ಗಿಳಿ ಹುಡುಕಿದವರಿಗೆ 80 ಸಾವಿರ ರೂ. ಬಹುಮಾನ ನೀಡಿದ್ದ ತುಮಕೂರಿನ ದಂಪತಿಯಿಂದ ಮತ್ತೊಂದು ಮಹತ್ವದ ನಿರ್ಧಾರ

gili
Published on

ತುಮಕೂರು: ತಮ್ಮ ಮುದ್ದಿನ ಗಿಳಿಯನ್ನು ಕಳೆದುಕೊಂಡು ನಂತರ ಗಿಳಿ ಹುಡುಕಿ ಕೊಟ್ಟವರಿಗೆ 80 ಸಾವಿರ ಘೋಷಿಸಿ, ಅದರಂತೆಯೇ ನಡೆದುಕೊಂಡಿದ್ದ ತುಮಕೂರಿನ ದಂಪತಿ ಈಗ ಮಹತ್ವದ ನಿರ್ಧಾರ ಮಾಡಿದ್ದು, ಅದನ್ನು ಕಾರ್ಯರೂಪಕ್ಕೆ ತಂದಿದ್ದಾರೆ.

ತಮ್ಮ ಮನೆಯ ಸದಸ್ಯರಂತೆ ಸಾಕಿರುವ ಎರಡು ಗಿಳಿಗಳನ್ನು ಗುಜರಾತಿನ ಸರ್ದಾರ್ ವಲ್ಲಬಾಯ್ ಪಟೇಲ್ ಮೃಗಾಲಯಕ್ಕೆ ದಾನ ಮಾಡಿದ್ದಾರೆ ಅರ್ಜುನ್​ ಮತ್ತು ರಂಜನಾ ದಂಪತಿ.

ರುಸ್ತುಮಾ ಮತ್ತು ರಿಯೋ ಹೆಸರಿನ ಎರಡು ಗಿಣಿಗಳನ್ನು ಈಗ ಅವರು ದಾನ ಮಾಡಿದ್ದಾರೆ. ಈ ಹಿಂದೆ ರುಸ್ತುಮಾ ಹೆಸರಿನ ಗಿಳಿ ಕಳೆದುಹೋಗಿತ್ತು. ಗಿಳಿಹುಡುಕಿ ಕೊಟ್ಟರೆ ಬಹುಮಾನ ನೀಡುವುದಾಗಿ ಜಾಹಿರಾತು ನೀಡಿ ಸುದ್ದಿಯಾಗಿದ್ದರು ಈ ದಂಪತಿ. ಒಂದು ವಾರದ ಬಳಿಕ ಗಿಳಿ ಸಿಕ್ಕಿತ್ತು.

ತಾವು ನೀಡಿದ್ದ ಜಾಹೀರಾತಿನಂತೆ ಗಿಳಿ ಹುಡುಕಿಕೊಟ್ಟ ಕುಟುಂಬಕ್ಕೆ 80 ಸಾವಿರ ಬಹುಮಾನ‌ ನೀಡಿದ್ದರು ಗಿಣಿ ಮಾಲೀಕ ಅರ್ಜುನ್. ಈಗ ಇಂಥದ್ದೊಂದು ಮಹತ್ವದ ನಿರ್ಧಾರ ಮಾಡಿದ್ದು, ಗಿಳಿಗಳನ್ನು ದಾನ ಮಾಡಿದ್ದಾರೆ. ಅದಕ್ಕೆ ಕಾರಣ, ಗಿಣಿ ಮತ್ತೆ ತಪ್ಪಿಸಿಕೊಳ್ಳಬಹುದು ಎಂಬ ಭಯ ಎನ್ನುತ್ತಾರೆ ಮಾಲೀಕರು.

ನೋವಿನಿಂದಲ್ಲೇ ಗಿಣಿಯನ್ನು ಸರ್ದಾರ್ ವಲ್ಲಬಾಯ್ ಪಟೇಲ್ ಮೃಗಾಲಯಕ್ಕೆ ಹಸ್ತಾಂತರ ಮಾಡಲಾಗಿದೆ. ಆರು ದಿನಗಳ‌ ಹಿಂದೆ ‌ಮೃಗಾಲಯಕ್ಕೆ ಹಸ್ತಾಂತರ ಮಾಡಲಾಗಿದೆ. ಗಿಣಿಗ: ನೆನಪಿಗಾಗಿ ಎರಡು ಪುಕ್ಕಗಳಲ್ಲಿ ಕಿವಿ ಓಲೆ ಮಾಡಿಕೊಂಡಿದ್ದಾರೆ ರಂಜನಾ.

ಆಫೀಕನ್ ಗ್ರೇ ತಳಿಯ ಗಿಳಿಯೊಂದಕ್ಕೆ 20 ಸಾವಿರ ಕೊಟ್ಟು ಈ ಮೊದಲು ಇವರು ಖರೀದಿಸಿದ್ದರು. ಒಂದು ಗಿಳಿ ಕಳೆದು ಹೋದಾಗ ಒಂದು ವಾರ ಕಾಲ ಹುಡುಕಾಟ ನಡೆಸಿದ್ದರು. ಗಿಳಿ ದೊರಕಿದ ಬಳಿಕ ಮೃಗಾಲಯಕ್ಕೆ ದಾನ ನೀಡಿದ್ದಾರೆ. ಗಿಳಿ ಮೃಗಾಲಯಕ್ಕೆ ಹೋದ ಬಳಿಕ ಕುಟುಂಬಸ್ಥರು ತುಂಬಾ ದುಃಖದಲ್ಲಿದ್ದಾರೆ (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net