ಪೊಲೀಸ್​ ಇಲಾಖೆಯಲ್ಲಿ ವೈಜ್ಞಾನಿಕ ಅಧಿಕಾರಿ ಹುದ್ದೆ: 84 ಸ್ಥಾನಗಳಿಗೆ ಅರ್ಜಿ ಆಹ್ವಾನ

nyayavijnana
Published on

ಬೆಂಗಳೂರಿನ ನ್ಯಾಯ ವಿಜ್ಞಾನ ಪ್ರಯೋಗಾಲಯ ಮತ್ತು ಪ್ರಾದೇಶಿಕ ನ್ಯಾಯ ವಿಜ್ಞಾನ ಪ್ರಯೋಗಾಲಯ ಟಕಗಳಲ್ಲಿ ಖಾಲಿ ಇರುವ ಮಿಕ್ಕುಳಿದ ವೃಂದದ ವೈಜ್ಞಾನಿಕ ಅಧಿಕಾರಿ ಹುದ್ದೆಗೆ ನೇಮಕ ಮಾಡಿಕೊಳ್ಳಲಾಗುತ್ತಿದೆ. ಒಬ್ಬ ಅಭ್ಯರ್ಥಿ 3 ವಿಭಾಗಗಳಿಗೆ ಅರ್ಜಿ ಸಲ್ಲಿಸಲು ಅರ್ಹನಾಗಿದ್ದು, ಪ್ರತಿ ವಿಭಾಗಕ್ಕೂ ಪ್ರತ್ಯೇಕ ಅರ್ಜಿ ಶುಲ್ಕ ಪಾವತಿಸಬೇಕು.

ಒಟ್ಟು ಹುದ್ದೆಗಳು: 84

ನೇಮಕ ಮಾಡಿಕೊಳ್ಳುವ ವಿಭಾಗಗಳ ವಿವರ

* ಜೀವಶಾಸ್ತ್ರ ವಿಭಾಗ - 12

* ರಸಾಯನಶಾಸ್ತ್ರ ವಿಭಾಗ - 8

* ನಾಕೋರ್ಟಿಕ್ಸ್​ ವಿಭಾಗ - 2

* ಭೌತಶಾಸ್ತ್ರ ವಿಭಾಗ - 5

* ಡಿಎನ್​ಎ ವಿಭಾಗ - 2

* ಪ್ರಶ್ನಿತ ದಾಸ್ತಾವೇಜು ವಿಭಾಗ - 10

* ಅಗ್ನಿ ಅಸ್ತ್ರ ವಿಭಾಗ - 6

* ಫೊರೆನ್ಸಿಕ್​ ಮನೋವಿಜ್ಞಾನ - 1

* ಕಂಪ್ಯೂಟರ್​ ಫೊರೆನ್ಸಿಕ್​ ವಿಭಾಗ - 5

* ಮೊಬೈಲ್​ ಫೊರೆನ್ಸಿಕ್ಸ್​ ವಿಭಾಗ - 5

* ಆಡಿಯೋ ವಿಡಿಯೋ ವಿಭಾಗ - 5

* ವಿಷ ವಿಜ್ಞಾನ ವಿಭಾಗ - 21

* ೋಟೋಗ್ರಫಿ ವಿಭಾಗ - 2

ವಿದ್ಯಾರ್ಹತೆ: ವಿಜ್ಞಾನ, ಸಸ್ಯಶಾಸ್ತ್ರ/ ಪ್ರಾಣಿಶಾಸ್ತ್ರ/ ಜೀವ ರಸಾಯನ ಶಾಸ್ತ್ರ/ ಸೂಕ್ಷ$್ಮ ಜೀವ ವಿಜ್ಞಾನ/ ಜೀವ ವಿಜ್ಞಾನ/ ವಿಧಿ ವಿಜ್ಞಾನ, ಔಷಧಶಾಸ್ತ್ರ, ಮನಃಶಾಸ್ತ್ರ, ಗಣಕ ವಿಜ್ಞಾನ/ ವಿದ್ಯುನ್ಮಾನ/ ಭೌತಶಾಸ್ತ್ರ/ ಮಾಹಿತಿ ವಿಜ್ಞಾನ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ಕನಿಷ್ಠ ಶೇ.55 ಅಂಕ ಪಡೆದಿರಬೇಕು.

ವಯೋಮಿತಿ: ಸಾಮಾನ್ಯವರ್ಗಕ್ಕೆ 35 ವರ್ಷ, 2ಎ, 2ಬಿ, 3ಎ, 3ಬಿಗೆ ಗರಿಷ್ಠ 38 ವರ್ಷ, ಎಸ್ಸಿ, ಎಸ್ಟಿ, ಪ್ರವರ್ಗ 1ಕ್ಕೆ ಗರಿಷ್ಠ 40 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ.

ಆಯ್ಕೆ ಪ್ರಕ್ರಿಯೆ: ಲಿಖಿತ ಪರೀಕ್ಷೆ ಮೂಲಕ ಆಯ್ಕೆ ಮಾಡಲಾಗುವುದು. ಸಾಮಾನ್ಯ ಪತ್ರಿಕೆ, ನಿದಿರ್ಷ್ಟ ಪತ್ರಿಕೆಗಳಿರುತ್ತದೆ.

ಅರ್ಜಿ ಸಲ್ಲಿಕೆ ವಿಧಾನ: ಅಜಿರ್ಗಳನ್ನು ಇಲಾಖೆಯ ಅಧಿಕೃತ ವೆಬ್​ಸೈಟ್​ ಜಠಿಠಿಟಠ://್ಟಛ್ಚ್ಟ್ಠಿಜಿಠಿಞಛ್ಞಿಠಿ.ಠಟ.ಜಟಡ.ಜ್ಞಿ ನಲ್ಲಿ ಆನ್​ಲೈನ್​ ಮೂಲಕ ಸಲ್ಲಿಸಲು ಸೂಚಿಸಲಾಗಿದೆ. ಅಜಿರ್ಗಳನ್ನು ಖುದ್ದಾಗಿ ಅಥವಾ ಅಂಚೆ ಮೂಲಕ ಸಲ್ಲಿಸಲು ಅವಕಾಶ ಇರುವುದಿಲ್ಲ.

ಅರ್ಜಿ ಶುಲ್ಕ: ಸಾಮಾನ್ಯವರ್ಗ, ಪ್ರವರ್ಗ 2ಎ, 2ಬಿ, 3ಎ, 3ಬಿಗೆ ಸೇರಿದ ಅಭ್ಯರ್ಥಿಗಳಿಗೆ 250 ರೂ., ಎಸ್ಸಿ, ಎಸ್ಟಿ, ಪ್ರವರ್ಗ 1ಕ್ಕೆ ಸೇರಿದ ಅಭ್ಯರ್ಥಿಗಳಿಗೆ 100 ರೂ. ಶುಲ್ಕ ನಿಗದಿಪಡಿಸಲಾಗಿದೆ. ಶುಲ್ಕ ಪಾವತಿಸಲು 9.7.2021 ಕೊನೇ ದಿನ.

ವೇತನ: ಮಾಸಿಕ 40,900-78,200 ರೂ. ವೇತನ ಇದ್ದು, ಅಂಶದಾಯಿ ಪಿಂಚಣಿ ಸೌಲಭ್ಯ ಇದೆ.

ಅರ್ಜಿ ಸಲ್ಲಿಸಲು ಕೊನೇ ದಿನ: 7.7.2021

ಅಧಿಸೂಚನೆಗೆ: https://bit.ly/3ipXxib

ಮಾಹಿತಿಗೆ: https://recruitment.ksp.gov.in

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net