More

    ಕರೊನಾ ಗುಣಮುಖ: ಟ್ರಂಪ್ ಡಿಸ್​ಚಾರ್ಜ್​- ಶ್ವೇತಭವನಕ್ಕೆ ಕಾಲಿಡುತ್ತಲೇ ಮಾಡಿದ್ದು ಹುಬ್ಬೇರಿಸುವ ಕೆಲಸ!

    ವಾಷಿಂಗ್ಟನ್‌: ಕರೊನಾ ವೈರಸ್ ಸೋಂಕಿಗೆ ತುತ್ತಾಗಿ ಕಳೆದ ನಾಲ್ಕು ದಿನಗಳಿಂದ ಅಮೆರಿಕದ ಮಿಲಿಟರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುಣಮುಖರಾಗಿದ್ದಾರೆ.

    ಇಂದು ಅವರನ್ನು ಆಸ್ಪತ್ರೆಯಿಂದ ಬಿಡುಗಡೆಮಾಡಲಾಗಿದೆ. ಈ ಹಿಂದೆ ತಾವು ಮಾಸ್ಕ್​ ಎಂದಿಗೂ ಧರಿಸುವುದೇ ಇಲ್ಲ ಎನ್ನುವ ಮೂಲಕ ವಿವಾದಕ್ಕೆ ಗುರಿಯಾಗಿದ್ದ ಟ್ರಂಪ್​, ಅಪರೂಪಕ್ಕೆ ಮಾಸ್ಕ್​ ಧರಿಸಿದ್ದರು. ಇದೇ ವೇಳೆ ಕರೊನಾ ಸೋಂಕಿಗೂ ಗುರಿಯಾದರು.

    ಆದರೆ ಇದೀಗ ಮತ್ತದೇ ಕೆಲಸವನ್ನು ಮಾಡಿದ್ದಾರೆ. ಅದೇನೆಂದರೆ , ಆಸ್ಪತ್ರೆಯಿಂದ ಬಿಡುಗಡೆಯಾಗಿ ಶ್ವೇತ ಭವನ ಪ್ರವೇಶಿಸುತ್ತಲೇ ತಾವು ಧರಿಸಿದ್ದ ಮಾಸ್ಕ್ ಅನ್ನು ತೆಗೆದಿದ್ದಾರೆ. ಶ್ವೇತ ಭವನದಲ್ಲಿ ಮಾಸ್ಕ್ ಇಲ್ಲದೇ ಅವರು ಸಂಚಾರ ನಡೆಸುತ್ತಿರುವುದು ಅಚ್ಚರಿಗೆ ಕಾರಣವಾಗಿದೆ.

    ಇದನ್ನೂ ಓದಿ: ದಸರಾ ಖಾಸಗಿ ದರ್ಬಾರು ನೋಡುವ ಭಾಗ್ಯ ಈ ಬಾರಿ ಯಾರಿಗೂ ಇಲ್ಲ

    ಸೋಮವಾರ ಟ್ರಂಪ್ ಅಭಿಮಾನಿಗಳಿಗೆ ಅಚ್ಚರಿ ನೀಡುವುದಾಗಿ ಟ್ವೀಟರ್‌ನಲ್ಲಿ ವಿಡಿಯೋ ಹಾಕಿದ್ದರು. ಆಸ್ಪತ್ರೆಯಿಂದ ಕಾರಿನಲ್ಲಿ ಹೊರ ಬಂದು ಆಸ್ಪತ್ರೆ ಬಳಿ ಜಮಾವಣೆಗೊಂಡಿದ್ದ ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸಿದ್ದರು. ಅದರಂತೆ ಇದೀಗ ಬಿಡುಗಡೆಯಾಗಿ ಹೊರಕ್ಕೆ ಬಂದಿದ್ದಾರೆ.
    ನಂತರ ನೆರೆದಿದ್ದ ಮಾಧ್ಯಮ ಪ್ರತಿನಿಧಿಗಳನ್ನು ಉದ್ದೇಶಿಸಿ ತಾವು ಶೀಘ್ರವೇ ಪ್ರಚಾರಕ್ಕೆ ಮರಳುವುದಾಗಿ ಹೇಳಿದ್ದಾರೆ. ಕರೊನಾ ವೈರಸ್ ನಿಮ್ಮನ್ನು ಸೋಲಿಸಲು ಬಿಡಬೇಡಿ. ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಿ ಎಂದೂ ಸಲಹೆ ನೀಡಿದ್ದಾರೆ.

    ಆಸ್ಪತ್ರೆಯಲ್ಲಿದ್ದಾಗಲೇ ಸರಣಿ ಟ್ವೀಟ್‌ಗಳನ್ನು ಡೊನಾಲ್ಡ್ ಟ್ರಂಪ್ ಮಾಡುತ್ತಿದ್ದರು. ಅವುಗಳಲ್ಲಿ ರಾಜಕೀಯವೇ ಹೆಚ್ಚಾಗಿತ್ತು. ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆ ಪ್ರಚಾರ ಕಾರ್ಯ ನಡೆಯುತ್ತಿದೆ. ಟ್ರಂಪ್ ಆಸ್ಪತ್ರೆಗೆ ದಾಖಲಾದ ಹಿನ್ನಲೆಯಲ್ಲಿ ಅವರ ಪ್ರಚಾರ ಕಾರ್ಯಕ್ರಮಗಳನ್ನು ಮುಂದೂಡಲಾಗಿತ್ತು.

    ಮುತ್ತಪ್ಪ ರೈ ಮಗನಿಗೆ ಡ್ರಗ್ಸ್​ ನಂಟು? ನಸುಕಿನಲ್ಲಿಯೇ ಸಿಸಿಬಿ ಶಾಕ್​- ಮನೆ ಮೇಲೆ ದಾಳಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts