ಕೇಂದ್ರ ಸರ್ಕಾರದ ಭದ್ರತಾ ಪಡೆಯಲ್ಲಿ ಭರ್ಜರಿ ಪೊಲೀಸ್‌ ಹುದ್ದೆ; 2 ಸಾವಿರ ನೇಮಕಾತಿಗೆ ಆಹ್ವಾನ

udyoga
Published on

ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ ಎಫ್) ಮಾಜಿ ಸೈನಿಕ, ಸಬ್ ಇನ್ಸ್ ಪೆಕ್ಟರ್ (ಎಸ್ ಐ), ಸಹಾಯಕ ಸಬ್ ಇನ್ಸ್ ಪೆಕ್ಟರ್ (ಎಎಸ್ ಐ), ಹೆಡ್ ಕಾನ್ ಸ್ಟೆಬಲ್ (ಜಿಡಿ), ಕಾನ್ ಸ್ಟೆಬಲ್ (ಜಿಡಿ) ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ಅಭ್ಯರ್ಥಿಗಳನ್ನು ಒಂದು ವರ್ಷದ ಅವಧಿಗೆ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಲಾಗುತ್ತದೆ.

ಅಭ್ಯರ್ಥಿಗಳ ಕಾರ್ಯಕ್ಷಮತೆಯ ಆಧಾರದ ಮೇಲೆ, ಅವರ ಒಪ್ಪಂದವನ್ನು ಇನ್ನೂ 2 ವರ್ಷಗಳವರೆಗೆ ನವೀಕರಿಸಬಹುದು.

ಹುದ್ದೆಗಳ ವಿವರ

ಸಬ್ ಇನ್ಸ್ ಪೆಕ್ಟರ್: 63

ಸಹಾಯಕ ಸಬ್ ಇನ್ಸ್ ಪೆಕ್ಟರ್: 187

ಹೆಡ್ ಕಾನ್‌ಸ್ಟೆಬಲ್/ ಜಿಡಿ: 424

ಕಾನ್‌ಸ್ಟೆಬಲ್/ ಜಿಡಿ: 1326

ಅರ್ಹತೆ ಮತ್ತು ವಯೋಮಿತಿ

* ಭಾರತೀಯ ಸೇನೆಯಲ್ಲಿ ಕೊನೆಯ ಹುದ್ದೆ ಆಧಾರದ ಮೇಲೆ ಖಾಲಿ ಇರುವ ಹುದ್ದೆಗಳಿಗೆ ನೇಮಕ ನಡೆಯಲಿದೆ.

* ಅಭ್ಯರ್ಥಿಗಳಿಗೆ 50 ವರ್ಷ ಅಥವಾ ಕಡಿಮೆ ವಯಸ್ಸಿನವರಾಗಿರಬೇಕು.

ವೇತನ ಶ್ರೇಣಿ

ಎಸ್ ಐ- 40 ಸಾವಿರ ರೂ.

ಎಎಸ್ ಐ- 35 ಸಾವಿರ ರೂ.

HC/GD - 30 ಸಾವಿರ ರೂ.

ಕಾನ್ಸ್‌ಟೆಬಲ್‌/ಜಿಡಿ - 25 ಸಾವಿರ ರೂ.

ಹೆಚ್ಚಿನ ಮಾಹಿತಿಗೆ ಕ್ಲಿಕ್ಕಿಸಿ; https://www.cisfrectt.in/

ಅಧಿಕೃತ ವೆಬ್‌ಸೈಟ್‌ https://www.cisf.gov.in/cisfeng/recruitment/

ಹೆಚ್ಚಿನ ಉದ್ಯೋಗ ಸುದ್ದಿಗೆ ಕ್ಲಿಕ್ಕಿಸಿ:

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net