ನ್ಯೂಯಾರ್ಕ್: ಬೆಲಾರಸ್ ತಾರೆ ಅರಿನಾ ಸಬಲೆಂಕಾ ಯುಎಸ್ ಓಪನ್ ಟೆನಿಸ್ ಟೂರ್ನಿಯ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಹೊಸ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಇದರೊಂದಿಗೆ ವೃತ್ತಿಜೀವನದ ಮೂರನೇ ಗ್ರಾಂಡ್ ಸ್ಲಾಂ ಹಾಗೂ ್ಲಶಿಂಗ್ ಮೆಡೋಸ್ ಅಂಗಣದಲ್ಲಿ ಚೊಚ್ಚಲ ಬಾರಿಗೆ ಪ್ರಶಸ್ತಿಗೆ ಮುತ್ತಿಕ್ಕಿದರು.
ಕಳೆದ ಎರಡು ವರ್ಷ ರನ್ನರ್ ಅಪ್ ಆಗಿದ್ದ ವಿಶ್ವ ನಂ.2 ಸಬಲೆಂಕಾ ಶನಿವಾರ ರಾತ್ರಿ ನಡೆದ ಪ್ರಶಸ್ತಿ ಕಾದಾಟದಲ್ಲಿ ಆತಿಥೇಯ, ವಿಶ್ವ ನಂ. 6 ಜೆಸ್ಸಿಕಾ ಪೆಗುಲಾ ಎದುರು 7-5, 7-5 ನೇರ ಸೆಟ್‌ಗಳ ನಿಕಟ ಪೈಪೋಟಿಯಲ್ಲಿ ಗೆದ್ದು ಬೀಗಿದರು. ಇದರೊಂದಿಗೆ ವರ್ಷಾರಂಭದ ಮೊದಲ ಹಾಗೂ ಕೊನೆಯ ಎರಡು ಗ್ರಾಂಡ್ ಸ್ಲಾಂಗಳಲ್ಲಿ ಚಾಂಪಿಯನ್ ಎನಿಸಿದರು. ಜತೆಗೆ 2016ರ ಬಳಿಕ ಈ ಸಾಧನೆ ಮಾಡಿದ ಮೊದಲ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಜರ್ಮನಿಯ ಏಂಜೆಲಿಕಾ ಕೆರ್ಬರ್ ಹಿಂದಿನ ಸಾಧಕಿ.
ಕಳೆದ ವರ್ಷ ಮೊದಲ ಸೆಟ್‌ನಲ್ಲಿ ಮೇಲುಗೈ ಸಾಧಿಸಿ ನಡುವೆಯೂ ಪ್ರಶಸ್ತಿ ವಂಚಿತರಾಗಿದ್ದ 26 ವರ್ಷದ ಸಬಲೆಂಕಾಗೆ ಇದು ಸತತ 4ನೇ ಉಪಾಂತ್ಯ ಎನಿಸಿತ್ತು. 2021 ಹಾಗೂ 2022 ರ ಸೆಮಿೈನಲ್ಲಿ ಸೋಲು ಅನುಭವಿಸಿದ್ದರೆ, 2023ರಲ್ಲಿ ಕೋಕೋ ಗ್ೌ ಎದುರು ನಿರಾಸೆ ಎದುರಿಸಿದ್ದರು. ಆದರೆ ಜೆಸ್ಸಿಕಾ ಪೆಗುಲಾ ಎದುರು ಮೊದಲ ಸೆಟ್‌ನಲ್ಲಿ 5-2 ಮುನ್ನಡೆಯಲ್ಲಿದ್ದ ಸಬಲೆಂಕಾ ನಂತರ ತಿರುಗೇಟು ಎದುರಿಸಿದರು. 5-5 ಗೇಮ್‌ಗಳ ಸಮಬಲ ಸಾಧಿಸಿ ಪೆಗುಲಾ ಕಠಿಣ ಪೈಪೋಟಿ ನೀಡಿದರು. ತವರಿನ ಪ್ರೇಕ್ಷಕರಿಂದ ಭಾರಿ ಬೆಂಬಲ ಪಡೆದ ಪೆಗುಲಾ ಎರಡನೇ ಸೆಟ್‌ನಲ್ಲಿಯೂ ಸಬಲೆಂಕಾಗೆ ತೀವ್ರ ಪೈಪೋಟಿ ನೀಡಿದರು. ಎರಡು ಗ್ರಾಂಡ್ ಸ್ಲಾಂ ಒಡತಿ ಸಬಲೆಂಕಾ ಒಂದು ಗಂಟೆ 53 ನಿಮಿಷಗಳ ಕಾದಾಟದಲ್ಲಿ ಗೆಲುವು ಒಲಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಇದರೊಂದಿಗೆ ಅಜೇಯ ಓಟವನ್ನು 12ನೇ ಪಂದ್ಯಕ್ಕೆ ವಿಸ್ತರಿಸಿದರು.
ಮೊದಲ ಬಾರಿಗೆ ಗ್ರಾಂಡ್ ಸ್ಲಾಂ ಟೂರ್ನಿಯ ೈನಲ್ ಆಡಿದ ಜೆಸ್ಸಿಕಾ ಪೆಗುಲಾ ರನ್ನರ್ ಅಪ್ ಟ್ರೋಫಿಯೊಂದಿಗೆ ₹ 15.11 ಕೋಟಿ ಬಹುಮಾನ ಮೊತ್ತ ಪಡೆದರು. ಚಾಂಪಿಯನ್ ಅರಿನಾ ಸಬಲೆಂಕಾ ಪ್ರಶಸ್ತಿ ಜಯದೊಂದಿಗೆ 30.19 ಕೋಟಿ ರೂ. ಬಹುಮಾನ ಪಡೆದರು.