ಉಡುಪಿಯ ಮರವಂತೆ ಸಮುದ್ರದ ಅಲೆಗಳ ರಭಸಕ್ಕೆ ಕೊಚ್ಚಿ ಹೋದ ಕಾರು: ಓರ್ವನ ಬಲಿ, ಇನ್ನೋರ್ವ ನಾಪತ್ತೆ

udupi
ವೀರಾಜ್ ಆಚಾರ್ಯ ಹಾಗೂ ಕಾರು
Published on

ಉಡುಪಿ: ಉಡುಪಿ ಜಿಲ್ಲೆ ಬೈಂದೂರು ತಾಲೂಕು ವ್ಯಾಪ್ತಿಯ ಮರವಂತೆ ಬೀಚ್​ನಲ್ಲಿ ಸಮುದ್ರದಲ್ಲಿ ಕಾರು ಉರುಳಿ ಓರ್ವ ಮೃತಪಟ್ಟಿರುವ ಘಟನೆ ನಡೆದಿದೆ.

ಶನಿವಾರ ತಡರಾತ್ರಿ ಈ ಘಟನೆ ಸಂಭವಿಸಿದೆ. ಘಟನೆಯಲ್ಲಿ ವೀರಾಜ್ ಆಚಾರ್ಯ(28) ಮೃತಪಟ್ಟವರು. ಇವರು ಕೋಟೇಶ್ವರ ಗ್ರಾಮದ ನಿವಾಸಿ.

ನಿನ್ನೆ (ಶನಿವಾರ) ಸಂಜೆ ವೇಳೆಗೆ ನಾಲ್ವರು ಕಾರಿನಲ್ಲಿ ತೆರಳಿದ್ದರು. ಈ ಸಮಯದಲ್ಲಿ ಮರವಂತೆ ಬೀಚ್ ಬಳಿ ರಾಷ್ಟ್ರೀಯ ಹೆದ್ದಾರಿ 66 ರಿಂದ ಸಮುದ್ರ ಒಳಗೆ ಕಾರು ನುಗ್ಗಿದೆ. ಸಮುದ್ರದ ಅಲೆಗಳ ರಭಸಕ್ಕೆ ಕಾರು ಕೊಚ್ಚಿಹೋಗಿ ಈ ಘಟನೆ ಸಂಭವಿಸಿದೆ.

ರಕ್ಷಣಾ ಕಾರ್ಯಚರಣೆ ನಡೆಸಿದ ಬೈಂದೂರು ಅಗ್ನಿಶಾಮಕ ದಳದವರು ಕಾರಿನ ಹಿಂಬದಿ ಸೀಟ್​ನಲ್ಲಿದ್ದ ಇಬ್ಬರ ರಕ್ಷಣೆ ಮಾಡಿದ್ದಾರೆ. ಸಮುದ್ರಪಾಲಾದ ಓರ್ವನಿಗಾಗಿ ಹುಡುಕಾಟ ನಡೆದಿದೆ. ಸಮುದ್ರ ಅಲೆಗಳ ಅಬ್ಬರದಿಂದಾಗಿ ರಕ್ಷಣಾ ಕಾರ್ಯಕ್ಕೆ ಅಡ್ಡಿಯುಂಟಾಗಿದೆ. ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ. ಕಳೆದ ಒಂದು ವಾರದಿಂದ ಮಳೆ ಮತ್ತು ಗಾಳಿ ವೇಗ ಹೆಚ್ಚಾಗಿದ್ದರಿಂದ ಸಮುದ್ರ ಪ್ರಕ್ಷುಬ್ದಗೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net