70 ವರ್ಷಗಳ ನಂತರ ಮಹಿಳೆಗೆ ಗಲ್ಲುಶಿಕ್ಷೆ- ಅಮೆರಿಕದಲ್ಲಿ ಹೀಗೊಂದು ಪ್ರಕರಣ...

death sentence
Published on

ವಾಷಿಂಗ್ಟನ್: ಅಪಹರಣ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮೆರಿಕ ಮಹಿಳೆಯೊಬ್ಬರನ್ನು ಗಲ್ಲು ಶಿಕ್ಷೆ ವಿಧಿಸಿದೆ. ಈ ಶಿಕ್ಷೆ ಇಷ್ಟು ಸುದ್ದಿಯಾಗಲು ಕಾರಣ, ಸುಮಾರು 70 ವರ್ಷಗಳ ಬಳಿಕ ಮಹಿಳೆಯೊಬ್ಬರು ಮರಣದಂಡನೆಗೆ ಒಳಗಾಗುತ್ತಿದ್ದಾಳೆ.

ಲೀಸಾ ಮಾಂಟಾಗೋಮೇರಿ ಎಂಬ 52 ವರ್ಷದ ಪಾತಕಿಗೆ ಈ ಶಿಕ್ಷೆ ವಿಧಿಸಲಾಗಿದೆ. ಈ ಮೂಲಕ, 1953ರ ನಂತರ ಅಮೆರಿಕದಲ್ಲಿ ಮೊದಲ ಬಾರಿಗೆ ಮಹಿಳೆಗೆ ಗಲ್ಲುಶಿಕ್ಷೆ ನೀಡಲಾಗಿದೆ.

2007ರಲ್ಲಿ ಎಂಟು ತಿಂಗಳ ಗರ್ಭಿಣಿಯೊಬ್ಬರನ್ನು ಅಪಹರಿಸಿ ಅವರ ಗರ್ಭವನ್ನು ಸೀಳಿ ಹತ್ಯೆಗೈಯುವಂಥ ಮಹಾ ನೀಚ ಕೃತ್ಯವನ್ನು ಮಾಡಿದ್ದಳು ಲೀಸಾ.

ಈಕೆಯ ಈ ಕೃತ್ಯಕ್ಕೆ ಬಲಿಯಾದ ಗರ್ಭಿಣಿ. ಬಾಬಿ ಜೋ ಸ್ಟಿನ್ನೆಟ್​. ಅದರೆ ಅಚ್ಚರಿ ಎಂದರೆ ಬಾಬಿ ಈಕೆಯ ಕೃತ್ಯದಿಂದಾಗಿ ಭೀಕರವಾಗಿ ಮೃತಪಟ್ಟಿದ್ದರೂ ಆಕೆಯ ಮಗು ಬದುಕುಳಿದಿತ್ತು.

2007ರಲ್ಲಿ ಈ ಪ್ರಕರಣದ ವಿಚಾರಣೆ ನಡೆಸಿದ್ದ ಫೆಡರಲ್ ಜ್ಯೂರಿ ಅವಿರೋಧವಾಗಿ ಲೀಸಾಗೆ ಗಲ್ಲುಶಿಕ್ಷೆ ವಿಧಿಸಲು ಶಿಫಾರಸು ಮಾಡಿತ್ತು. ಇದನ್ನು ಮಿಸೌರಿ ಜಿಲ್ಲಾ ಕೋರ್ಟ್​ನಲ್ಲಿ ಲೀಸಾ ಪ್ರಶ್ನಿಸಿದ್ದಳು. ಶಿಕ್ಷೆಯನ್ನು ಇದೀಗ ಕಾಯಂ ಮಾಡಿರುವುದಾಗಿ ನ್ಯಾಯಾಂಗ ಇಲಾಖೆ ತಿಳಿಸಿದೆ.

ಗಲ್ಲು ಶಿಕ್ಷೆಯ ಕುರಿತಂತೆ ಸಾಕಷ್ಟು ಪರ-ವಿರೋಧ ಚರ್ಚೆಗಳು ನಡೆದ ನಂತರ ಈ ಶಿಕ್ಷೆಯನ್ನು ಕಾಯಂ ಮಾಡಲಾಗಿದೆ ಎಂದು ನ್ಯಾಯಾಂಗ ಇಲಾಖೆ ಹೇಳಿದೆ.

ಮೊದಲು ಈಕೆಗೆ ಇಂಡಿಯಾನಾದ ಟೆರ್ರೆ ಹೌಟೆಯಲ್ಲಿರುವ ನ್ಯಾಯಾಂಗ ಇಲಾಖೆಯಲ್ಲಿನ ಕಾರಾಗೃಹದಲ್ಲಿ ಲೇಥಾಲ್ ಇಂಜೆಕ್ಷನ್ ನೀಡಿ ಸಾಯಿಸಲು ನಿರ್ಧರಿಸಲಾಗಿತ್ತು. ಆದರೆ ಫೆಡರಲ್ ಜ್ಯೂರಿ ಮರಣದಂಡನೆ ಸೂಕ್ತ ಎಂದು ಶಿಫಾರಸು ಮಾಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net