

ಬ್ಯಾಂಕ್ ಆಫ್ ಬರೋಡಾದಲ್ಲಿ ಖಾಲಿ ಇರುವ ಸೆಕ್ಯುರಿಟಿ ಹಾಗೂ ಫೈರ್ ಆಫೀಸರ್ ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿ ಅಧಿಸೂಚನೆ ಹೊರಡಿಸಲಾಗಿದೆ. ದೇಶಾದ್ಯಂತ ಇರುವ ಯಾವ ಶಾಖೆಯಲ್ಲಾದರೂ ನಿಯೋಜನೆ ಮಾಡಬಹುದು. ಒಟ್ಟು ಹುದ್ದೆಗಳು 32 ಇವೆ.
ಬ್ಯಾಂಕ್ ಆಫ್ ಬರೋಡಾಗೆ ನೇಮಕ ಆಗುವ ಅಭ್ಯರ್ಥಿಗಳನ್ನು ಬ್ಯಾಂಕ್‍ನ ಅವಶ್ಯಕತೆಗೆ ತಕ್ಕಂತೆ ದೇಶದ ಯಾವ ಸ್ಥಳಕ್ಕಾದರೂ ನೇಮಕ ಮಾಡಬಹುದಾಗಿದ್ದು, ಇದಕ್ಕೆ ಸಿದ್ಧರಿರುವ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ. ಖಾಲಿ ಇರುವ 32 ಹುದ್ದೆಗಳಲ್ಲಿ ಸಾಮಾನ್ಯವರ್ಗದ ಅಭ್ಯರ್ಥಿಗಳಿಗೆ 13, ಎಸ್‍ಸಿಗೆ 4, ಎಸ್‍ಟಿಗೆ 2, ಇತರ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 9, ಆರ್ಥಿಕವಾಗಿ ದುರ್ಬಲವಾಗಿರುವ ಅಭ್ಯರ್ಥಿಗಳಿಗೆ 4 ಹುದ್ದೆಗಳನ್ನು ಮೀಸಲಿರಿಸಲಾಗಿದೆ.
ಹುದ್ದೆ, ಸಂಖ್ಯೆ ವಿವರ
* ಸೆಕ್ಯುರಿಟಿ ಆಫೀಸರ್ - 27
* ಫೈರ್ ಆಫೀಸರ್ - 5
ಶೈಕ್ಷಣಿಕ ಅರ್ಹತೆ:
ಸೆಕ್ಯುರಿಟಿ ಆಫೀಸರ್ ಹುದ್ದೆಗೆ ಯಾವುದೇ ಪದವಿ, ಫೈರ್ ಆಫೀಸರ್ ಹುದ್ದೆಗೆ ನ್ಯಾಷನಲ್ ಫೈರ್ ಸರ್ವಿಸ್ ಕಾಲೇಜ್‍ನಲ್ಲಿ (ಎನ್‍ಎïಎಸ್‍ಸಿ) ಬಿಇ (ಫೈರ್)/ ಸ್ಟೇಷನ್ ಆಫೀಸರ್ ಕೋರ್ಸ್, ಸೇಫ್ಟಿ ಆ್ಯಂಡ್ ಫೈರ್ ಇಂಜಿನಿಯರಿಂಗ್‍ನಲ್ಲಿ ಬಿ.ಟೆಕ್, ಭಾರತ/ಯುಕೆಯಲ್ಲಿ ಇನ್‍ಸ್ಟಿಟ್ಯೂಟ್ ಆಫ್ ಫೈರ್ ಇಂಜಿನಿಯರ್ಸ್ ವಿಷಯದಲ್ಲಿ ಪದವಿ.
ವಯೋಮಿತಿ:
15.12.2020ಕ್ಕೆ ಸೆಕ್ಯುರಿಟಿ ಆಫೀಸರ್ ಹುದ್ದೆಗೆ ಕನಿಷ್ಠ 25 ವರ್ಷ, ಗರಿಷ್ಠ 40 ವರ್ಷ, Éೈರ್ ಆಫೀಸರ್ ಹುದ್ದೆಗೆ ಕನಿಷ್ಠ 23 ವರ್ಷ, ಗರಿಷ್ಠ 35 ವರ್ಷ. ಮೀಸಲಾತಿ ಅಭ್ಯರ್ಥಿಗಳಿಗೆ ನಿಯದನ್ವಯ 3 ರಿಂದ 5 ವರ್ಷ ವಯೋ ಸಡಿಲಿಕೆ ಇದೆ.
ವೇತನ ಶ್ರೇಣಿ:
42,020 ರೂ. ನಿಂದ 45,950 ರೂ. ಇರುತ್ತದೆ.
ಆಯ್ಕೆ ಪ್ರಕ್ರಿಯೆ:
ಅರ್ಜಿ ಸಲ್ಲಿಸಲ್ಲಿಸುವ ಅಭ್ಯರ್ಥಿಗಳ ಸಂಖ್ಯೆ ಆಧರಿಸಿ ಆನ್‍ಲೈನ್ ಪರೀಕ್ಷೆ, ಸೈಕೋಮೆಟ್ರಿಕ್ ಪರೀಕ್ಷೆ, ಗುಂಪು ಚರ್ಚೆ ನಡೆಸಿ ಶಾರ್ಟ್ ಲಿಸ್ಟ್ ಮಾಡಲಾದ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಆಹ್ವಾನಿಸಲಾಗುವುದು.
ಅರ್ಜಿ ಶುಲ್ಕ:
ಎಸ್‍ಸಿ, ಎಸ್‍ಟಿ, ಅಂಗವಿಕಲ ಅಭ್ಯರ್ಥಿಗಳಿಗೆ 100 ರೂ., ಸಾಮಾನ್ಯವರ್ಗ, ಇತರ ಹಿಂದುಳಿದ ವರ್ಗ, ಆರ್ಥಿಕವಾಗಿ ದುರ್ಬಲವಾಗಿರುವ ವರ್ಗದ ಅಭ್ಯರ್ಥಿಗಳಿಗೆ 600 ರೂ. ನಿಗದಿಯಾಗಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನ: 8.1.2021
ಅಧಿಸೂಚನೆಗೆ ಇಲ್ಲಿ ಕ್ಲಿಕ್ಕಿಸಿ: https://bit.ly/3pcm22I
ಮಾಹಿತಿಗೆ ಇಲ್ಲಿ ಕ್ಲಿಕ್ಕಿಸಿ: http://www.bankofbaroda.in/careers.htm
ಇನ್ನೂ ಹೆಚ್ಚಿನ ಉದ್ಯೋಗಗಳ ಮಾಹಿತಿಗೆ https://www.vijayavani.net/ ವಿಭಾಗದ ಅಂಕಣ ಕಾಲಂನಲ್ಲಿ ಉದ್ಯೋಗಮಿತ್ರ ಕ್ಲಿಕ್ಕಿಸಿ.