VIDEO: ನಾನು ಉಳಿಯುವಂತೆ ಕಾಣ್ತಿಲ್ಲ- ಏನಾದ್ರೂ ಆದ್ರೆ ಎಲ್ರೂ ಸೇರಿ ಮರ್ಡರ್‌ ಮಾಡಿದ್ದೀರಿ ಎಂದುಕೊಳ್ಳಿ- ನಟಿ ಕಣ್ಣೀರು

1166582
Published on

ಬೆಂಗಳೂರು: ಸದಾ ಒಂದಿಲ್ಲೊಂದು ವಿಡಿಯೋ ಮಾಡುತ್ತಲೇ ಸಾಕಷ್ಟು ಸುದ್ದಿಯಲ್ಲಿ ಇರುವ ನಟಿ ವಿಜಯಲಕ್ಷ್ಮಿ ಇದೀಗ ವಿಪರೀತ ಅನಾರೋಗ್ಯದಿಂದ ಬಳಲುತ್ತಿದ್ದು, ನಾನು ಉಳಿಯುವಂತೆ ಕಾಣುತ್ತಿಲ್ಲ ಎಂದು ವಿಡಿಯೋ ಮೂಲಕ ಹೇಳಿದ್ದಾರೆ. ಇತ್ತೀಚೆಗೆ ಅವರ ಸಹೋದರಿ ಉಷಾ ಅವರಿಗೆ ಅನಾರೋಗ್ಯ ಕಾಡಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಇದರ ನಡುವೆಯೇ ತಮಗೂ ಕರೊನಾ ಅಂಟಿಕೊಂಡಿದ್ದು ಸ್ಥಿತಿ ಚಿಂತಾಜನಕವಾಗಿದೆ ಎಂದು ವಿಜಯಲಕ್ಷ್ಮಿ ಹೇಳಿದ್ದಾರೆ.

‘ನನಗೆ ಕೋವಿಡ್​ ನ್ಯುಮೋನಿಯಾ ಅಟ್ಯಾಕ್​ ಆಗಿದೆ. ಐದು ದಿನಗಳಿಂದ ತುಂಬಾ ನರಳುತ್ತಿದ್ದೇನೆ.ಸಿಕ್ಕಾಪಟ್ಟೆ ವಾಂತಿಯಾಗುತ್ತಿದೆ. ಸಿಕ್ಕಾಪಟ್ಟೆ ಜ್ವರ ಬಂದಿದೆ. ಈಗ ತುಂಬಾ ಶ್ರಮವಹಿಸಿ ಕಷ್ಟಪಟ್ಟು ಆಸ್ಪತ್ರೆಗೆ ಬಂದಿದ್ದೇನೆ. ನಾನು ಕೋವಿಡ್​ ಸೆಂಟರ್​ಗೆ ಹೋಗಲೇಬೇಕಿದೆ. ಈ ಬಗ್ಗೆ ಕಲಾವಿದರ ಸಂಘಕ್ಕೆ ಮನವಿ ಮಾಡಿದ್ದೇನೆ. ನಾನು ಅನೇಕರನ್ನು ಸಂಪರ್ಕಿಸಿದ್ದೇನೆ. ಆದರೆ ಏನೂ ಪ್ರಯೋಜನ ಆಗುತ್ತಿಲ್ಲ. ಐದು ದಿನಗಳಿಂದ ಊಟ ಸರಿಯಾಗಿ ಸಿಗದ ಪರಿಸ್ಥಿತಿ ಉಂಟಾಗಿದೆ. ಹೆಚ್ಚು ದಿನ ನಾನು ಉಳಿಯುವುದಿಲ್ಲ. ನಾನು ಎಲ್ಲಿಗೋ ಹೋಗಿದ್ದೇನೆ ಎನ್ನುತ್ತಿದ್ದಾರೆ ಕೆಲವರು. ಆದರೆ ಎಲ್ಲಿಯೂ ಹೋಗಿಲ್ಲ. ಕರ್ನಾಟಕದಲ್ಲೇ ಇದ್ದೇನೆ’ ಎಂದಿದ್ದಾರೆ ವಿಜಯಲಕ್ಷ್ಮಿ. ನನಗೇನಾದರೂ ಹೆಚ್ಚುಕಮ್ಮಿಯಾದರೆ ಎಲ್ಲರೂ ಸೇರಿ ನನ್ನನ್ನು ಮರ್ಡರ್‌ ಮಾಡಿದ್ದೀರಿ ಎಂದುಕೊಳ್ಳಿ. ಯಶ್‌, ದರ್ಶನ್‌ ಯಾರಿಗೂ ಕೇಳಿದ್ರೂ ಪ್ರಯೋಜನ ಆಗಲಿಲ್ಲ.

ಈ ಹಿಂದೆ ವಿಡಿಯೋ ಮಾಡಿದ್ದ ವಿಜಯಲಕ್ಷ್ಮಿ ತಮ್ಮ ಅಕ್ಕ ಉಷಾ ಸ್ಥಿತಿ ಬಗ್ಗೆ ಹೇಳಿದ್ದರು. ಅಕ್ಕನ ಸ್ಥಿತಿ ತುಂಬಾ ಗಂಭೀರವಾಗಿದೆ. ಆದರೂ ಯಾರೂ ನಮ್ಮ ನೆರವಿಗೆ ಧಾವಿಸುತ್ತಿಲ್ಲ. ಅಕ್ಕನಿಗೆ ನೆನಪಿನ ಶಕ್ತಿಯೂ ಹೋಗಿದೆ. ಮಾತನಾಡಲೂ ಆಗುತ್ತಿಲ್ಲ. ಅವರಿಗೆ ಸರ್ಜರಿ ಆಗಿದೆ. ಆದರೆ ಸರ್ಜರಿ ನಂತರ ತುಂಬಾ ವೀಕ್‌ ಆಗಿದ್ದಾರೆ. ಹೀಗೇಕೆ ಎಂದು ಡಾಕ್ಟರ್‌ ಬಳಿ ಕೇಳಿ ಸಾಕಾಗಿದೆ. ಅವರು ಯಾವುದೇ ರಿಸ್‌ಪಾನ್ಸ್‌ ಮಾಡುತ್ತಿಲ್ಲ. ಬೇರೆ ಆಸ್ಪತ್ರೆಗೆ ಸೇರಿಸಿ ಅಕ್ಕನಿಗೆ ಚಿಕಿತ್ಸೆ ಕೊಡಿಸಲು ದುಡ್ಡಿಲ್ಲ. ದಯವಿಟ್ಟು ಆರ್ಥಿಕ ಸಹಾಯ ಮಾಡಿ’ ಎಂದಿದ್ದರು. ಈಗ ತಮ್ಮ ಆರೋಗ್ಯ ಹದಗೆಟ್ಟಿರುವ ಬಗ್ಗೆ ವಿಡಿಯೋ ಮೂಲಕ ಕೆಮ್ಮುತ್ತಲೇ ಮಾಹಿತಿ ನೀಡಿದ್ದಾರೆ.

ವಿಜಯಲಕ್ಷ್ಮಿ ಅವರು ಮಾತನಾಡಿರುವ ವಿಡಿಯೋ ಇಲ್ಲಿದೆ ನೋಡಿ- ಈ ಲಿಂಕ್‌ ಕ್ಲಿಕ್ಕಿಸಿ: 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net