

ಶ್ರೀನಗರ: ವೇದಿಕೆಯ ಮೇಲೆ ನರ್ತಿಸುತ್ತಲೇ ಹೃದಯಘಾತದಿಂದ ಯುವಕನೊಬ್ಬ ಮೃತಪಟ್ಟಿರುವ ಘಟನೆ ಜಮ್ಮುವಿನಲ್ಲಿ ನಡೆದಿದ್ದು, ಈ ವಿಡಿಯೋ ಇದೀಗ ಭಾರಿ ವೈರಲ್ ಆಗಿದೆ.
ಜಮ್ಮು ಮತ್ತು ಕಾಶ್ಮೀರದ ಬಿಷ್ನಾಹ್ ಪ್ರದೇಶದಲ್ಲಿ ಯೋಗೇಶ್ ಗುಪ್ತಾ ಮೃತ ಯುವಕ. 20 ವರ್ಷದ ಯೋಗೇಶ್ ವೇದಿಕೆಯ ಮೇಲೆ ಪಾರ್ವತಿಯ ವೇಷ ಧರಿಸಿ ಹುಡುಗಿಯಂತೆ ನರ್ತಿಸುತ್ತಿದ್ದ. ನೃತ್ಯ ಮಾಡುತ್ತಿರುವಾಗಲೇ ಹೃದಯಾಘಾತವಾಗಿದೆ. ಕೂಡಲೇ ಈತ ಕುಸಿದು ಬಿದ್ದಿದ್ದಾನೆ.
ಈತ ಕುಸಿದು ಬಿದ್ದಾಗ ಮೊದಲು ಎದ್ದಿದ್ದಾನೆ. ಆದ್ದರಿಂದ ಈತನಿಗೆ ಹೃದಯಾಘಾತವಾಗಿದೆ ಎಂದು ಯಾರಿಗೂ ತಿಳಿಯಲೇ ಇಲ್ಲ. ಕುಸಿದು ಬಿದ್ದ ತಕ್ಷಣ ಅಲ್ಲಿಯೇ ಸಾವರಿಸಿಕೊಂಡು ಕೆಲವು ಸ್ಟೆಪ್ ಮಾಡಿದ್ದರಿಂದ ಇದು ಕೂಡ ನೃತ್ಯದ ಭಾಗವೇ ಎಂದು ಜನ ಎಂದುಕೊಂಡುಬಿಟ್ಟಿದ್ದಾರೆ. ಮತ್ತೆ ಕುಸಿದ ಆತ ಮೇಲಕ್ಕೆ ಏಳಲೇ ಇಲ್ಲ.
ಕೂಡಲೇ ಶಿವನ ವೇಷಧಾರಿಗೆ ಸಂದೇಹ ಬಂದು ವೇದಿಕೆಯ ಮೇಲೆ ಬಂದಿದ್ದಾನೆ. ಸಮೀಪ ಬಂದು ಎಚ್ಚರಿಸಿದಾಗಲೇ ತಿಳಿದದ್ದು ಯುವಕ ಆಗಲೇ ಪ್ರಾಣ ತ್ಯಜಿಸಿದ್ದಾನೆ ಎಂದು. ಕೂಡಲೇ ಆಸ್ಪತ್ರೆಗೆ ಯುವಕನನ್ನು ದಾಖಲಿಸಿದರೂ ಅದಾಗಲೇ ಆತ ಕೊನೆಯುಸಿರು ಎಳೆದಿದ್ದ. (ಏಜೆನ್ಸೀಸ್)
ಅದರ ವಿಡಿಯೋ ಇಲ್ಲಿದೆ ನೋಡಿ