ಎಲ್ಲಾ ಪದವೀಧರರಿಗೆ ಜೈವಿಕ ತಂತ್ರಜ್ಞಾನ ಇಲಾಖೆಯಲ್ಲಿದೆ ಉದ್ಯೋಗ: 49 ಹುದ್ದೆಗಳಿಗೆ ಆಹ್ವಾನ

udyoga-it
Published on

ಜೈವಿಕ ತಂತ್ರಜ್ಞಾನ ಇಲಾಖೆಯ ಅಧೀನದಲ್ಲಿ ಕಾರ್ಯನಿರ್ವಹಿಸುವ ರೀಜನಲ್​ ಸೆಂಟರ್​ ಫಾರ್​ ಬಯೋಟೆಕ್ನಾಲಜಿ (ಆರ್​ಸಿಬಿ) ಜೈವಿಕ ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ವಿಶ್ವಮಟ್ಟದ ಶಿಕ್ಷಣ, ತರಬೇತಿ, ಸಂಶೋಧನೆ ನಡೆಸಿ ಉತ್ತಮ ಗುಣಮಟ್ಟದ ಮಾನವ ಸಂಪನ್ಮೂಲವನ್ನು ರಚಿಸುವ ಕಾರ್ಯದಲ್ಲಿ ತೊಡಗಿಕೊಂಡಿದೆ. ಪ್ರಸ್ತುತ ಸಂಸ್ಥೆಯಲ್ಲಿ ವಿವಿಧ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗುತ್ತಿದೆ.

ಒಟ್ಟು ಹುದ್ದೆಗಳು: 49

ಆರ್​ಸಿಬಿಯಲ್ಲಿನ ಹಲವು ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪ್ರತ್ಯೇಕ ಅರ್ಜಿ ಸಲ್ಲಿಸಬೇಕು. ಎಸ್​ಸಿ, ಎಸ್​ಟಿ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಆಹ್ವಾನಿಸಿದರೆ ಅವರಿಗೆ 2ನೇ ದರ್ಜೆಯ ರೈಲ್ವೆ ಪ್ರಯಾಣ ಭತ್ಯೆ ನೀಡಲಾಗುವುದು.

ಹುದ್ದೆ ವಿವರ
- ಇಂಡಿಯನ್​ ಬಯಾಲಾಜಿಕಲ್​ ಡೇಟಾ ಸೆಂಟರ್​ ೇಸ್​1
* ಸೀನಿಯರ್​ ಸೈಂಟಿಸ್ಟ್​ (ಬಯೋಇನ್​ಾರ್ಮಾಟಿಕ್ಸ್​/ ಐಟಿ) - 2
* ರಿಸರ್ಚ್​ ಕನ್ಸಲ್ಟಂಟ್​ - 2
* ಡೇಟಾಬೇಸ್​ ಮ್ಯಾನೇಜರ್​ - 4
* ಸೈಂಟಿಸ್ಟ್​ - 2
* ಡೇಟಾ ಬೇಸ್​ ಇಂಜಿನಿಯರ್​/ ಸ್ಟಾ್​ವೇರ್​ ಡೆವಲಪರ್​ - 10
* ಡೇಟಾ ಕ್ಯುರೇಟರ್​ - 12
* ಸಿಸ್ಟಂ ಅಡ್ಮಿನಿಸ್ಟ್ರೆಟರ್​ - 3
* ಸ್ಟೋರೇಜ್​ ಅಡ್ಮಿನಿಸ್ಟ್ರೆಟರ್​ - 2
* ನೆಟ್​ವರ್ಕ್​ ಅಡ್ಮಿನಿಸ್ಟ್ರೆಟರ್​ - 2
* ಸೀನಿಯರ್​ ಪ್ರೋಗ್ರಾಮರ್​ - 2
* ಅಡ್ಮಿನಿಸ್ಟ್ರೆಟೀವ್​ ಆಫೀಸರ್​ - 1
* ಪ್ರೋಗ್ರಾಮರ್​ - 3
* ಟೆಕ್ನಿಕಲ್​ ಅಸಿಸ್ಟೆಂಟ್​-ಎ - 1

- ಬಿಎಸ್​ಸಿ ಬಯೋನೆಸ್ಟ್​ ಬಯೋ-ಇನ್​ಕ್ಯುಬೇಟರ್​ (ಬಿಬಿಬಿ)
* ಟೆಕ್ನಿಕಲ್​ ಅಸಿಸ್ಟೆಂಟ್​ - 1

- ಡಿಬಿಟಿ-ಎಚ್​ಆರ್​ಡಿ ಪ್ರಾಜೆಕ್ಟ್​ ಆ್ಯಂಡ್​ ಮ್ಯಾನೇಜ್​ಮೆಂಟ್​ ಯೂನಿಟ್​ (ಪಿಎಂಯು)
* ಗ್ರಾಂಟ್ಸ್​ ಅಡ್ವೈಸರ್​ - 1
* ಸೀನಿಯರ್​ ಅಕೌಂಟ್ಸ್​ ಅಸಿಸ್ಟೆಂಟ್​ - 1

ವಿದ್ಯಾರ್ಹತೆ: ಬಿಕಾಂ/ಬಿಬಿಎ/ಸಿಎ/ಐಸಿಡಬ್ಲುಎ, ಲೈಫ್‌ ಸೈನ್ಸ್​ನಲ್ಲಿ ಪದವಿ, ಸಿಎಸ್​/ ಐಟಿ/ ಇ ಆ್ಯಂಡ್​ ಸಿಯಲ್ಲಿ ಬಿ.ಟೆಕ್​/ಎಂಎಸ್ಸಿ/ ಎಂಸಿಎ, ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ, ಪಿಎಚ್​ಡಿ ಮಾಡಿದ್ದು, ಕಂಪ್ಯೂಟರ್​ ಜ್ಞಾನ ಅವಶ್ಯ. ಎಲ್ಲ ಹುದ್ದೆಗಳಿಗೂ ವೃತ್ತಿ ಅನುಭವ ಕೇಳಲಾಗಿದೆ.

ವಯೋಮಿತಿ: ಹುದ್ದೆಗಳಿಗೆ ಅನುಗುಣವಾಗಿ ಗರಿಷ್ಠ 30, 35 ರಿಂದ 50 ವರ್ಷ ನಿಗದಿಪಡಿಸಲಾಗಿದೆ. ಮೀಸಲಾತಿ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮದನ್ವಯ ವಯೋ ಸಡಿಲಿಕೆ ಇದೆ.

ವೇತನ: ಹುದ್ದೆಗಳಿಗೆ ಅನುಗುಣವಾಗಿ ಮಾಸಿಕ 40,000 ರೂ. ನಿಂದ 2,04,416 ರೂ. ವೇತನ ನಿಗದಿಪಡಿಸಲಾಗಿದೆ.

ಅರ್ಜಿ ಸಲ್ಲಿಸಲು ಕೊನೇ ದಿನ: 31.5.2021
ಅಧಿಸೂಚನೆಗೆ: https://bit.ly/3bkPUW8
ಮಾಹಿತಿಗೆ: http://www.rcb.res.in

ಹೆಚ್ಚಿನ ಉದ್ಯೋಗ ಸುದ್ದಿಗೆ ಕ್ಲಿಕ್ಕಿಸಿ: https://www.vijayavani.net/category/%e0%b2%89%e0%b2%a6%e0%b3%8d%e0%b2%af%e0%b3%8b%e0%b2%97-%e0%b2%ae%e0%b2%bf%e0%b2%a4%e0%b3%8d%e0%b2%b0/

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net