ಬ್ಯಾಗ್‌ ಕದ್ದು ಓಡಿಹೋದ ಕಳ್ಳರ ಹಿಡಿಯಲು ಆಟೋದಿಂದ ಜಿಗಿದ ಮಹಿಳೆಯ ದುರಂತ ಸಾವು!

auto
ಸಾಂದರ್ಭಿಕ ಚಿತ್ರ
Published on

ನವದೆಹಲಿ: ಆಟೋದಲ್ಲಿ ಹೋಗುತ್ತಿರುವಾಗಲೇ ಸೈಡ್‌ಗೆ ಇಟ್ಟುಕೊಂಡಿದ್ದ ಬ್ಯಾಗ್‌ ಕದ್ದುಕೊಂಡು ಓಡಿಹೋದ ಕಳ್ಳರನ್ನು ಹಿಡಿಯಲು ಆಟೋದಿಂದ ಜಿಗಿದು ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ದೆಹಲಿಯಲ್ಲಿ ನಡೆದಿದೆ.

12 ದಿನಗಳ ಹಿಂದೆ ಈ ಘಟನೆ ನಡೆದಿತ್ತು. ಮಹಿಳೆ ಆಟೋದಲ್ಲಿ ಚಲಿಸುತ್ತಿದ್ದ ವೇಳೆ ಸೈಡ್‌ಗೆ ಬ್ಯಾಗ್‌ ಹಿಡಿದು ಕುಳಿತಿದ್ದರು. ಈ ಸಮಯದಲ್ಲಿ ಕಳ್ಳರು ಬ್ಯಾಗ್‌ ಎಳೆದುಕೊಂಡಿದ್ದಾರೆ. ಈ ಸಮಯದಲ್ಲಿ ವಿಚಲಿತರಾದ ಮಹಿಳೆ ಬ್ಯಾಗ್‌ ಕಳ್ಳತನದಿಂದ ತಪ್ಪಿಸಲು ಆಟೋದಿಂದ ಜಿಗಿದುಬಿಟ್ಟಿದ್ದಾರೆ. ಈ ಸಮಯದಲ್ಲಿ ತಲೆಗೆ ಪೆಟ್ಟಾಗಿ ತೀವ್ರವಾಗಿ ಗಾಯವಾಗಿತ್ತು. 12 ದಿನಗಳ ಕಾಲ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸಿ ಇಂದು ಮೃತಪಟ್ಟಿರುವುದಾಗಿ ವೈದ್ಯರು ಹೇಳಿದ್ದಾರೆ.

ಘಟನೆ ನಡೆದ ತಕ್ಷಣ ಸಿಸಿಟಿವಿ ಫುಟೇಜ್‌ ಆಧಾರದ ಮೇಲೆ ಮನೀಷ್ (41) ಮತ್ತು ಮೋಹಿತ್ ಗುಪ್ತಾ (34) ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ. ಈ ಇಬ್ಬರು ಆರೋಪಿಗಳು ಪತ್ಪಗರ್ಂಜ್ ನಿವಾಸಿಗಳು. ಸದ್ಯ ತನಿಖೆ ನಡೆಯುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net