ನನ್ನಂತೆ ಹೊಳೆಯಬೇಕೆ? ಹಾಗಿದ್ದರೆ ಹೀಗೆ ಮಾಡಿ ಎಂದಳು ಈ ಸುಂದರಿ: ಓದಿ 'ವ್ಯಾಕ್'​ ಅನ್ನಬೇಡಿ!

dog
Published on

ವಾಷಿಂಗ್ಟನ್​: ಸುಂದರವಾಗಿ ಕಾಣಬೇಕೆಂಬ ಆಸೆ ಯಾರಿಗೆ ತಾನೆ ಇರಲ್ಲ ಹೇಳಿ? ಪುರುಷರಾಗಲಿ, ಮಹಿಳೆಯರಾಗಲಿ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೂ ಸುಂದರವಾಗಿ ಕಾಣಿಸಬೇಕು ಎಂಬ ಆಸೆ ಇದ್ದೇ ಇರುತ್ತದೆ. ಕೆಲವರು ಈ ಬಗ್ಗೆ ಅಷ್ಟಾಗಿ ತಲೆಕೆಡಿಸಿಕೊಳ್ಳದಿದ್ದರೆ, ಹಲವರು ಸುಂದರ ತ್ವಚೆಗಾಗಿ ಮಾಡದ ಸರ್ಕಸ್​ಗಳೇ ಇಲ್ಲ ಎನ್ನಬಹುದೇನೋ.

ಗೋಮೂತ್ರ ಕುಡಿಯುವುದನ್ನು ನೀವು ಕೇಳಿರುತ್ತೀರಿ. ಹಲವಾರು ಕಾಯಿಲೆಗಳನ್ನು ಗೋಮೂತ್ರ ವಾಸಿ ಮಾಡಬಲ್ಲುದು ಎಂದು ವೈಜ್ಞಾನಿಕವಾಗಿಯೂ ಸಾಬೀತಾಗಿದೆ. ಇನ್ನು ಕೆಲವರು ಸ್ವಮೂತ್ರವನ್ನೂ ಕುಡಿಯುತ್ತಾರೆ. ಇದರ ಬಗ್ಗೂ ನೀವು ಕೇಳಿರಬಹುದು. ಆದರೆ ನಾಯಿಯ ಮೂತ್ರ ಕುಡಿಯುವುದನ್ನು ಕೇಳಿದ್ದೀರಾ?

ಇದನ್ನು ಕೇಳಿ ಶೀ... ವ್ಯಾಕ್​... ಥೂ... ಎಂದೆಲ್ಲಾ ನಿಮ್ಮ ಮುಖವನ್ನು ಕಿವುಚಿಕೊಂಡಿರಲು ಸಾಕು. ಆದರೆ ಈ ಫೋಟೋದಲ್ಲಿ ಕಾಣುತ್ತಿರುವ ಯುವತಿಯ ಸೌಂದರ್ಯದ ಗುಟ್ಟು ಇದೇ ಮೂತ್ರವಂತೆ! ಅಚ್ಚರಿ ಎನಿಸುತ್ತದೆ ಅಲ್ವಾ? ಆದರೆ ಈಕೆ ತನ್ನ ಕಲೆ ರಹಿತ, ನಳನಳಿಸುವ ತ್ವಚೆಯ ಗುಟ್ಟನ್ನು ಬಿಟ್ಟುಕೊಟ್ಟಿದ್ದು ತಾನು ಪ್ರತಿನಿತ್ಯವೂ ನಾಯಿಯ ಮೂತ್ರವನ್ನು ಕುಡಿಯುವುದಾಗಿ ಹೇಳಿದ್ದಾಳೆ.

ಅಂದಹಾಗೆ ಅಮೆರಿಕದ ಈ ಯುವತಿಯ ಹೆಸರು ಲೀನಾ. ನಾನು ನಾಯಿ ಸಾಕಿದ್ದು, ಅದರ ಮೂತ್ರವನ್ನು ನಿಯಮಿತವಾಗಿ ಕುಡಿಯುತ್ತಿದ್ದೇನೆ. ನಾಯಿ ಮೂತ್ರದಲ್ಲಿ ವಿಟಮಿನ್ ಎ, ವಿಟಮಿನ್ ಇ ಮತ್ತು ಕ್ಯಾಲ್ಸಿಯಂ ಗುಣಗಳಿವೆ ಎಂದು ಹೇಳಿಕೊಂಡಿದ್ದಾಳೆ ಲೀನಾ. ನಾಯಿಯ ಮೂತ್ರವನ್ನು ಕುಡಿಯುವುದರಿಂದ ಕ್ಯಾನ್ಸರ್ ಅನ್ನು ಹೆಚ್ಚಿನ ಪ್ರಮಾಣದಲ್ಲಿ ತಪ್ಪಿಸಬಹುದು ಎನ್ನುತ್ತಾಳೆ ಈಕೆ.

ಕೆಲವು ವಾರಗಳ ಹಿಂದೆ ತನ್ನ ಮುಖದ ಮೇಲೆ ಅಸಹ್ಯ ರೀತಿಯಲ್ಲಿ ಗುಳ್ಳೆಗಳು ಆಗಿದ್ದವು. ಯಾರೋ ನೀಡಿದ್ದ ಸಲಹೆಯಂತೆ ನನ್ನ ಸಾಕುನಾಯಿ ಮೂತ್ರ ಕುಡಿಯಲು ಶುರು ಮಾಡಿದೆ. ಮೊದಮೊದಲ ವಿಚಿತ್ರ ಎನಿಸಿದರೂ, ಕ್ರಮೇಣ ಗುಳ್ಳೆಗಳೆಲ್ಲಾ ಮಾಯವಾಗಿ ಇದೀಗ ಸುಂದರಿಯಾಗಿ ಕಾಣಿಸುತ್ತಿದ್ದೇನೆ ಎಂದಿದ್ದಾಳೆ ಈಕೆ.

ಸದ್ಯ ಈ ವಿಷಯ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net