ಗಲ್ಲಿ ಕ್ರಿಕೆಟ್ ಆಡಿದ ಸಚಿನ್ ತೆಂಡೂಲ್ಕರ್; ವಿಡಿಯೋ ವೈರಲ್

sachin
Published on

ನವದೆಹಲಿ: ಭಾರತದ ಕ್ರಿಕೆಟ್‌ ದೇವರು, ಕ್ರಿಕೆಟ್‌ ದಿಗ್ಗಜ ಖ್ಯಾತಿಯ ಸಚಿನ್ ತೆಂಡೂಲ್ಕರ್ ಅವರು ಕಾಶ್ಮೀರದ ಗುಲ್ಮಾರ್ಗ್‌ನಲ್ಲಿ ಸ್ಥಳೀಯರೊಂದಿಗೆ ಗಲ್ಲಿ ಕ್ರಿಕೆಟ್ ಪಂದ್ಯ ಆಡಿದ್ದಾರೆ. ಈ ಕುರಿತಾದ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.

ಭಾರತದ ಶ್ರೇಷ್ಠ ಆಟಗಾರ ಸಚಿನ್ ತೆಂಡೂಲ್ಕರ್ ಕಾಶ್ಮೀರ ಪ್ರವಾಸವನ್ನು ಆನಂದಿಸುತ್ತಿದ್ದಾರೆ, ಗುಲ್ಮಾರ್ಗ್‌ನ ಸುಂದರವಾದ ಪರಿಸರದ ನಡುವೆ ಸ್ಥಳೀಯರೊಂದಿಗೆ ಉತ್ಸಾಹಭರಿತವಾಗಿ ಗಲ್ಲಿ ಕ್ರಿಕೆಟ್ ಪಂದ್ಯ ಆಡಿದ್ದಾರೆ.  

ಸೇನಾ ಅಧಿಕಾರಿಗಳ ಪ್ರಕಾರ, ತಮ್ಮ ಒಂದು ಗಂಟೆಯ ಭೇಟಿಯ ಸಮಯದಲ್ಲಿ, ಅಮನ್ ಸೇತು ಪಕ್ಕದಲ್ಲಿರುವ ಕಮಾನ್ ಪೋಸ್ಟ್‌ನಲ್ಲಿ ನೆಲೆಸಿದ್ದ ಸೈನಿಕರೊಂದಿಗೆ ಸಚಿನ್ ತೆಂಡೂಲ್ಕರ್ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.

MJ ಸ್ಪೋರ್ಟ್ಸ್ ಬ್ಯಾಟ್ ಫ್ಯಾಕ್ಟರಿಗೆ ಸಚಿನ್ ಭೇಟಿಯು ಕಾಶ್ಮೀರದ ಶ್ರೀಮಂತ ಕ್ರಿಕೆಟ್ ಪರಂಪರೆಯನ್ನು ಮತ್ತು ಸಾಂಪ್ರದಾಯಿಕ ಕ್ರಿಕೆಟ್ ಉಪಕರಣಗಳ ಕಾಲಾತೀತ ಆಕರ್ಷಣೆಯಾಗಿದೆ. ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರು ಸ್ಥಳೀಯ ಬ್ಯಾಟ್ ಕಾರ್ಖಾನೆಗೆ ಭೇಟಿ ನೀಡಿದ್ದರು. ಅಲ್ಲಿ ಅವರು ತಮ್ಮ ಮೊದಲ ಕಾಶ್ಮೀರ ವಿಲೋ ಬ್ಯಾಟ್ ಅನ್ನು ನೆನಪಿಸಿಕೊಂಡರು. ಅವರ ಸಹೋದರಿಯಿಂದ ಉಡುಗೊರೆಯಾಗಿ ಪಡೆದಿದ್ದರು ಎಂದು ಸಚಿನ್ ತೆಂಡೂಲ್ಕರ್ ಎಕ್ಸ್‌  ನಲ್ಲಿ ಬರೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net