

ಕರ್ನಾಟಕ ಸರ್ಕಾರ ಪೊಲೀಸ್ ವಾದ್ಯ ಸಲಹಾ ಮಂಡಳಿ ಸಮಿತಿಯಿಂದ ಆಂಗ್ಲ ಮತ್ತು ಕನ್ನಡ ವಾದ್ಯಗಾರ ಹಾಗೂ ಕರ್ನಾಟಕ ವಾದ್ಯಗಾರರ ಬ್ಯಾಕ್ಲಾಗ್ ಹುದ್ದೆಗಳ ನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಮೈಸೂರು, ಮಂಡ್ಯ, ಹಾಸನ, ಚಿಕ್ಕಮಗಳೂರು, ದಣ ಕನ್ನಡ, ಕೊಡಗು, ಚಾಮರಾಜನಗರ, ಉಡುಪಿ ಜಿಲ್ಲೆಗಳಿಗೆ ಈ ಅಧಿಸೂಚನೆ ಅನ್ವಯವಾಗಲಿದೆ. ಈ ಹುದ್ದೆಗಳು 2 ವರ್ಷ 6 ತಿಂಗಳ ಖಾಯಂ ಪೂರ್ಣಾವಧಿಯದ್ದಾಗಿದ್ದು, ಪುರುಷ ಅಭ್ಯರ್ಥಿಗಳು ಮಾತ್ರ ಅರ್ಹರು ಎಂದು ಸೂಚಿಸಲಾಗಿದೆ.
ಒಟ್ಟು ಹುದ್ದೆಗಳು: 17
ಹುದ್ದೆ ವಿವರ
* ಆಂಗ್ಲ ವಾದ್ಯವೃಂದದ ವಾದ್ಯಗಾರ - 7
* ಕರ್ನಾಟಕ ವಾದ್ಯವೃಂದದ ವಾದ್ಯಗಾರ - 8
* ಕರ್ನಾಟಕ ವಾದ್ಯಗಾರರ ಬ್ಯಾಕ್ಲಾಗ್ ಹುದ್ದೆ - 2
ಯಾವೆಲ್ಲ ವಾದ್ಯ: ವೀಣೆ, ದಿಲ್ರೂಬ, ಎೋನಿಯಂ, ಕ್ಲಾರಿಯೋನೆಟ್, ಓಬೋ, ಆಲ್ಫೋ ಸ್ಯಾಕ್ಸೋಫೋನ್, ಶಹನಾಯ್ ಹಾಮೋರ್ನಿಯಂ, ಕಹಳೆ ಇತರ ವಾದ್ಯಗಳನ್ನು ನುಡಿಸಲು ನೇಮಕ ಮಾಡಿಕೊಳ್ಳಲಾಗುತ್ತಿದೆ.
ಶೈಕ್ಷಣಿಕ ಅರ್ಹತೆ: ಲಂಡನ್ನ ಟ್ರಿನಿಟಿ ಸಂಗೀತ ಕಾಲೇಜಿನಲ್ಲಿ ಲಿನ್ಸಿಯೇಟ್ ಪರೀಕ್ಷೆ ಯಲ್ಲಿ ತೇರ್ಗಡೆಯಾಗಿರಬೇಕು/ ತತ್ಸಮಾನ ಪರೀಕ್ಷೆ ಯಲ್ಲಿ ತೇರ್ಗಡೆಯಾಗಿರಬೇಕು. ಕರ್ನಾಟಕ ಸಂಗೀತದಲ್ಲಿ ಸೀನಿಯರ್ ಗ್ರೇಡ್ ಪರೀಕ್ಷೆ ತೇರ್ಗಡೆಯಾಗಿರಬೇಕು/ ಬಿ ಮ್ಯೂಸಿಕ್ ಪದವಿ. ಎಲ್ಲ ರೀತಿಯ ದೊಡ್ಡ, ಸಣ್ಣ ಪ್ರಮಾಣದ ಮತ್ತು ಕ್ರೊಮ್ಯಾಟಿಕ್ ಸ್ಕೇಲಿನ ವಾದ್ಯಗಳ ಬಗ್ಗೆ ತಿಳುವಳಿಕೆ ಇರಬೇಕು ಮತ್ತು ವಾದ್ಯೋಪಕರಣಗಳನ್ನು ಆ ಕ್ಷಣವೇ ಸರಾಗವಾಗಿ ನುಡಿಸುವ ಸಾಮರ್ಥ್ಯವಿರಬೇಕು.
ವಯೋಮಿತಿ: 25.6.2021ಕ್ಕೆ ಅನ್ವಯವಾಗುವಂತೆ ಕನಿಷ್ಠ 18 ವರ್ಷ, ಗರಿಷ್ಠ 30 ವರ್ಷ ನಿಗದಿಪಡಿಸಲಾಗಿದೆ.ಬ್ಯಾಕ್ಲಾಗ್ ಹುದ್ದೆಗೆ ಕನಿಷ್ಠ 29 ವರ್ಷ, ಗರಿಷ್ಠ 40 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ.
ವೇತನ: 23,500 ರೂ. ನಿಂದ 47,650 ರೂ. ವೇತನ ಒದ್ದು, ಪಿಂಚಣಿ ಸೌಲಭ್ಯ ಇರುತ್ತದೆ.
ಮೀಸಲಾತಿ: ಗ್ರಾಮೀಣ ಅಭ್ಯರ್ಥಿಗೆ 3 ಸ್ಥಾನ, ಇತರರಿಗೆ 14 ಸ್ಥಾನ ಮೀಸಲಿರಿಸಲಾಗಿದೆ.
ಅರ್ಜಿ ಶುಲ್ಕ: ಸಾಮಾನ್ಯವರ್ಗ, 2ಎ, ಬಿ, 3ಎ, ಬಿಗೆ ಸೇರಿದ ಅಭ್ಯರ್ಥಿಗಳಿಗೆ 250 ರೂ., ಎಸ್ಸಿ, ಎಸ್ಟಿ, ಪ್ರವರ್ಗ 1ಕ್ಕೆ ಸೇರಿದ ಅಭ್ಯರ್ಥಿಗಳಿಗೆ 100 ರೂ. ಶುಲ್ಕ ನಿಗದಿಪಡಿಸಲಾಗಿದೆ.
ಆಯ್ಕೆ ಪ್ರಕ್ರಿಯೆ: ಲಿಖಿತ ಪರೀಕ್ಷೆ , ಪ್ರಾಯೋಗಿಕ ಪರೀಕ್ಷೆ ಹಾಗೂ ಸಂದರ್ಶನವನ್ನು ಮೈಸೂರು ನಗರದಲ್ಲೇ ನಡೆಸಲಾಗುವುದು. ವೈದ್ಯಕಿಯ ಪರೀಕ್ಷೆ ಯಲ್ಲಿ ದೃಷ್ಟಿ ಹಾಗೂ ಶ್ರವಣ ಶಕ್ತಿ ಪರೀಕ್ಷೆ ನಡೆಸಲಾಗುವುದು.
ಅರ್ಜಿ ಸಲ್ಲಿಸಲು ಕೊನೇ ದಿನ: 26.6.2021
ಅರ್ಜಿ ಸಲ್ಲಿಕೆ ವಿಳಾಸ: ಕಮಾಂಡೆಂಟ್, ಕೆಎಆರ್ಪಿ ಮೌಂಟೆಡ್ ಕಂಪನಿ, ಲಲಿತಮಹಲ್ ರಸ್ತೆ, ಮೈಸೂರು-570011
ಅಧಿಸೂಚನೆಗೆ: https://bit.ly/3iTMsWR
ಮಾಹಿತಿಗೆ: www.ksp.gov.in