

ಕರೊನಾದ ಈ ಸಮಯದಲ್ಲಿ ಎಲ್ಲರೂ ಆತಂಕದಲ್ಲಿಯೇ ಬದುಕುವಂತಾಗಿದೆ. ಈ ನಡುವೆಯೇ ಕೆಲವರು ಮಾತ್ರ ಇದೇ ಸಮಯದಲ್ಲಿ ವಿಶಿಷ್ಟ ರೀತಿಯ ಪ್ರತಿಭೆಗಳಿಂದ ಜನರನ್ನು ಉಲ್ಲಾಸಭರಿತರನ್ನಾಗಿ ಮಾಡುವಲ್ಲಿ ನಿರತರಾಗಿದ್ದಾರೆ. ಅಂಥದ್ದರಲ್ಲಿ ಒಂದು ಈ ನೃತ್ಯ.
ನೀರಿನೊಳಗೆ ನೃತ್ಯ ಮಾಡುವ ಮೂಲಕ ಜಯದೀಪ್ ಗೋಹಿಲ್ ಎಂಬ ಯುವಕ ಎಲ್ಲರ ಹುಬ್ಬೇರಿಸಿದ್ದಾನೆ. ತನ್ನ ಇನ್ಸ್ಟಾಗ್ರಾಂನಲ್ಲಿ ನೃತ್ಯವನ್ನು ಅಪ್ಲೋಡ್ ಮಾಡಿರುವ ಯುವಕನಿಗೆ ಇದಾಗಲೇ ಸಹಸ್ರಾರು ಮಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ತಮ್ಮನ್ನು ತಾವು ಭಾರತದ ಮೊದಲ ಅಂಡರ್ವಾಟರ್ ಡಾನ್ಸರ್ ಎಂದು ಕರೆಸಿಕೊಂಡಿರುವ ಈ ಯುವಕ, ಬಾಲಿವುಡ್ನ ಹಲವು ಖ್ಯಾತನಾಮರ ನೃತ್ಯಕ್ಕೆ ನೀರಿನೊಳಗೇ ನೃತ್ಯ ಮಾಡುವ ಮೂಲಕ ಅಪಾರ ಅಭಿಮಾನಿಗಳನ್ನು ಗಳಿಸಿದ್ದಾರೆ.
ಇವರ ಅಂಡರ್ವಾಟರ್ ನೃತ್ಯದ ಪುಟಕ್ಕೆ ಸುಮಾರು 3 ಲಕ್ಷ ಫಾಲೋವರ್ಸ್ ಇದ್ದಾರೆ. ಬಾಲಿವುಡ್ ತಾರೆಯರಾದ ಹೃತಿಕ್ ರೋಷನ್ ಸೇರಿದಂತೆ ಹಲವು ಮಂದಿ ಕೂಡ ಇವರ ನೃತ್ಯವನ್ನು ಮೆಚ್ಚಿ ಫೇಸ್ಬುಕ್ನಲ್ಲಿ ಫಾಲೋವರ್ ಆಗಿದ್ದಾರೆ.
ಜಯದೀಪ್ ಗೋಹಿಲ್ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಅಪ್ಲೋಡ್ ಮಾಡಿರುವ ಕೆಲವೊಂದು ನೃತ್ಯದ ತುಣುಕುಗಳು ಇಲ್ಲಿವೆ ನೋಡಿ...