VIDEO: ಸಾಕು... ಸಾಕು... ನನ್ನ ಮುಟ್ಬೇಡ... ನೀನು ಅಸ್ಪೃಶ್ಯ: ಧಾರ್ಮಿಕ ಬೋಧಕನ ವೈರಲ್‌ ವಿಡಿಯೋಗೆ ಭಾರಿ ಆಕ್ರೋಶ

preacher
Published on

ನವದೆಹಲಿ: ಧಾರ್ಮಿಕ ಬೋಧಕನೊಬ್ಬನ ಪಾದವನ್ನು ಮುಟ್ಟಲು ಬಂದ ವ್ಯಕ್ತಿಗೆ ಸಾಕು... ಸಾಕು. ಸಾಕು... ನನ್ನ ಮುಟ್ಟಬೇಡ... ನೀನು ಅಸ್ಪ್ರಶ್ಯ ಎಂದಿರುವ ವಿಡಿಯೋ ಒಂದು ಜಾಲತಾಣದಲ್ಲಿ ಭಾರಿ ವೈರಲ್ ಆಗಿದ್ದು, ಅದೀಗ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.

ಈ ವಿಡಿಯೋದಲ್ಲಿ ಹೀಗೆ ಹೇಳಿದವರು ಪಂಡಿತ್‌ ಧೀರೇಂದ್ರ ಕೃಷ್ಣ ಶಾಸ್ತ್ರಿ ಎಂದು ಹೇಳಲಾಗುತ್ತಿದೆ. ಬೋಧನೆ ಮಾಡುತ್ತಿರುವ ಸಂದರ್ಭದಲ್ಲಿ ಹಳ್ಳಿಯ ವ್ಯಕ್ತಿಯೊಬ್ಬ ಅವರ ಬಳಿ ಬಂದಿದ್ದಾರೆ. ಬಂದಾಗ ಶಾಸ್ತ್ರಿಯವರು ಬನ್ನಿ ಬನ್ನಿ ಎಂದಿದ್ದಾರೆ. ಆ ವ್ಯಕ್ತಿ ಅವರ ಪಾದಕ್ಕೆ ನಮಸ್ಕರಿಸಲು ಹೋದಾಗ ಕಾಲನ್ನು ಹಿಂದಕ್ಕೆ ಎಳೆದುಕೊಂಡು ಮುಟ್ಟಬೇಡಿ, ನೀವು ಅಸ್ಪ್ರಶ್ಯರು ಎಂದಿದ್ದಾರೆ. ಇದರ ವಿರುದ್ಧ ಬಹಳ ಆಕ್ರೋಶ ವ್ಯಕ್ತವಾಗಿದ್ದು, ಶಾಸ್ತ್ರಿಯವರ ವಿರುದ್ಧ ಎಫ್‌ಐಆರ್‌ ದಾಖಲು ಮಾಡುವಂತೆ ಒತ್ತಾಯ ಕೇಳಿಬರುತ್ತಿದೆ.

#ArrestDhirendraShastri ಎಂದು ಟ್ವಿಟರ್‌ನಲ್ಲಿ ಟ್ರೆಂಡಿಂಗ್ ಆಗಿದೆ ಹ್ಯಾಷ್‌ಟ್ಯಾಗ್‌.

ಇಲ್ಲಿದೆ ನೋಡಿ ವಿಡಿಯೋ:

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net