

ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡಲು ಆಸಕ್ತರಾದ ಅಭ್ಯರ್ಥಿಗಳಿಗೆ ಇನ್ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪಸೋನಲ್ ಸೆಲೆಕ್ಷನ್ (ಐಬಿಪಿಎಸ್) ಸುವರ್ಣ ಅವಕಾಶ ನೀಡಿದೆ. 2022-23ರ ಆರ್ಥಿಕ ವರ್ಷಕ್ಕೆ ಸಾಮಾನ್ಯ ನೇಮಕಾತಿ ಪ್ರಕ್ರಿಯೆ (ಸಿಆರ್ಪಿ) ಅನ್ವಯ ಕ್ಲರ್ಕ್-ಎಕ್ಸ್ ಹುದ್ದೆಗೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. 36 ರಾಜ್ಯಗಳಲ್ಲಿ ಉದ್ಯೋಗಾವಕಾಶಗಳಿದ್ದು, 11 ಬ್ಯಾಂಕ್ಗಳು ಪಾಲ್ಗೊಳ್ಳುತ್ತಿವೆ. ಕರ್ನಾಟಕದಲ್ಲಿ ಒಟ್ಟು 407 ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗುತ್ತಿದೆ.
ಯಾವೆಲ್ಲ ಬ್ಯಾಂಕ್ಗಳಲ್ಲಿ ನೇಮಕ?
* ಬ್ಯಾಂಕ್ ಆಫ್ ಬರೋಡ * ಬ್ಯಾಂಕ್ ಆಫ್ ಇಂಡಿಯಾ * ಬ್ಯಾಂಕ್ ಆಫ್ ಮಹಾರಾಷ್ಟ್ರ * ಕೆನರಾ ಬ್ಯಾಂಕ್ * ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ * ಇಂಡಿಯನ್ ಬ್ಯಾಂಕ್ * ಇಂಡಿಯನ್ ಒವರ್ಸೀಸ್ ಬ್ಯಾಂಕ್ * ಪಂಜಾಬ್ ನ್ಯಾಷನ್ ಬ್ಯಾಂಕ್ * ಪಂಜಾಬ್ ಆಂಡ್ ಸಿಂಧ್ ಬ್ಯಾಂಕ್ * ಯುಕೋ ಬ್ಯಾಂಕ್ * ಯುನಿಯನ್ ಬ್ಯಾಂಕ್ ಆಫ್ ಇಂಡಿಯಾ ಸೇರಿ ಒಟ್ಟು 11 ಬ್ಯಾಂಕ್ಗಳಲ್ಲಿ ನೇಮಕ ಮಾಡಿಕೊಳ್ಳಲಾಗುತ್ತಿದೆ.
ಕರ್ನಾಟಕದ ವಿವರ
* ಬ್ಯಾಂಕ್ ಆಫ್ ಇಂಡಿಯಾ - 12
* ಕೆನರಾ ಬ್ಯಾಂಕ್ - 140
* ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ - 5
* ಇಂಡಿಯನ್ ಒವರ್ಸೀಸ್ ಬ್ಯಾಂಕ್ - 28
* ಪಂಜಾಬ್ ಆಂಡ್ ಸಿಂಧ್ ಬ್ಯಾಂಕ್ - 3
* ಯೂಕೋ ಬ್ಯಾಂಕ್ - 10
* ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ - 209
ವಯೋಮಿತಿ
ಕನಿಷ್ಠ 20 ರಿಂದ ಗರಿಷ್ಠ 28 ವರ್ಷ ವಯೋಮಿತಿ ನಿಗದಿಪಡಿಸಿದ್ದು, 2.7.1993- 1.7.2001ರ ನಡುವೆ ಜನಿಸಿರಬೇಕು. ಮೀಸಲಾತಿ ಅಭ್ಯರ್ಥಿಗಳಿಗೆ ನಿಯಮದನ್ವಯ ವಯೋ ಸಡಿಲಿಕೆ ಇದೆ.
ವಿದ್ಯಾರ್ಹತೆ
ಯಾವುದೇ ವಿಷಯದಲ್ಲಿ ಪದವಿ ಅಥವಾ ತತ್ಸಮಾನ ಶಿಕ್ಷಣವನ್ನು 1.8.2021ರ ಒಳಗೆ ಪಡೆದಿದ್ದು, ಕಂಪ್ಯೂಟರ್ ಜ್ಞಾನ ಹೊಂದಿರಬೇಕು. ಸ್ಥಳೀಯ ಭಾಷೆಯಲ್ಲಿ ಓದಲು, ಬರೆಯಲು, ಮಾತನಾಡಲು ಬರೆಯಬೇಕು.
ಆಯ್ಕೆ ವಿಧಾನ: ಆನ್ಲೈನ್ನಲ್ಲಿ ಪ್ರಿಲಿಮಿನರಿ ಪರೀಕ್ಷೆ ನಂತರ ಮುಖ್ಯ ಪರೀಕ್ಷೆ ನಡೆಸಲಾಗುವುದು. ಪ್ರಿಲಿಮಿನರಿ ಪರೀಕ್ಷೆಯಲ್ಲಿ 3 ಪ್ರಶ್ನೆಪತ್ರಿಕೆಗಳಿರಲಿದ್ದು, ಇಂಗ್ಲಿಷ್, ನ್ಯೂಮರಿಕ್ ಎಬಿಲಿಟಿ, ರೀಸನಿಂಗ್ ಎಬಿಲಿಟಿ ಪರೀಕ್ಷೆ ನಡೆಯುತ್ತದೆ. ಮುಖ್ಯ ಪರೀಕ್ಷೆಯಲ್ಲಿ 4 ಪ್ರಶ್ನೆಪತ್ರಿಕೆಗಳಿರುತ್ತದೆ. ತಪು್ಪ ಉತ್ತರಗಳಿಗೆ ಋಣಾತ್ಮಕ ಅಂಕಗಳಿರುತ್ತವೆ. ಇಚ್ಚಿಸುವ ಅಭ್ಯರ್ಥಿಗಳಿಗೆ ನಿಗದಿತ ಕೇಂದ್ರಗಳಲ್ಲಿ ಪರೀಕ್ಷೆ ಪೂರ್ವ ತರಬೇತಿ ನೀಡಲಾಗುವುದು. ಆದರೆ ಈ ಬಾರಿ ಕರೊನಾ ಹಿನ್ನೆಲೆಯಲ್ಲಿ ತರಬೇತಿ ನಡೆಯುವುದು ಖಚಿತವಾಗಿಲ್ಲ. ಪರೀಕ್ಷೆಗೆ ಹಾಜರಾಗುವಾಗ ಕಾಲ್ ಲೆಟರ್ ಹೊಂದಿರುವುದು ಕಡ್ಡಾಯ.
ಪರೀಕ್ಷಾ ಕೇಂದ್ರ: ಬೆಂಗಳೂರು, ಬೆಳಗಾವಿ, ಬೀದರ್, ದಾವಣಗೆರೆ, ಧಾರವಾಢ, ಗುರ್ಲರ್ಬ, ಹಾಸನ, ಹುಬ್ಬಳ್ಳಿ, ಮಂಗಳೂರು, ಮೈಸೂರು, ಶಿವಮೋಗ್ಗ, ಉಡುಪಿ
ಅರ್ಜಿ ಶುಲ್ಕ
ಸಾಮಾನ್ಯವರ್ಗದವರಿಗೆ 850 ರೂ., ಎಸ್ಸಿ, ಎಸ್ಟಿ, ಅಂಗವಿಕಲ, ಮಾಜಿ ಯೋಧರಿಗೆ 175 ರೂ.
ಆನ್ಲೈನ್ ಶುಲ್ಕ ಪಾವತಿ ಹಾಗೂ ಅರ್ಜಿ ಸಲ್ಲಿಕೆಗೆ ಕೊನೇ ದಿನ: 1.8.2021
ಪ್ರಿಲಿಮಿನರಿ ಪರೀಕ್ಷೆ: 2021ರ ಆ.28, 29 ಮತ್ತು ಸೆ.4
ಮುಖ್ಯ ಪರೀಕ್ಷೆ: 31.10.2021
ಅಧಿಸೂಚನೆಗೆ: https://bit.ly/2UFUkRM
ಮಾಹಿತಿಗೆ: www.ibps.in