ಮಂಗಳೂರಿನ ಪೆಟ್ರೋಕೆಮಿಕಲ್ಸ್ ಕಂಪೆನಿಯಲ್ಲಿವೆ 25 ಹುದ್ದೆಗಳು

udyogamitra
Published on

ಮಂಗಳೂರು: ಮಂಗಳೂರಿನಲ್ಲಿರುವ ಒಎನ್‍ಜಿಸಿ ಮಂಗಳೂರು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (ಒಎಂಪಿಎಲ್) ಗ್ರಾಜುಯೇಟ್ ಮತ್ತು ಟೆಕ್ನೀಷಿಯನ್ ಅಪ್ರೆಂಟೀಸ್‍ಗೆ ಅರ್ಜಿ ಅಹ್ವಾನಿಸಿ ಅಧಿಸೂಚನೆ ಹೊರಡಿಸಿದೆ.

ಒಎಂಪಿಎಲ್‍ನಲ್ಲಿ ಖಾಲಿ ಇರುವ 25 ಹುದ್ದೆಗಳು ಒಂದು ವರ್ಷದ ಒಪ್ಪಂದಕ್ಕೆ ಒಳಪಟ್ಟಿದ್ದು, ಸಾಮಾನ್ಯವರ್ಗಕ್ಕೆ 13 ಸ್ಥಾನ, ಎಸ್‍ಸಿಗೆ 3, ಎಸ್‍ಟಿಗೆ 2, ಇತರ ಹಿಂದುಳಿದ ವರ್ಗಕ್ಕೆ 7 ಸ್ಥಾನಗಳನ್ನು ಮೀಸಲಿರಿಸಲಾಗಿದೆ. ಅಭ್ಯರ್ಥಿಗಳು ಅರ್ಜಿ ಸಲ್ಲಿಸುವಾಗ ಕಡ್ಡಾಯವಾಗಿ ಫೋಟೋ ಮತ್ತು ಸಹಿಯನ್ನು ಅಪ್‍ಲೋಡ್ ಮಾಡಬೇಕು.

ಹುದ್ದೆಗಳ ವಿವರ

*ಗ್ರಾಜುಯೇಟ್ ಅಪ್ರೆಂಟೀಸ್ ತರಬೇತಿ

- ಕೆಮಿಕಲ್ - 8

- ಎಲೆಕ್ಟ್ರಿಕಲ್/ ಎಲೆಕ್ಟ್ರಿಕಲ್ ಆ್ಯಂಡ್ ಎಲೆಕ್ಟ್ರಾನಿಕ್ಸ್ - 3

- ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಷನ್/ ಎಲೆಕ್ಟ್ರಾನಿಕ್ಸ್ ಆ್ಯಂಡ್ ಇನ್‍ಸ್ಟ್ರುಮೆಂಟೇಷನ್/ ಇನ್‍ಸ್ಟ್ರುಮೆಂಟೇಷನ್ - 2

- ಮೆಕ್ಯಾನಿಕಲ್ - 4

* ಟೆಕ್ನಿಷಿಯನ್ ಅಪ್ರೆಂಟೀಸ್ ತರಬೇತಿ

- ಕೆಮಿಕಲ್ - 1

- ಎಲೆಕ್ಟ್ರಿಕಲ್/ಎಲೆಕ್ಟ್ರಿಕಲ್ ಆ್ಯಂಡ್ ಎಲೆಕ್ಟ್ರಾನಿಕ್ಸ್ - 3

- ಮೆಕ್ಯಾನಿಕಲ್ - 4

ಶೈಕ್ಷಣಿಕ ಅರ್ಹತೆ:

ಹುದ್ದೆ ಸಂಬಂಧಿತ ವಿಷಯಗಳಲ್ಲಿ ಇಂಜಿನಿಯರಿಂಗ್ ಡಿಪೆÇ್ಲಮಾ. ಸಾಮಾನ್ಯ ವರ್ಗದ ಅಭ್ಯರ್ಥಿಗಳು ಕನಿಷ್ಠ ಶೇ.55 ಅಂಕ ಪಡೆದಿರಬೇಕು. ಮೀಸಲಾತಿ ಅಭ್ಯರ್ಥಿಗಳು ಶೇ.45-40 ಅಂಕ ಪಡೆದಿರಬೇಕು. ಅಭ್ಯರ್ಥಿಗಳು 2018, 2019, 2020ರಲ್ಲಿ ಉತ್ತೀರ್ಣರಾದವರು ಮಾತ್ರ ಅರ್ಜಿ ಸಲ್ಲಿಸಬೇಕು.

ಸ್ಟೈಪೆಂಡ್:

ಗ್ರಾಜುಯೇಟ್ ಅಪ್ರೆಂಟೀಸ್‍ಗೆ ಮಾಸಿಕ 10,000 ರೂ. ಹಾಗೂ ಟೆಕ್ನಿಷಿಯನ್ ಅಪ್ರೆಂಟೀಸ್‍ಗೆ ಮಾಸಿಕ 8,000 ರೂ. ಸ್ಟೈಪೆಂಡ್ ನೀಡಲಾಗುವುದು.

ಆಯ್ಕೆ ಪ್ರಕ್ರಿಯೆ:

ಶೈಕ್ಷಣಿಕ ಅಂಕಗಳನ್ನು ಆಧರಿಸಿ ಆಯ್ಕೆ ಮಾಡಲಾಗುತ್ತದೆ. ಸಮಾನ ಅಂಕ ಪಡೆದ ಅಭ್ಯರ್ಥಿಗಳನ್ನು ವಯಸ್ಸಿನ ಆಧಾರದ ಮೇಲೆ ಶಾರ್ಟ್ ಲಿಸ್ಟ್ ಮಾಡಲಾಗುವುದು. (ಮೀಸಲಾತಿ ಅಭ್ಯರ್ಥಿಗಳಿಗೆ ಪ್ರತ್ಯೇಕ ಪಟ್ಟಿ ಸಿದ್ಧಪಡಿಸಲಾಗುವುದು) ಆಯ್ಕೆಯಾದ ಅಭ್ಯರ್ಥಿಗಳು 7 ದಿನದ ಒಳಗಾಗಿ ಮೇಲ್ ಮುಖಾಂತರ ಶೈಕ್ಷಣಿಕ ಹಾಗೂ ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕು. ದಾಖಲೆಗಳ ಪರಿಶೀಲನೆಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ನೇಮಕಾತಿ ಪತ್ರ ನೀಡಲಾಗುವುದು.

ಅರ್ಜಿ ಸಲ್ಲಿಸಲು ಕೊನೇ ದಿನ: 01.01.2021

ಅಧಿಸೂಚನೆಗೆ ಇಲ್ಲಿ ಕ್ಲಿಕ್ಕಿಸಿ: https://bit.ly/2JAmQyG

ಮಾಹಿತಿಗೆ ಇಲ್ಲಿ ಕ್ಲಿಕ್ಕಿಸಿ: https://www.ompl.co.in/

ಇನ್ನೂ ಹೆಚ್ಚಿನ ಉದ್ಯೋಗಗಳ ಮಾಹಿತಿಗೆ https://www.vijayavani.net/ ವಿಭಾಗದ ಅಂಕಣ ಕಾಲಂನಲ್ಲಿ ಉದ್ಯೋಗಮಿತ್ರ ಕ್ಲಿಕ್ಕಿಸಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net