VIDEO: ಭಾರತ ಮಾತೆಯ ಫೋಟೋ ಕಿತ್ತುಕೊಂಡು ಪೊಲೀಸರ ಕೆನ್ನೆಗೆ ಹೊಡೆದಳು, ಮೊಬೈಲ್‌ ಪುಡಿಪುಡಿ ಮಾಡಿದಳು!

1227052
Published on

ಥಾಣೆ: ಗಣರಾಜ್ಯೋತ್ಸವದ ದಿನದಂದು ಭಾರತಾಂಬೆಯ ಭಾವಚಿತ್ರಕ್ಕೆ ಭಾರತೀಯರೆಲ್ಲರೂ ಪೂಜೆ ಸಲ್ಲಿಸುತ್ತಿದ್ದ ಸಂದರ್ಭದಲ್ಲಿ ಮುಂಬೈನ ಥಾಣೆಯ ಕೋಲ್‌ಶೆಟ್ ಪ್ರದೇಶದಲ್ಲೊಂದು ಅಚಾತುರ್ಯ ನಡೆದಿದೆ.

ಓರ್ವ ಮಹಿಳೆ ಭಾರತಾಂಬೆಯ ಫೋಟೋಗೆ ಪೂಜೆ ಸಲ್ಲಿಸುತ್ತಿರುವಾಗಲೇ ಅದನ್ನು ಕಿತ್ತುಕೊಂಡು ರಂಪಾಟ ಮಾಡಿದ್ದಾಳೆ. ಭಾರತ ಮಾತೆಯ ಆರಾಧನೆ ಸಂದರ್ಭದಲ್ಲಿ ಎಂಟ್ರಿ ಕೊಟ್ಟ ಈ ಮಹಿಳೆ ಫೋಟೋ ಕಿತ್ತುಕೊಂಡಿದ್ದು ಗಲಾಟೆ ಎಬ್ಬಿಸಿದ್ದಾಳೆ. ಅದರ ವಿಡಿಯೋ ಜಾಲತಾಣದಲ್ಲಿ ಭಾರಿ ವೈರಲ್‌ ಆಗಿದೆ.

ಮಹಿಳೆ ಈ ರೀತಿ ಗಲಾಟೆ ಮಾಡುತ್ತಿದ್ದಂತೆಯೇ ಸ್ಥಳೀಯರು ಪೊಲೀಸರನ್ನು ಕರೆಸಿದ್ದಾರೆ. ಪೊಲೀಸರು ಹೇಳಿದರೂ ಮಹಿಳೆ ಫೋಟೋ ಕೊಡದೇ ಅವರಿಗೆ ಬಾಯಿಗೆ ಬಂದಂತೆ ಬೈದಿದ್ದಾಳೆ. ಮಾತ್ರವಲ್ಲದೇ ಪೊಲೀಸರು ಫೋಟೋ ಆಕೆಯ ಕೈಯಿಂದ ತೆಗೆದುಕೊಳ್ಳಲು ಮುಂದಾದಾಗ ಮಹಿಳೆ ಪೊಲೀಸರ ಮೇಲೆ ಹಲ್ಲೆ ಮಾಡಿದ್ದಾಳೆ. ಸಾಲದು ಎಂಬುದಕ್ಕೆ ಪೊಲೀಸರ ಮೊಬೈಲ್‌ಫೋನ್‌ ಕಿತ್ತುಕೊಂಡು ಪುಡಿಪುಡಿ ಮಾಡಿದ್ದಾಳೆ.

ಇವೆಲ್ಲವನ್ನೂ ಸ್ಥಳೀಯರು ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಂಡಿದ್ದಾರೆ. ಈ ಮಹಿಳೆ ವಿರುದ್ಧ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ. ಆದರೆ ಸದ್ಯ ಈಕೆಯ ಹೆಸರನ್ನು ಕೆಲವು ಕಾರಣಗಳಿಂದ ಪೊಲೀಸರು ಬಹಿರಂಗಪಡಿಸಲಿಲ್ಲ.

ವಿಡಿಯೋ ಇಲ್ಲಿದೆ ನೋಡಿ... (ಮೋಹಿತ್‌ ಎನ್‌ಎಂ ಎನ್ನುವವರು ಇದನ್ನು ಶೇರ್‌ ಮಾಡಿಕೊಂಡಿದ್ದಾರೆ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net