರೈಟ್‌ಕಾಮ್ ಗ್ರೂಪ್‌ ಲಿಮಿಟೆಡ್ ಮಂಗಳವಾರ ಸಂಜೆ ಸ್ಟಾಕ್ ಎಕ್ಸ್‌ಚೇಂಜ್ ಬಿಎಸ್‌ಇಗೆ ತಿಳಿಸಿದೆ.

    ಇದು 5 ವರ್ಷಗಳ ಅವಧಿಗೆ ಸಂಪೂರ್ಣ ಸಮಯದ (ಕಾರ್ಯನಿರ್ವಾಹಕ) ನಿರ್ದೇಶಕರಾಗಿ ಕಲ್ಲೋಲ್ ಸೇನ್ ಅವರ ನೇಮಕಾತಿಯ ಪರಿಗಣನೆ ಮತ್ತು ಅನುಮೋದನೆಯನ್ನು ಈ ಸಭೆಯಲ್ಲಿ ಮಾಡಲಾಗುತ್ತಿದೆ. ಅವರು ಪ್ರಸ್ತುತ ವೇಮೋಟ್ಸ್ ಮತ್ತು ಬಾಟ್ಸ್ ಟೆಕ್ನಾಲಜೀಸ್‌ನ ಸಂಸ್ಥಾಪಕ ಮತ್ತು ಸಿಇಒ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಇದರ ಹೊರತಾಗಿ, ಇತರ ವ್ಯವಹಾರಕ್ಕೆ ಸಂಬಂಧಿಸಿದ ನಿರ್ಧಾರಗಳನ್ನು ಸಭೆಯಲ್ಲಿ ತೆಗೆದುಕೊಳ್ಳಬಹುದಾಗಿದೆ.

    ಬ್ರೈಟ್‌ಕಾಮ್ ಗ್ರೂಪ್‌ ಲಿಮಿಟೆಡ್‌ನ ಷೇರುಗಳು ಕಳೆದ ಕೆಲವು ಸೆಷನ್‌ಗಳಲ್ಲಿ ನಿರಂತರ ಏರಿಕೆಯನ್ನು ಕಾಣುತ್ತಿವೆ. ಕಳೆದ ಐದು ದಿನಗಳಲ್ಲಿ ಕಂಪನಿಯ ಷೇರುಗಳು 12% ರಷ್ಟು ಹೆಚ್ಚಾಗಿವೆ. ಆದರೆ, ಕಳೆದ ಆರು ತಿಂಗಳಲ್ಲಿ ಶೇ. 23ರಷ್ಟು ಕುಸಿತ ಕಂಡಿದೆ. ಒಂದು ವರ್ಷದಲ್ಲಿ 20%ರಷ್ಟು ಕುಸಿತ ಕಂಡಿವೆ.

    ಬ್ರೈಟ್‌ಕಾಮ್ ಗ್ರೂಪ್‌ ಗ್ರೂಪ್​ ಲಿಮಿಟೆಡ್‌ನ ಷೇರುಗಳು ಹೂಡಿಕೆದಾರರಿಗೆ 5 ವರ್ಷಗಳಲ್ಲಿ 1,302.78% ಗಳಿಸಿಕೊಟ್ಟಿವೆ. ಈ ಅವಧಿಯಲ್ಲಿ ಇದರ ಬೆಲೆ 1.44 ರೂಪಾಯಿ ಇದ್ದು ಪ್ರಸ್ತುತ 20.15 ರೂಪಾಯಿಗೆ ಏರಿದೆ.

    ಡಿಸೆಂಬರ್ 17, 2021 ರಂದು, ಈ ಕಂಪನಿಯ ಷೇರು ಬೆಲೆ 117.66 ರೂಪಾಯಿ ಇತ್ತು. ಷೇರುಗಳ 52 ವಾರದ ಗರಿಷ್ಠ ಬೆಲೆ ರೂ 36.82 ಮತ್ತು ಕನಿಷ್ಠ ಬೆಲೆ ರೂ 9.27 ಆಗಿದೆ. ಈ ಷೇರುಗಳ ಸಾರ್ವಕಾಲಿಕ ಗರಿಷ್ಠ ಬೆಲೆ 122.88 ರೂಪಾಯಿ ಇತ್ತು.

    ಬ್ರೈಟ್‌ಕಾಮ್ ಗ್ರೂಪ್ 2000 ರಲ್ಲಿ ಸ್ಥಾಪನೆಯಾದ ಡಿಜಿಟಲ್ ಮಾರ್ಕೆಟಿಂಗ್ ಕಂಪನಿಯಾಗಿದ್ದು, ಹೈದರಾಬಾದ್‌ನಲ್ಲಿ ಪ್ರಧಾನ ಕಚೇರಿ ಹೊಂದಿದೆ.

    ಷೇರು ಮಾರುಕಟ್ಟೆ ಪ್ರವೇಶಿಸಿದ ತಕ್ಷಣವೇ 36.59 % ಪ್ರೀಮಿಯಂ: ಚೊಚ್ಚಲ ದಿನವೇ ಹೂಡಿಕೆದಾರರಿಗೆ ಹಣದ ಸುರಿಮಳೆ

    ಈ ಷೇರು ಖರೀದಿಸಲು NSEಯಲ್ಲಿ ಸರತಿಸಾಲು: ಮಾರುವವರೇ ಇಲ್ಲ; ತಿಂಗಳಲ್ಲಿ ಸ್ಟಾಕ್​ ಬೆಲೆ ದುಪಟ್ಟು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts