More

    ಹಿಮಸ್ಫೋಟ: ರಕ್ಷಣಾ ಸಿಬ್ಬಂದಿಯೂ ನಾಪತ್ತೆ- ಸಿಗುತ್ತಲೇ ಇವೆ ಮೃತದೇಹ; ಉತ್ತರ ಪ್ರದೇಶದಲ್ಲಿ ಹೈ ‌ಅಲರ್ಟ್‌

    ಡೆಹ್ರಾಡೂನ್: ಉತ್ತರಾಖಂಡ್ ಚಮೋಲಿಯಲ್ಲಿ ನಡೆದ ದುರಂತಕ್ಕೆ ಇಲ್ಲಿಯವರೆಗೆ 12 ಮಂದಿ ಬಲಿಯಾಗಿದ್ದಾರೆ. ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದ ಇಬ್ಬರು ಸಿಬ್ಬಂದಿ ಕೂಡ ನಾಪತ್ತೆಯಾಗಿದ್ದು, 170ಕ್ಕೂ ಅಧಿಕ ಮಂದಿಯ ಸುಳಿವು ಸಿಗದಾಗಿದೆ. ಮೃತದೇಹಗಳು ಇನ್ನೂ ಪತ್ತೆಯಾಗುತ್ತಿರುವುದಾಗಿ ರಕ್ಷಣಾ ತಂಡ ಹೇಳಿದೆ.

    ಅದೇ ಇನ್ನೊಂದೆಡೆ ಉತ್ತರ ಪ್ರದೇಶದಲ್ಲಿಯೂ ಪ್ರವಾಹ ಭೀತಿ ಎದುರಾಗಿದ್ದ ಹೈ ಅಲರ್ಟ್‌ ಘೋಷಣೆ ಮಾಡಲಾಗಿದೆ. ಶ್ರೀನಗರ, ಹರಿದ್ವಾರ, ಋಷಿಕೇಶದಲ್ಲಿ ನದಿ ನೀರಿನ ಮಟ್ಟ ಹೆಚ್ಚಳವಾಗಿರುವ ಕಾರಣ, ಈ ಎಚ್ಚರಿಕೆ ನೀಡಲಾಗಿದೆ.

    ರಾತ್ರಿಯಿಡೀ ಕಾರ್ಯಾಚರಣೆ ನಡೆಸಲಾಗಿದೆ. ಇಲ್ಲಿಯವರೆಗೆ ಎನ್‍ಡಿಆರ್‍ಎಫ್‍ನಿಂದ 16 ಮಂದಿ ಕಾರ್ಮಿಕರ ರಕ್ಷಣೆ ಮಾಡಿದ್ದಾರೆ. ಎರಡನೇ ಸುರಂಗದಲ್ಲಿ 60 ಮಂದಿ ಸಿಲುಕಿರುವ ಶಂಕೆ ವ್ಯಕ್ತವಾಗುತ್ತಿದೆ. ಎನ್‍ಟಿಪಿಸಿ ಸ್ಥಾವರದಲ್ಲಿ 148 ಮತ್ತು ಋಷಿಗಂಗಾದಲ್ಲಿ ಕೆಲಸ ಮಾಡುತ್ತಿದ್ದ 22 ಮಂದಿ ಉದ್ಯೋಗಿಗಳು ಸೇರಿ ಒಟ್ಟು 170 ಜನರು ನಾಪತ್ತೆಯಾಗಿದ್ದಾರೆ.

    ಪ್ರವಾಹದಲ್ಲಿ ಐದು ಸೇತುವೆಗಳು ಕೊಚ್ಚಿಹೊಗಿದ್ದು, ಮನೆಗಳು ಮತ್ತು ಎನ್‍ಟಿಪಿಸಿ ವಿದ್ಯುತ್ ಸ್ಥಾವರಕ್ಕೆ ಹಾನಿಯಾಗಿದೆ. ಸಮೀಪದ ಹಳ್ಳಿ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ. ಋಷಿಗಂಗಾದ ಸಣ್ಣ ವಿದ್ಯುತ್ ಯೋಜನೆಯು ಕೊಚ್ಚಿಹೋಗಿವೆ. ರಾಷ್ಟ್ರೀಯ ಮತ್ತು ರಾಜ್ಯದ ವಿಪತ್ತು ನಿರ್ವಹಣಾ ದಳ, ಇಂಡೋ ಟಿಬೆಟಿಯನ್ ಬಾರ್ಡರ್ ಪೊಲೀಸ್ ರಕ್ಷಣಾ ಕಾರ್ಯಾಚರಣೆ ಮಾಡುತ್ತಿದ್ದಾರೆ.

    ಇದಾಗಲೇ ಮೃತರ ಕುಟುಂಬಕ್ಕೆ 4 ಲಕ್ಷ ಪರಿಹಾರವನ್ನು ಮುಖ್ಯಮಂತ್ರಿ ರಾವತ್ ಘೋಷಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ಈ ಕುರಿತು ಟ್ವೀಟ್‌ ಮಾಡಿದ್ದು, ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಯಿಂದ ಹೆಚ್ಚುವರಿ 2 ಲಕ್ಷ ನೀಡಲಾಗುವುದು, ಗಂಭೀರವಾಗಿ ಗಾಯಗೊಂಡವರಿಗೆ ತಲಾ 50 ಸಾವಿರ ರೂಪಾಯಿ ನೀಡಲಾಗುತ್ತದೆ. ದುರಂತದ ಬಗ್ಗೆ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಜೊತೆ ಮಾತನಾಡಿದ್ದೇನೆ ಎಂದಿದ್ದಾರೆ.

    ಉತ್ತರಾಖಂಡ: ಹಿಮಸ್ಫೋಟಕ್ಕೆ ಸಿಲುಕಿದವರ ರಕ್ಷಣೆ ಮಾಡುವ ಮೈನವಿರೇಳಿಸುವ ವಿಡಿಯೋ ನೋಡಿ…

    ಅಲ್ಹಾನನ್ನು ಮೆಚ್ಚಿಸಲು ಆರು ವರ್ಷದ ಸ್ವಂತ ಮಗುವನ್ನು ಭೀಕರವಾಗಿ ಕೊಂದ ಗರ್ಭಿಣಿ ಶಿಕ್ಷಕಿ!

    ಬಿಜೆಪಿ ಮುಖಂಡನ ಮುಖಕ್ಕೆ ಮಸಿ ಬಳಿದರೆ ಲಕ್ಷ ಬಹುಮಾನ: ಕಾಂಗ್ರೆಸ್‌ ನಾಯಕಿ ಘೋಷಣೆ

    ಬೆಂಗಳೂರಿಗೆ ಬೈ ಬೈ: ಜ್ಯೋತಿಷಿಯ ಅಣತಿಯಂತೆ ಚೆನ್ನೈನತ್ತ ಚಿನ್ನಮ್ಮ- ಕುಂಬಳಕಾಯಿ ಸ್ವಾಗತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts