VIDEO: ಕೆಳಗೆ ಬೆಂಕಿಯ ಜ್ವಾಲೆ- ಕುದಿಯುವ ನೀರ ನಡುವೆ ಬಾಲಕ- ದಂಗುಬಡಿಸುವ ವಿಡಿಯೋ ವೈರಲ್‌

boling water
Published on

ಕಣ್ಕಟ್ಟು ವಿದ್ಯೆ ಮಾಡುವವರು ಕೆಲವರು ಇದ್ದಾರೆ. ನಮ್ಮ ಎದುರೇ ಇರುವ ವಸ್ತುಗಳನ್ನು ಮಾಯ ಮಾಡುವುದು, ಏಕಾಏಕಿ ಇಡೀ ಕಟ್ಟಡವನ್ನೇ ನಾಪತ್ತೆ ಮಾಡುವುದು... ಹೀಗೆ ತಮ್ಮ ಅಪಾರ ನೈಪುಣ್ಯದಿಂದ ಜಾದೂ ಮಾಡುತ್ತಾರೆ. ಇನ್ನು ಕೆಲವರು ಕುದಿಯುವ ನೀರಿನಲ್ಲಿ, ಕುದಿಯುತ್ತಿರುವ ಎಣ್ಣೆಯಲ್ಲಿ ಕೈಹಾಕಿ ಪವಾಡ ಮಾಡುವುದೂ ಉಂಟು. ಕೆಲವೊಮ್ಮೆ ಇದರ ಹಿಂದಿನ ವೈಜ್ಞಾನಿಕ ಕಾರಣಗಳನ್ನು ಬಿಡಿಸುವುದೂ ಉಂಟು.

ಆದರೆ ಇಲ್ಲೊಂದು ಅಚ್ಚರಿ ಎನಿಸುವ ವಿಡಿಯೋ ವೈರಲ್‌ ಆಗಿದೆ. ಅದೇನೆಂದರೆ ಬಾಲಕನೊಬ್ಬ ಕೊತಕೊತ ಕುದಿಯುವ ನೀರಿನ ನಡುವೆ ಕುಳಿತಿದ್ದಾನೆ. ಕೆಳಗಡೆ ಬೆಂಕಿಯ ಜ್ವಾಲೆ ಇದ್ದರೆ, ಮೇಲುಗಡೆ ಇರುವ ಬಾಣಲೆಯಲ್ಲಿ ಆತ ಕುಳಿತಿದ್ದಾನೆ. ಸುತ್ತಲೂ ಹೂವಿನ ರಾಶಿ ಹಾಕಲಾಗಿದ್ದು, ನೀರು ಕುದಿಯುತ್ತಿರುವಂತೆ ಕಾಣುತ್ತಿದೆ.

ಇದು ಎಲ್ಲಿಯ ವಿಡಿಯೋ, ಈ ಬಾಲಕ ಯಾರು? ಏನಿದು ಸಂಪ್ರದಾಯ ಎಂಬ ಬಗ್ಗೆ ವಿಡಿಯೋದಲ್ಲಿ ಮಾಹಿತಿ ಇಲ್ಲ. ಆದರೆ ನೋಡುಗರನ್ನು ಮಾತ್ರ ಇದು ಅಚ್ಚರಿಗೊಳಿಸುತ್ತದೆ. ಹಲವರು ಇದು ಫೇಕ್‌ ವಿಡಿಯೋ ಎಂದಿದ್ದಾರೆ. ಇನ್ನು ಕೆಲವರು ನೀರು ಮಾತ್ರ ಕುದಿಯುತ್ತಿದೆ, ಹೂವುಗಳು ಕುದಿಯುವಂತೆ ಅಥವಾ ಅಲುಗಾಡುತ್ತಿರುವುದು ಕಾಣಿಸುತ್ತಿಲ್ಲ, ಇದು ಸುಳ್ಳು ವಿಡಿಯೋ ಎಂದಿದ್ದಾರೆ. ಕೆಲವರು ಮಾತ್ರ ಇಂಥ ಸಾಧನೆ ಮಾಡುವವರನ್ನು ನಾವು ಕಾಣಬಹುದು ಎಂದಿದ್ದಾರೆ.

ಒಟ್ಟಿನಲ್ಲಿ ಈ ವಿಡಿಯೋದ ಅಸಲಿಯತ್ತು ಇನ್ನಷ್ಟೇ ಬಯಲುಗೊಳ್ಳಬೇಕಿದೆ.

ಸದ್ಯ ನೀವೂ ನೋಡಿ ಈ ವಿಡಿಯೋ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net