ಟ್ರಂಪ್​ರನ್ನ ಜೈಲಲ್ಲಿ ಹಾಕಿ ಎಲ್ಲರೂ ರೇಪ್​ ಮಾಡಬೇಕು- ನಟಿಯಿಂದ ಹೀಗೊಂದು ಟ್ವೀಟ್​

trump
Published on

ವಾಷಿಂಗ್ಟನ್​: ಡೊನಾಲ್ಡ್​ ಟ್ರಂಪ್​ ಅವರ ಮೇಲೆ ಸದಾ ಒಂದಿಲ್ಲೊಂದು ರೀತಿಯಲ್ಲಿ ಕೆಂಡ ಕಾರುತ್ತಿರುವ ನಟಿ ಡೆಬ್ರಾ ಮೆಸ್ಸಿಂಗ್​ ಇದೀಗ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಜೋ ಬೈಡೆನ್​ ಅವರೇ ಅಧ್ಯಕ್ಷರು ಎಂದು ಚುನಾವಣಾ ಆಯೋಗ ಘೋಷಣೆಯ ಬೆನ್ನಲ್ಲೇ ಇದೀಗ ಡೆಬ್ರಾ ಟ್ರಂಪ್​ ವಿರುದ್ಧ ಅಸಮಾಧಾನವನ್ನು ಹೊರಹಾಕಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

"ಡೊನಾಲ್ಡ್ ಟ್ರಂಪ್ ಅಧಿಕಾರಾವಧಿ ಮುಕ್ತಾಯಗೊಂಡು ಶ್ವೇತಭವನದಿಂದ ಅವರು ನಿರ್ಗಮಿಸುತ್ತಿದ್ದಂತೆಯೇ ಅವರನ್ನು ಜೈಲಿನಲ್ಲಿ ಇರಿಸಬೇಕು. ಅಲ್ಲಿ ಎಲ್ಲ ಕೈದಿಗಳಿಗೆ ಇವರು ಬಾಯ್​ಫ್ರೆಂಡ್​ ಆಗಬೇಕು. ಎಲ್ಲರೂ ಸೇರಿ ಟ್ರಂಪ್​ ಅವರನ್ನು ರೇಪ್ ಮಾಡಬೇಕು" ಎಂದು ಡೆಬ್ರಾ ಮೆಸ್ಸಿಂಗ್ ಟ್ವೀಟ್ ಮಾಡಿದ್ದಾರೆ.

ಈ ಟ್ವೀಟ್​ ಅನ್ನು ಖುದ್ದು ಟ್ರಂಪ್​ ಅವರಿಗೂ ಟ್ಯಾಗ್ ಮಾಡಿದ್ದಾರೆ ನಟಿ ಡೆಬ್ರಾ. ಅದರ ಜತೆಗೆ ಕ್ಯಾಪ್ಷನ್​ ಬರೆದಿರುವ ಈಕೆ, ನೀವು ದುರ್ಬಲ, ಪ್ರತೀಕಾರಕ್ಕೆ ಬಯಸುವ ವ್ಯಕ್ತಿ, ಕ್ರಿಮಿನಲ್​, ಅಸಮರ್ಥ, ಅವಿವೇಕಿ ಮಾತ್ರವಲ್ಲದೇ ಭಯಭೀತಗೊಂಡಿರುವ ವ್ಯಕ್ತಿ ಎಂದು ನಿಂದಿಸಿದ್ದಾರೆ.

ನಿಮ್ಮನ್ನು ಜೈಲಿನಲ್ಲಿ ಇಡುತ್ತಾರೆ. ಅಲ್ಲಿರುವ ಕೈದಿಗಳಿಗೆ ನೀವು ಬಾಯ್​ಫ್ರೆಂಡ್​ ಆಗುತ್ತೀರಿ. ಎಲ್ಲರೂ ಸೇರಿ ನಿಮ್ಮನ್ನು ರೇಪ್​ ಮಾಡಬೇಕು ಎಂದು ಬರೆದಿದ್ದಾರೆ. ಈ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ನಂತರ ಈಗ ಆಕೆಯ ಟ್ವೀಟ್ ಡಿಲೀಟ್ ಮಾಡಲಾಗಿದೆ. ಆದರೆ ಅದರ ಸ್ಕ್ರೀನ್​ಷಾಟ್​ ಎಲ್ಲೆಡೆ ಹರಿದಾಡುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net