

ಯೂಕ್ರೇನ್: ಯೂಕ್ರೇನ್ನಲ್ಲಿ ಸಿಲುಕಿರುವ ಭಾರತೀಯರನ್ನು ವಾಪಸ್ ಕರೆತರಲು ಭಾರತ ಸರ್ಕಾರ ಹಲವಾರು ರೀತಿಯಲ್ಲಿ ಪ್ರಯತ್ನಿಸುತ್ತಿದ್ದು, ಇದಾಗಲೇ ಸಹಸ್ರಾರು ಭಾರತೀಯರು ವಾಪಸಾಗಿದ್ದಾರೆ. ಆದರೆ ಯೂಟ್ಯೂಬರ್ ಕಮ್ ವೈದ್ಯರಾಗಿರುವ ಡಾ. ಡಾ. ಗಿರಿಕುಮಾರ್ ಪಾಟೀಲ್ ಎನ್ನುವವರು ಮಾತ್ರ ಭಾರತಕ್ಕೆ ಬರುವ ಅವಕಾಶವಿದ್ದರೂ ಬರಲು ತಯಾರಿಲ್ಲ. ಇದಕ್ಕೆ ಕಾರಣ ಅವರ ಬಳಿ ಇರುವ ಎರಡು ಚಿರತೆಗಳು, ಇದರಲ್ಲಿ ಒಂದು ಕಪ್ಪು ಚಿರತೆಯೂ (ಪ್ಯಾಂಥರ್) ಇದೆ.
ಯೂಕ್ರೇನ್ನಲ್ಲಿಯೇ ವೈದ್ಯರಾಗಿರುವ ಡಾ.ಪಾಟೀಲ್ ಅವರು ಆಂಧ್ರಪ್ರದೇಶದ ತನುಕು ಮೂಲದವರು. ಇವರು ತಮ್ಮ ಈ ಸಾಕು ಪ್ರಾಣಿಗಳನ್ನು ತಮ್ಮೊಟ್ಟಿಗೆ ಕರೆತರುವುದು ಅಸಾಧ್ಯವಾಗಿದೆ. ಯೂಟ್ಯೂಬ್ ಮೂಲಕ ಸಾಕಷ್ಟು ಜನಪ್ರಿಯರಾಗಿರುವ ಡಾ.ಪಾಟೀಲ್ ಅವರು ಸಾಕಿರುವುದು ಚಿರತೆಯಾಗಿರುವ ಕಾರಣ, ಅದನ್ನು ತಮ್ಮೊಟ್ಟಿಗೆ ಕರೆ ತರುವುದು ಕಷ್ಟವಾಗಿದೆ. ಭಾರತ ಸರ್ಕಾರವು ಹಲವಾರು ಸ್ಥಳಾಂತರಿಸುವವರಿಗೆ ತಮ್ಮ ಸಾಕುಪ್ರಾಣಿಗಳನ್ನು ತಮ್ಮೊಂದಿಗೆ ತರಲು ಅವಕಾಶ ಮಾಡಿಕೊಟ್ಟಿದೆ, ಆದರೆ ಇದು ಚಿರತೆಯಾಗಿರುವ ಕಾರಣ, ಡಾ ಪಾಟೀಲ್ ಅವರಿಗೆ ಇದು ಸುಲಭದ ಕೆಲಸವಲ್ಲ. ಆದ್ದರಿಂದ ಬಂಕರ್ನಲ್ಲಿಯೇ ಅವರು ಕಾಲ ಕಳೆಯುತ್ತಿದ್ದಾರೆ.
‘ಲಂಕೇಶ್ವರ‘ ತೆಲುಗು ಸಿನಿಮಾದಲ್ಲಿ ಮೆಗಾಸ್ಟಾರ್ ಚಿರಂಜೀವಿ ಚಿರತೆ ಸಾಕುತ್ತಿರುವುದನ್ನು ಕಂಡ ಕುಮಾರ್ ಅವರಿಗೂ ಹುಲಿ ಸಾಕಬೇಕು ಎಂಬ ಆಸೆ ಉಂಟಾಗಿತ್ತು. ನಂತರ ಯೂಕ್ರೇನ್ ಸರ್ಕಾರದ ಅನುಮತಿ ಪಡೆದು ಅದನ್ನು ಸಾಕುತ್ತಿದ್ದಾರೆ. ಇದರ ಮೂಲಕವೇ ಅವರು ಸಾಕಷ್ಟು ಯೂಟ್ಯೂಬ್ ಮಾಡಿ ಪ್ರಸಿದ್ಧರಾಗಿದ್ದಾರೆ.