More

  ಪುಂಡಾನೆ ಸೆರೆ ಕಾರ್ಯಾಚರಣೆ ವಿಫಲ

  ಗುಂಡ್ಲುಪೇಟೆ: ತಾಲೂಕಿನ ಹಂಗಳ ಹೋಬಳಿ ವ್ಯಾಪ್ತಿಯ ಜಮೀನುಗಳಿಗೆ ನುಗ್ಗಿ ದಾಂಧಲೆ ಮಾಡುತ್ತಿದ್ದ ಪುಂಡಾನೆ ಸೆರೆಗೆ ಅರಣ್ಯ ಇಲಾಖೆ ನಡೆಸಿದ ಕಾರ್ಯಾಚರಣೆ ಶುಕ್ರವಾರವೂ ವಿಫಲವಾಯಿತು.

  ತಾಲೂಕಿನ ಹಂಗಳ ಸಮೀಪದ ಹಿರೀಕೆರೆ ಸುತ್ತಮುತ್ತಲಿನ ಜಮೀನುಗಳಲ್ಲಿ ಸುಳಿದಾಡುತ್ತಿದ್ದ ಪುಂಡಾನೆ ಸೆರೆಗೆ ಕಾರ್ಯಾಚರಣೆ ಆರಂಭಿಸಿದ ನಂತರ ಬೇರೆಡೆಗೆ ತೆರಳುತ್ತಿದೆ.

  ಹಲವು ದಿನಗಳಿಂದ ಅರಣ್ಯ ಇಲಾಖೆ ಪುಂಡಾನೆ ಪತ್ತೆ ಹಚ್ಚಿ ಸಾಕಾನೆಗಳನ್ನು ಕರೆದೊಯ್ಯುವ ವೇಳೆಗೆ ಪರಾರಿಯಾಗುತ್ತಿದೆ. ಕಳೆದ ಮೂರು ದಿನಗಳಲ್ಲಿ ಹುಂಡೀಪುರ, ಶಿವಪುರದತ್ತ ತೆರಳಿದ್ದು, ಶಿವಪುರ ಸಮೀಪ ಕಾಣಿಸಿಕೊಂಡರೂ ಅಲ್ಲಿಗೆ ತೆರಳುವ ವೇಳೆಗೆ ಬೇರೆಡೆ ಹೋಗಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts