ಮಂಚದ ಹಾಸಿಗೆ ಕೆಳಗೆ ಸುರಂಗ! ರಾತ್ರಿ ಎಸ್ಕೇಪ್‌ ಆಗಿ ಬೆಳಗ್ಗೆ ಬಂದ್ರೂ ಗೊತ್ತಾಗಲ್ಲ- ಇಲ್ಲಿದೆ ನೋಡಿ ವಿಡಿಯೋ

tunnel
Published on

ಹಿಂದಿನ ಕಾಲದಲ್ಲಿ ಕೆಲವು ಮನೆಗಳಲ್ಲಿ ಇಲ್ಲವೇ ಅರಮನೆಗಳಲ್ಲಿ ರಹಸ್ಯ ಕೊಠಡಿಗಳನ್ನು, ಸುರಂಗ ಮಾರ್ಗಗಳನ್ನು ನಿರ್ಮಿಸುತ್ತಿದ್ದುದು ಎಲ್ಲರಿಗೂ ತಿಳಿದದ್ದೇ. ಇನ್ನು ಅಕ್ರಮ ಚಟುವಟಿಕೆ ನಡೆಸುವವರು ಕೂಡ ಯಾರಿಗೂ ಕಾಣದಂತೆ ತಮ್ಮ ಬಂಗಲೆಯಲ್ಲಿ ರಹಸ್ಯ ಎನಿಸುವ ಕೊಠಡಿಗಳನ್ನು ನಿರ್ಮಿಸುವುದು ಉಂಟು. ಆದರೆ ಇವೆಲ್ಲವುಗಳಿಗಿಂತಲೂ ಸ್ವಲ್ಪ ಭಿನ್ನ ಎನಿಸುವ ಸುರಂಗ ಮಾರ್ಗವೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್‌ ಆಗಿದೆ.

ವ್ಯಕ್ತಿಯೊಬ್ಬ ತಮ್ಮ ಮಂಚದ ಹಾಸಿಗೆ ಕೆಳಗಡೆಯೇ ಸುರಂಗ ಮಾರ್ಗವನ್ನು ನಿರ್ಮಿಸಿಕೊಂಡಿದ್ದಾನೆ! ರಾತ್ರೋರಾತ್ರಿ ಗುಟ್ಟಾಗಿ ಮಂಚದ ಕೆಳಗಿನಿಂದ ಎಸ್ಕೇಪ್‌ ಆದರೂ ಯಾರಿಗೂ ತಿಳಿಯದ ಮಾರ್ಗ ಇದಾಗಿದೆ.
ಈ ವಿಡಿಯೋ ಇದೀಗ ಸಾಕಷ್ಟು ವೈರಲ್‌ ಆಗಿದೆ. ಮಂಚದ ಹಾಸಿಗೆ ಕೆಳಗೆ ಕೆಲವು ಮೆಟ್ಟಿಲುಗಳಿವೆ. ನಂತರ ಮೆಟ್ಟಿಲುಗಳಿಂದ ಕೆಳಗೆ ಇಳಿದರೆ ಸಿಗುವುದು ಸುರಂಗ ಮಾರ್ಗ. ಇದು ರೂಮಿನಷ್ಟೇ ಉದ್ದವಿದ್ದು, ಯಾರಾದರೂ ಒಬ್ಬರು ಸುರಂಗದಲ್ಲಿ ಆರಾಮವಾಗಿ ಸಾಗಬಹುದು. ಇದರ ಹಳದಿ ದೀಪ ಅಳವಡಿಸಲಾಗಿದೆ. ಸುರಂಗ ಮಾರ್ಗ ಕೊನೆಗೆ ಎಲ್ಲಿ ಹೋಗಿ ಮುಟ್ಟುತ್ತದೆ ಎನ್ನುವುದು ವಿಡಿಯೋದಲ್ಲಿ ತಿಳಿಯುತ್ತಿಲ್ಲ!

ಈ ಹಿಂದೆ ಕೂಡ ಒಬ್ಬ ವ್ಯಕ್ತಿ ತನ್ನ ಪತ್ನಿಗೆ ತಿಳಿಯದಂತೆ ಗುಟ್ಟಾಗಿ ಪ್ರೇಯಸಿಯ ಮನೆಗೆ ಹೋಗಲು ಮಲಗುವ ಕೊಠಡಿಯಿಂದ ಪ್ರೇಯಸಿಯ ಬೆಡ್‌ರೂಮ್‌ವರೆಗೆ ಇದೇ ರೀತಿ ಸುರಂಗ ಮಾರ್ಗ ತೋಡಿಕೊಂಡಿದ್ದು ಕೂಡ ಜಾಲತಾಣದಲ್ಲಿ ವೈರಲ್‌ ಆಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net